ಕೊರಟಗೆರೆ : ಬೈಕ್ ಡಿಕ್ಕಿ- ಪಾದಚಾರಿ ಸಾವು!

ಕೊರಟಗೆರೆ:

     ದ್ವಿಚಕ್ರ ವಾಹನವೊಂದು ರಸ್ತೆ ಬದಿ ಚಲಿಸುತ್ತಿದ್ದ ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೊರಟಗೆರೆ ಪಟ್ಟಣದ ಜೆಟ್ಟಿಅಗ್ರಹಾರ ರಸ್ತೆ ಬಳಿ ನಡೆದಿದೆ.

      ಜೆಟ್ಟಿಅಗ್ರಹಾರ ಗ್ರಾಮದ ವಾಸಿ ನರಸಿಂಹಯ್ಯ(60) ಮೃತಪಟ್ಟ ದುದೈ೯ವಿ. ಇವರು ಕೈಮರದ ಆಶ್ರಮಕ್ಕೆ ಭೇಟಿ ನೀಡಿ ಮರಳಿ ನಡೆದುಕೊಂಡು ಮನೆಗೆ ಬರುತ್ತಿರುವ ವೇಳೆ ಪಾದಚಾರಿಗೆ ದ್ವೀಚಕ್ರ ವಾಹನ ಏಕಾಏಕಿ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಅಜ್ಜಿಹಳ್ಳಿ ಗ್ರಾಮದ ವಾಸಿಯಾದ ದ್ವಿಚಕ್ರ ವಾಹನ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. 

      ಅಪಘಾತ ನಡೆದ ಸ್ಥಳಕ್ಕೆ ಕೊರಟಗೆರೆ ಆರಕ್ಷಕ ಉಪನೀರಿಕ್ಷಕ ಮಂಜುನಾಥ ಭೇಟಿ ಪರಿಶೀಲನೆ ನಡೆಸಿದ್ದು, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link