ತುರುವೇಕೆರೆ:
ತಾಲೂಕಿನ ಅರೇಮಲ್ಲೇನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಹರಿದ ರಾಷ್ಟ್ರದ್ವಜ ಹಾರಾಟ ಮಾಡಿ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿರುವ ಪಂಚಾಯ್ತಿ ಪಿಡಿಓ ಹಾಗೂ ಕಾರ್ಯದರ್ಶಿಗಳ ವಿರುದ್ದ ಸಂಬಂದಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅರೇಮಲ್ಲೇನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯ್ತಿ ಮುಂಬಾಗ ಗ್ರಾಮದ ಮುಖಂಡರು ಪ್ರತಿಭಟನೆ ನೆಡೆಸಿದ ಸಂಧರ್ಭದಲ್ಲಿ ಮಾತನಾಡಿದ ಗ್ರಾಮದ ಯುವ ಮುಖಂಡ ರಮೇಶ್, ಸುಮಾರು ದಿನಗಳಿಂದಲೂ ಗ್ರಾಮ ಪಂಚಾಯ್ತಿ ಮುಂಬಾಗದ ಧ್ವಜ ಕಟ್ಟೆಯಲ್ಲಿ ಪ್ರತಿ ದಿನ ಹಾರಿಸುವ ರಾಷ್ಟ್ರ ಧ್ವಜ ಹಳೆಯದಾಗಿ ಹರಿದಿದ್ದರು ಸಹಾ ಬದಲಾವಣೆ ಮಾಡದೇ ಗ್ರಾಮ ಪಂಚಾಯ್ತಿ ಪಿಡಿಓ ನಿರ್ಲಕ್ಷ ಮಾಡಿ ಅಗೌರವ ತೋರಿದ್ದಾರೆ.
ಈಗಾಗಲೇ ಗ್ರಾಮಸ್ಥರು ಹಾಗೂ ಗ್ರಾಮದ ಯುವ ಮುಖಂಡರು ಹರಿದ ಧ್ವಜ ಹಾರಾಟ ಮಾಡಿ ನಮ್ಮ ರಾಷ್ಟ್ರ ಧ್ವಜಕ್ಕೆ ಅಗೌರವ, ಅಪಮಾನ ಮಾಡಲಾಗುತ್ತಿದೆ ಕೂಡಲೇ ಹೊಸ ಧ್ವಜ ಹಾರಿಸಿ ಎಂದು ಹಲವು ಬಾರಿ ಮನವಿ ಮಾಡಿದ್ದರೂ ಕ್ಯಾರೇ ಎನ್ನದ ಪಿಡಿಓ ದುರಂಕಾರ ದರ್ಪ ತೋರಿ ಬದಲಾವಣೆ ಮಾಡದೆ ಮೀನಾ ಮೇಷ ಎಣಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯ ಸಮಯದಲ್ಲಿ ಗ್ರಾಮಕ್ಕೆ ಆಗಮಿಸಿದ್ದ ಚುನಾವಣಾಧಿಕಾರಿಗಳು ಸಹ ರಾಷ್ಟ್ರ ದ್ವಜವನ್ನು ಬದಲಾವಣೆ ಮಾಡುವಂತೆ ಪಿಡಿಓಗೆ ತಿಳಿಸಿದ್ದರು ನಿರ್ಲಕ್ಷ ವಹಿಸಿದ್ದು ಬೇಜವಬ್ದಾರಿ ತೋರಿದ್ದಾರೆ.
ಇಂತಹ ಸರ್ಕಾರಿ ಅಧಿಕಾರಿಗಳಿಂದ ರಾಷ್ಟ್ರಕ್ಕೆ ಮಾಡಿದ ಅಪಮಾನ ಕೂಡಲೇ ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕು ತಹಶೀಲ್ದಾರ್‍ರವರಿಗೂ ಮನವಿ ಮಾಡಲಾಗುವುದು ಎಂದು ತಿಳಿಸಿದರು.ಈ ಸಂದರ್ಬದಲ್ಲಿ ಕೆ.ಪರಮೇಶ್, ರಾಮಕೃಷ್ಣ, ಯೋಗೀಶ್, ಜವರೇಗೌಡರು, ಸುರೇಶ್, ರಂಗಸ್ವಾಮಿ, ಚಂದ್ರು, ನಾಗರಾಜು, ರಮೇಶ್ ಇತರರು ಇದ್ದರು.