ಕಾಟಗಾನಹಟ್ಟಿ ಬಳಿ ರಸ್ತೆ ಅಪಘಾತ : ಯುವಕ ಸಾವು

ಮಧುಗಿರಿ:

     ಸರಕು ತುಂಬಿದ್ದ ಲಾರಿ ಹಾಗೂ ಕಾರಿನ ನಡುವೆ ಅಪಘಾತ ಸಂಭಂವಿಸಿ ಕಾರಿನಲ್ಲಿದ್ದ ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟು ಮತ್ತೊಬ್ಬ ಚಾಲಕನ ಸ್ಥಿತಿ ಗಂಭೀರವಾಗಿದೆ.

    ತಾಲ್ಲೂಕಿನ ಕಸಬ ಹೋಬಳಿಯ ಮಧುಗಿರಿ- ತುಮಕೂರು ಕೆಶಿಫ್ ರಸ್ತೆಯ ಸಮೀಪವಿರುವ ಕಾಟಗಾನಹಟ್ಟಿ ಬಳಿ ಸಂಜೆ ಘಟನೆ ನೆಡೆದಿದ್ದು ಕಾರಿನಲ್ಲಿದ್ದ ಐಡಿ ಹಳ್ಳಿ ಹೋಬಳಿಯ ಕಲ್ಲುವೀರನಹಟ್ಟಿಯ ವಾಸಿ ಶಿವರಾಜ್.ಸಿ. (26) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಹಾಗೂ ಚಾಲಕ ಕಿರಣ್ (24) ಗಂಭೀರವಾಗಿ ಘಾಯಗೊಂಡಿದ್ದು ಆತನನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಮಧುಗಿರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅವೈಜ್ಞಾನಿಕ ತಿರುವು: ಕೆಶಿಫ್ ರಸ್ತೆಯು ಸಧ್ಬವ್ ಕಂಪನಿಯವರು ಇಂತಹ ಅವೈಜ್ಞಾನಿಕ ತಿರುವನ್ನು ನಿರ್ಮಾಣ ಮಾಡಿದ್ದು ಈ ಬಗ್ಗೆ ಕಂಪನಿಯ ಅಧಿಕಾರಿಗಳಿಗೆ ಹಲವಾರು ಬಾರಿ ಸ್ಥಳೀಯರು ಪ್ರತಿಭಟಿಸಿ ಎಚ್ಚರಿಸಿದ್ದರೂ ಸಹ ಇಂತಹ ಅಪಘಾತಗಳು ಮರು ಕಳಿಸುತ್ತಿವೆ. ಈ ರಸ್ತೆಯಲ್ಲಿ ಸರಿಯಾದ ಎಚ್ಚರಿಕೆ ನಾಮ ಫಲಕಗಳನ್ನು ಹಾಕಿಲ್ಲ.

      ಕೆಲ ತಿಂಗಳ ಹಿಂದೆ ಇದೇ ಸ್ಥಳದ ತಿರುವಿನ ಬಳಿ ಪಾವಗಡದ ಪಟ್ಟಣದಲ್ಲಿ ನಿಶ್ಚಯಿಸಿದ್ದ ವಿವಾಹಕ್ಕೆ ಹೋಗಲು ಕಾರಿನಲ್ಲಿ ಹೊರಟಿದ್ದ ಮಧು ಮಗ ಹಾಗೂ ಆತನ ಸ್ನೇಹಿತರು ವಿವಾಹದ ಮುನ್ನಾ ದಿನವೇ ಇದೇ ಸ್ಥಳದಲ್ಲಿಯೇ 4 ಜನ ಮೃತಪಟ್ಟಿದ್ದರು. ಮತ್ತದೆ ಸ್ಥಳದಲ್ಲಿಯೇ ಅಪಘಾತ ನಡೆದಿದೆ ಮುಖ್ಯ ರಸ್ತೆಯಲ್ಲಿನ ಅವೈಜ್ಞಾನಿಕ ತಿರುವನ್ನು ಸರಿಪಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.ಸ್ಥಳಕ್ಕೆ ಎಸ್‍ಪಿ ವಂಶಿಕೃಷ್ಣ, ಡಿವೈಎಸ್‍ಪಿ ಶ್ರೀನಿವಾಸ್, ಹಾಗೂ ಸಿಪಿಐ ದಯಾನಂದ್ ಶೇಗುಣಸಿ, ಎಎಸ್‍ಐ ಸಾಕ್ಷಪ್ಪ, ಭೇಟಿ ನೀಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link