ಹುಳಿಯಾರು:
ಹುಳಿಯಾರು ಹೋಬಳಿಯ ಯಳನಾಡು ಗ್ರಾಮ ಪಂಚಾಯಿತಿ ಕಚೇರಿಗೆ ಕಳೆದ ಬುಧವಾರ ಮಧ್ಯಾಹ್ನದ ಸಮಯದಲ್ಲಿ ಕಚೇರಿಯಲ್ಲಿ ಯಾರೂ ಇಲ್ಲದೆ ಹಾಗೂ ಬೀಗ ಹಾಕದೆ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ತೋರಿದ್ದು ಈ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರು ಯಳನಾಡು ಪಂಚಾಯ್ತಿಯ ಪ್ರಭಾರ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಯವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಚುನಾವಣೆ ಹಿಂದಿನ ದಿವಸ ಏ. 17 ರ ಬುಧವಾರ ಮಧ್ಯಾಹ್ನ ಯಳನಾಡು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಯಾರೊಬ್ಬರೂ ಹಾಜರಿರಲಿಲ್ಲ. ಅಲ್ಲದೆ ಯಾರು ಕೆಲಸವನ್ನು ನಿರ್ವಹಿಸದಿದ್ದರೂ ಕಚೇರಿಗೆ ಬೀಗ ಹಾಕದೆ ನಿರ್ಲಕ್ಷತೆ ತೋರಿದ್ದಾರೆ ಎಂದು ಕಚೇರಿಗೆ ಬೀಗ ಹಾಕದಿರುವುದರ ಬಗ್ಗೆ ಸಾರ್ವಜನಿಕರು ದೂರವಾಣಿ ಹಾಗೂ ವಾಟ್ಸ್ ಅಪ್ ಮೂಲಕ ತಾಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದರು.
ಈ ಬಗ್ಗೆ ಕಾರಣ ಕೇಳಿರುವ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸದರಿ ದಿನಾಂಕದಂದು ಕಚೇರಿಯ ಮುಖ್ಯಸ್ಥರನ್ನು ಅನುಮತಿ ಪಡೆಯದೆ ಸರ್ಕಾರಿ ಕೆಲಸಕ್ಕೆ ಅನಧಿಕೃತ ಗೈರು ಹಾಜರಾಗಿದ್ದೂ ಅಲ್ಲದೇ ನಿಮ್ಮ ಬೇಜವಾಬ್ದಾರಿ ತನದಿಂದ ಸರ್ಕಾರಿ ಆಸ್ತಿ ಮತ್ತು ದಾಖಲೆಗಳನ್ನು ನಾಶಪಡಿಸಲು ಹಾಳುಮಾಡಲು ದಾರಿಯಾಗಿದೆ ಎಂದಿದ್ದಾರೆ.
ಈ ಬಗ್ಗೆ ಸೂಕ್ತ ಸಮಾಜಾಯಿಷಿ ನೀಡಬೇಕೆಂದು ತಪ್ಪಿದಲ್ಲಿ ನಿಮ್ಮ ಮೇಲೆ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು ಎಂದು ಯಳನಾಡು ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ ಮಲ್ಲೇಶಾಚಾರಿ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕಾವ್ಯ.ಎಸ್ ಅವರಿಗೆ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








