ಬೆಂಗಳೂರು
ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರಿಂದ ಆತಂಕಗೊಂಡು ಮಹಾಲಕ್ಷ್ಮಿ ಲೇಔಟ್ನ ಕಳ್ಳ ವಿಘ್ನೇಶ್ನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದ 6 ಮಂದಿ ಆರೋಪಿಗಳನ್ನು ಜೆಸಿ ನಗರ ಪೊಲೀಸರು ಬಂಧಿಸಿದ್ದಾರೆ.ಜೆಸಿ ನಗರದ ಮುಖೇಶ್ (38), ಸಂತೋಷ್ (37), ಚೇತನ್ ಅಲಿಯಾಸ್ ಕೋಬ್ರಾ (22), ಆರ್ಟಿ ನಗರದ ಸಂದೀಪ್ (29), ಸೋಮಯ್ಯ (25), ಯೋಗೇಶ್ (30) ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ಏ. 21 ರಂದು ರಾತ್ರಿ ವಿಘ್ನೇಶ್ (20) ಮನೆಗೆ ಸ್ನೇಹಿತನ ಜತೆ ಬರುತ್ತಿದ್ದಾಗ ಜೆಸಿ ನಗರದ ಪಿಜಿ ರಸ್ತೆಯ ರಾಮಕೃಷ್ಣಬ್ಲಾಕ್ನಲ್ಲಿ ಅಡ್ಡಗಟ್ಟಿದ ಬಂಧಿತ ಆರು ಮಂದಿ ಆರೋಪಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿದ ಜೆಸಿ ನಗರ ಪೆÇಲೀಸ್ ಇನ್ಸ್ಪೆಕ್ಟರ್ ಮಂಜಯ್ಯ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯಾದ ವಿಘ್ನೇಶ್ ಆರೋಪಿಗಳ ಜತೆ ಜಗಳ ಮಾಡಿಕೊಂಡಿದ್ದ.
ಜಗಳದ ಆಕ್ರೋಶದಲ್ಲಿ ಸಂದೀಪ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಇದರಿಂದ ಆತಂಕಗೊಂಡ ಸಂದೀಪ್, ಇತರ ಐವರೊಂದಿಗೆ ಸೇರಿ ಸಂಚು ರೂಪಿಸಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಕೊಲೆಯಾದ ವಿಘ್ನೇಶ್, ಮನೆಗಳವು, ಸುಲಿಗೆ ಇನ್ನಿತರ 6 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








