ಸಂಶೋಧನೆ ಜನೋಪಯೋಗಿಯಾದರೆ ಮಾತ್ರ ಸಾರ್ಥಕ

ತುಮಕೂರು:
        ಇಂದಿನ ಮಾಹಿತಿ ಮತ್ತು ತಂತ್ರಜ್ಞಾನ ಯುಗದಲ್ಲಿ ದಿನನಿತ್ಯದ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಕಂಪ್ಯೂಟರ್ ಮತ್ತು ಯಂತ್ರಗಳ ಮೇಲೆ ಪ್ರತಿಯೊಬ್ಬರು ಅವಲಂಬಿತವಾಗಿದ್ದು ಮನುಷ್ಯದಲ್ಲಿ ಇದರಿಂದಾಗಿ ಸೃಜನಶೀಲತೆಯ ಕೊರತೆಯುಂಟಾ ಗುತ್ತಿದೆಯೆಂದು ಮತ್ತು ಯಾವುದೇ ಸಂಶೋಧನೆ ಜನೋಪಯೋಗಿಯಾಗಿ ಗುರುತರ ಸಮಸ್ಯೆಗಳಿಗೆ ಪರಿಹಾರ ನೀಡಿದರೆ ಆಗಲೇ ಅದಕ್ಕೊಂದು ಸಾರ್ಥಕತೆಯೆಂದು
ಧಾರವಾಡದ ಐಐಐಟಿಯ ನಿರ್ದೇಶಕರಾದ ಡಾ.ಕವಿಮಹೇಶ್ ನುಡಿದರು. 
       ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ದಲ್ಲಿ “ರೀಸೆಂಟ್ ಅಡ್ವಾನ್ಸಸ್ ಇನ್ ಇಂಜಿನಿಯರಿಂಗ್ ಟೆಕ್ನಾಲಜಿ ಅಂಡ್ ಸೈನ್ಸ್ 2019” (ಎನ್.ಸಿ.ಆರ್.ಎ. ಇ.ಟಿ.ಎಸ್.-2019) ಎಂಬ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಏ.26 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀದೇವಿ ಆಸ್ಪತ್ರೆಯ ಅಡಿಟೋರಿಯಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. 
      ಈ ಕಾರ್ಯಕ್ರಮದ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸೀಮಿತ ಅವಕಾಶಗಳ ಮಧ್ಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ತಮ್ಮ ಅಧ್ಯಯನ ಹಾಗೂ ಪ್ರಯೋಗಗಳ ವರದಿಯನ್ನು ಎಲ್ಲರಿಗೂ ತಿಳಿಯ ಪಡಿಸುವ ಅವಕಾಶ ಈ ತರಹದ ರಾಷ್ಟ್ರೀಯ ಸಮ್ಮೇಳನಗಳಿಂದ ದೊರಕುವುದರಿಂದ ಅದರ ಪ್ರಯೋಜನ ಪಡೆದು ತಮ್ಮ ಅರಿವನ್ನು ಹೆಚ್ಚಿಸಿಕೊಳ್ಳಬೇಕೆಂದರು.
      ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಛಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ.ಏಂ.ಆರ್,ಹುಲಿನಾಯ್ಕರ್‍ರವರು ಈಗ ವೈದ್ಯಕೀಯ ಕ್ಷೇತ್ರದಲ್ಲಿ ಇಂಜೀನಿಯರಿಂಗ್ ತಂತ್ರಜ್ಞಾನ ಬಳಕೆಯಿಂದ ಮಾನವ ದೇಹದ ಅತ್ಯಂತ ಗಹನವಾದ ವಿಷಯಗಳಾದ ವಂಶವಾಹಿಗಳು ತದ್ರೂಪಿ ಸೃಷ್ಟಿ, ಮಿದುಳು ಮತ್ತು ಇತರೆ ವಿಭಾಗಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿದ್ದು ಹಲವಾರು ತೊಂದರೆಗಳಿಗೆ ಪರಿಹಾರ ಮತ್ತು ವೈದ್ಯಕೀಯ ಚಿಕಿತ್ಸೆ ಸಾಧ್ಯವಾಗುತ್ತಿದೆಯೆಂದರು ಆದ್ದರಿಂದ ಅಂತರ್ ಕ್ಷೇತ್ರಿಯ ಸಂಶೋಧನೆಗಳನ್ನು ವೈದ್ಯರು ಮತ್ತು ಇಂಜೀನಿಯರ್‍ಗಳು ಕೈಗೊಂಡಲ್ಲಿ ಸಮಾಜದ ಆರೋಗ್ಯ ಹೆಚ್ಚಲಿದ್ದು, ಇತಂಹ ಸಮ್ಮೇಳನಗಳು ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ದಾರಿ ದೀಪವಾಗಲೆಂದು ತಿಳಿಸಿದರು.
       ಇದೇ ಸಂದರ್ಭದಲ್ಲಿ ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್‍ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದರು. ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ.ಟಿ.ಹೇಮಾದ್ರಿನಾಯ್ಡು ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ವರದಿ ಮಂಡಿಸಿದರು. 
        ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜಕರಾದ ಹಾಗೂ ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಮಹೇಶ್ ಕುಮಾರ್‍ರವರು, ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲರಾದ ಡಾ.ಫಣಿರಾಜು, ಪ್ರೊ. ಸಿ.ನಾಗರಾಜ್ ಮುಂತಾದವರು ಭಾಗವಹಿಸಿದರು.
       ಸಮಾರಂಭದಲ್ಲಿ ಕು.ಸಿಂಧು ಪ್ರಾರ್ಥಿಸಿ, ಕಾರ್ಯಕ್ರಮ ಸಂಯೋಜಕರಾದ ಹಾಗೂ ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಮಹೇಶ್ ಕುಮಾರ್‍ರವರು ಸ್ವಾಗತಿಸಿ, ಪ್ರೊ. ಸಿ.ನಾಗರಾಜ್ ನಿರ್ವಹಿಸಿ, ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎಸ್.ರಾಮಕೃಷ್ಣ ವಂದಿಸಿದರು. ಸಮಾರಂಭದಲ್ಲಿ ಡೀನ್‍ಗಳಾದ ಡಾ.ಚಂದ್ರಶೇಖರ್, ಡಾ.ಸಿ.ಪಿ.ಚಂದ್ರಪ್ಪ, ಪ್ರೊ.ಸಿ.ವಿ. ಷಣ್ಮುಖಸ್ವಾಮಿ, ಪ್ರೊ. ಕುಮಾರ್,  ಡಾ. ಸದಾಶಿವಯ್ಯ, ಯು.ವಿ.ಸಿ.ಇ. ಕಾಲೇಜಿನ ಡಾ.ಗೋವಿಂದರಾಜು, ಕೆ.ಐ.ಟಿ. ಕಾಲೇಜಿನ ಡಾ.ಗೌರಮ್ಮ, ಎಸ್.ಐ.ಟಿ.ಯ ಡಾ.ಗೌರಿಶಂಕರ್ ಹಾಗೂ ಇತರೆ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link