ಬೆಂಗಳೂರು:
ಯುವತಿಯೊಬ್ಬರಿಗೆ ತೇಜಸ್ವಿ ಅವರಿಂದ ಕಿರುಕುಳವಾಗಿದೆಯೆಂದು ಆಕೆಯ ಟ್ವೀಟ್ ಉಲ್ಲೇಖಿಸಿ ಮಹಿಳಾ ಕಾಂಗ್ರೆಸ್ ಮಹಿಳಾ ಆಯೋಗಕ್ಕೆ ನೀಡಿದ್ದ ದೂರು ನೀಡಿದ ಪ್ರಕರಣಕ್ಕೆ ಸಂಬಂಧಪಟ್ಠಂತೆ ತೇಜಸ್ವಿ ಸೂರ್ಯಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ತೇಜಸ್ವಿ ಸೂರ್ಯ ಜೊತೆ ಸಂಬಂಧ ಹೊಂದಿದ್ದರು ಎಂದು ಹೇಳಲಾದ ಯುವತಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರಿಗೆ ಖುದ್ದು ಪತ್ರ ಬರೆದಿದ್ದಾರೆ ಎನ್ನಲಾಗಿದ್ದು, ಪತ್ರದಲ್ಲಿ ಟ್ವಿಟರ್ನಲ್ಲಿ ನಾನು ಆರೋಪಿಸಿದ್ದೇನೆ ಎಂಬುದು ಸುಳ್ಳು. ನಮ್ಮಿಬ್ಬರ ತೇಜೋವಧೆಗೆ ಕಿಡಿಗೇಡಿಗಳು ಈ ಯತ್ನ ನಡೆಸಿದ್ದಾರೆ. ನನ್ನ ಪರವಾಗಿ ಯಾರೇ ದೂರು ಕೊಟ್ಟರು ಅದನ್ನು ವಜಾಮಾಡಿ’ ಎಂದು ಮನವಿ ಮಾಡಿದ್ದಾರೆ.
ಈ ಪತ್ರವನ್ನು ಕೂಲಂಕಷ ಪರಿಶೀಲನೆ ನಡೆಸಿದ ಮಹಿಳಾ ಆಯೋಗ, ಪತ್ರ ಬರೆದಿದ್ದು ತೇಜಸ್ವಿ ಸೂರ್ಯರೊಂದಿಗೆ ಸಂಬಂಧ ಹೊಂದಿದ್ದ ಯುವತಿ ಎಂದು ಸಾಬೀತಾಗಿದೆ. ಯುವತಿಯೇ ಖುದ್ದು ಹೇಳಿಕೆ ನೀಡಿರುವ ಕಾರಣದಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜಸ್ವಿ ಅವರ ವಿರುದ್ದ ಸೂಕ್ತ ದಾಖಲೆಗಳು ಸಿಗದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ವಜಾಮಾಡಿ ಆದೇಶ ಹೊರಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








