ಬ್ಯಾಡಗಿ:
ಏ.23 ರಂದು ನಡೆಯಲಿರುವ ಹಾವೇರಿ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಬ್ಯಾಡಗಿ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆಯ ಸಿಬ್ಬಂದಿಗಳು ಮತ ಪೆಟ್ಟಿಗೆಗಳೊಂದಿಗೆ ವಿವಿಧ ಗ್ರಾಮಗಳಿಗೆ ಸೋಮವಾರ ಸಾರಿಗೆ ಬಸ್‍ಗಳ ಮೂಲಕ ತೆರಳಿದರು.ಈಗಾಗಲೇ ಮತಕ್ಷೇತ್ರದಲ್ಲಿ ಸುಗಮ ಮತದಾನಕ್ಕೆ ತಾಲೂಕಾ ಆಡಳಿತ ಸನ್ನದವಾಗಿದ್ದು, ಬ್ಯಾಡಗಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ 104223 ಪುರಷ ಮತದಾರರು, 98955 ಮಹಿಳಾ ಮತದಾರರು ಹಾಗೂ ಇತರೇ 6 ಮತದಾರರನ್ನು ಹೊಂದಿದ್ದು ಒಟ್ಟಾರೆಯಾಗಿ 203184 ಮತದಾರರು ಮೇ.23 ರಂದು ಮತ ಚಲಾಯಿಸಲಿದ್ದಾರೆ.
ಬ್ಯಾಡಗಿ ತಾಲೂಕಿನ 128 ಮತಗಟ್ಟೆಗಳು, ಹಾವೇರಿ ತಾಲೂಕಿನ 58 ಮತಗಟ್ಟೆಗಳು ರಾಣೆಬೆನ್ನೂರಿನ 55 ಮತಗಟ್ಟೆಗಳು ಸೇರಿದಂತೆ ಒಟ್ಟು 241 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತಗಟ್ಟೆಗಳ ಅಧಿಕಾರಿ ಮತ್ತು ಇತರೇ ಸಿಬ್ಬಂದಿ ಸೇರಿದಂತೆ 1080 ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗಿದೆ. ಸಿಬ್ಬಂದಿಗಳಿಗೆ ಮತಗಟ್ಟೆಗೆ ತೆರಳಲು 46 ರೂಟ್‍ಗಳಲ್ಲಿ 45 ಬಸ್ ಹಾಗೂ ಒಂದು ಜೀಪ್‍ನ ವ್ಯವಸ್ಥೆಯನ್ನು ಮಾಡಲಾಗಿದೆ. ವಿಕಲಚೇತನರಿಗೆ ಮತಗಟ್ಟೆಗೆ ತೆರಳಲು ಸಹಾಯಕ ಮತ್ತು ವ್ಹೀಲ್‍ಚೆರ್‍ನ ವ್ಯವಸ್ಥೆ ಕಲ್ಪಿಸಲಾಗಿದೆ. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಒಂದರಂತೆ ಮಹಿಳಾ(ಪಿಂಕ್) ಮತಗಟ್ಟೆ ಒಂದು ವಿಕಲಚೇತನ ಮತಗಟ್ಟೆ ಸೇರಿದಂತೆ ಒಂದು ಮಾದರಿ ಮತಕ್ಷೇತ್ರದ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 48 ಕ್ರಿಟಿಕಲ್ ಮತಗಟ್ಟೆಗಳಲ್ಲಿ 8 ಮತಗಟ್ಟೆಗಳು ವಲ್ನರೇಬಲ್ ಮತಗಟ್ಟೆಗಳಾಗಿವೆ. 40 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್ವರಗಳನ್ನು ನೇಮಿಸಲಾಗಿದೆ. 12 ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ಅಳವಡಿಸಲಾಗಿದ್ದು, 6 ಮತಗಟ್ಟೆಗಳಲ್ಲಿ ವಿಡಿಯೋಗ್ರಾಫ ಮಾಡಲು ಸಿದ್ದತೆ ಮಾಡಲಾಗಿದೆ.
ಮತಗಟ್ಟೆಗಳಲ್ಲಿ ಪೋಲಿಸ್ ಸಿಬ್ಬಂದಿಯನ್ನು ನೇಮಿಸಿದ್ದು, ಕ್ರಿಟಿಕಲ್ ಮತಗಟ್ಟೆ ಹಾಗೂ ವಲ್ನರೇಬಲ್ ಮತಗಟ್ಟೆಗಳಲ್ಲಿ ಒಂದು ಹೆಚ್ಚುವರಿ ಪೋಲಿಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಪೋಲಿಸ್ ಮೋಬೈಲ್ ಸ್ಕ್ವಾಡ ವ್ಯವಸ್ಥೆ ಮಾಡಲಾಗಿದ್ದು, ಒಂದು ಕೆಎಸ್‍ಆರ್‍ಪಿ ತುಕುಡಿ, ಒಬ್ಬ ಡಿಎಸ್‍ಪಿ, 3 ಜನ ಇನ್ಸಪೆಕ್ಟರ್, 3 ಜನ ಪಿಎಸ್‍ಐ, 9 ಜನ ಎಎಸ್‍ಐ, 48 ಹೆಡ್ ಕಾನ್ಸಟೇಬಲ್, 127 ಪೋಲಿಸ್ ಕಾನಸ್ಟೇಬಲ್‍ಗಳು ಹಾಗೂ 146 ಹೋಮ ಗಾಡ್ರ್ಸಗಳನ್ನು ನಿಯೋಜಿಸಲಾಗಿದೆ. ಮತದಾರರು ಯಾವುದೇ ಭಯಬೀಳದೇ ಮತಗಟ್ಟೆಗಳಲ್ಲಿ ಮತ ಚಲಾಯಿಸುವಂತೆ ಸಹಾಯಕ ಚುನಾವಣಾಧಿಕಾರಿ ಸಿದ್ದರಾಜು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ