ಬಳ್ಳಾರಿ
ಮಹಾನಗರ ಪಾಲಿಕೆಯ ವತಿಯಿಂದ ಏಪ್ರಿಲ್ ತಿಂಗಳಲ್ಲಿ ತೆರಿಗೆ ವಿನಾಯಿತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅದರ ಫಲವಾಗಿ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ತೆರಿಗೆದಾರರು 3.94 ಕೋಟಿ ಆಸ್ತಿ ತೆರಿಗೆ ಸಂಗ್ರಹ ವಾಗಿದೆ, ಈ ಅಭಿಯಾನವು ಕೆವಲ ಇನ್ನು ಮೂರೇ ದಿನಗಳು ಮಾತ್ರ ಉಳಿದಿವೆ. ಶೇಕಡಾ 5 ರಷ್ಟು ರಿಯಾಯಿತಿ ಯೊಂದಿಗೆ ತೆರಿಗೆ ಪಾವತಿ ಮಾಡಿ ವಿಮುಕ್ತಿ ಪಡೆದು
ಋಣಮುಕ್ಕರಾಗಲು ಅಭಿಯಾನದ
ಮಹತ್ವ ಸಾರುವ ಮೂಲಕ ಮಹಾನಗರ ಪಾಲಿಕೆ ಆಯುಕ್ತೆ ಎಂ ವಿ ತುಷಾರಮಣಿ ಅಂಗಡಿ ಮಾಲಿಕರಿಗೆ ಕರಪತ್ರ ನೀಡಿ ಜುಲೈ ನಿಂದ ಶೇ 2 ರಷ್ಟು ದಂಡ ಶುಲ್ಕದೊಂದಿಗೆ ಪಾವತಿಸಬೇಕಾಗುತ್ತದೆ, ಎಂದು ವಿವರಿಸಿದರು.
ನಗರದ ದುರುಗಮ್ಮ ಗುಡಿಯ ವೃತ್ತದ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಏಪ್ರಿಲ್ ತಿಂಗಳಲ್ಲಿ 2019-20 ನೇ ಸಾಲಿನ ಒಟ್ಟು ಮೊತ್ತದಲ್ಲಿ ಶೇ 5 ರಷ್ಟು ರಿಯಾಯಿತಿ ಪಾಲಿಕೆ ನೀಡಿದೆ. ಪಾಲಿಕೆಯ ಆವರಣದಲ್ಲಿರುವ ಬಳ್ಳಾರಿ ಒನ್ ಕೇಂದ್ರ ಎರಡು ವಿಶೇಷ ಕೌಂಟರ್ ಗಳು ಹಾಗೂ ಬ್ಯಾಂಕ್ ಆಫ್ ಬರೋಡ ಶಾಖೆ ಯಲ್ಲಿ ತೆರಿಗೆ ಪಾವತಿಸಲು ಅವಕಾಶ ಮಾಡಿ ಕೊಡಲಾಗಿದೆ ಎಂದು ತಿಳಿಸಿದರು.
ಕಂದಾಯ ಅಧಿಕಾರಿಗಳು, ಕರಸಂಗ್ರಹಗಾರರು, ಹಾಗೂ ಕಂದಾಯ ನಿರೀಕ್ಷಕರು ಒಟ್ಟಾಗಿ ಪಾಲಿಕೆಯ ಎಲ್ಲಾ 35 ವಾರ್ಡ್ ಗಳಲ್ಲಿ ಆಸ್ತಿ ತೆರಿಗೆಯ ಬಗ್ಗೆ ಕರಪತ್ರಗಳನ್ನು ಮನೆಗಳಿಗೆ ವಿತರಿಸಿದ್ದಾರೆ,ಹಾಗೆಯೇ ಪಾಲಿಕೆಯ ವಾಹನಗಳ ಮೈಕ್ ಮೂಲಕ ಪ್ರಚಾರ ಕಾರ್ಯವನ್ನು ಆರಂಭಿಸಲಾಗಿದೆ’ ಎಂದು ಹೇಳಿದರು.
ವಾಣಿಜ್ಯ ಕಟ್ಟಡಗಳು, ಲಾಡ್ಜ್ ಗಳು, ಟಾಕೀಸ್ ಗಳು ಸೇರಿದಂತೆ ಎಲ್ಲ ಬಗೆಯ ಆಸ್ತಿ ದಾರರಿಂದಲೂ ತೆರಿಗೆ ಪಾವತಿ ನಡೆಯುತ್ತದೆ, ಚೆಕ್ ಮತ್ತು ಡಿಡಿ ಗಳ ಮುಖಾಂತರ ಹಲವರು ತೆರಿಗೆ ಪಾವತಿಸಿದ್ದಾರೆ. ಅವೂ ನಗದೀಕರಣಗೊಂಡರೆ ಪಾವತಿಯ ಮೊತ್ತ ಹೆಚ್ಚಾಗುತ್ತದೆ. ಒಂದು ತಿಂಗಳ ಅವದಿಯಲ್ಲಿ ಕನಿಷ್ಠ 5 ಕೋಟಿ ವಸೂಲು ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು.ಅನಧಿಕೃತ ಕಟ್ಟಡಗಳಿಗೆ
ದುಪ್ಪಟ್ಟು ತೆರಿಗೆ ವಿಧಿಸಲು ಅವಕಾಶವಿದೆ. ಕಟ್ಟಡದ ಮಾಲಿಕರು ಪಾರಂ 3 ನೀಡಿದರೆ ಮಾತ್ರ ತೆರಿಗೆ ಪಾವತಿಸುವುದಾಗಿ ಹೇಳುತ್ತಾರೆ, ಅದು ಸರಿಯಾದ ಕ್ರಮವಲ್ಲ ಕಂದಾಯ ಜಮೀನಿನಲ್ಲಿ ಕಟ್ಟಿಕೊಂಡವರಿಗೆ ಮಾತ್ರ ಪಾರಂ 3 ಕೊಡಲು ಅವಕಾಶವಿದೆ ಎಂದರು.
ಪಾಲಿಕೆಯಿಂದ ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ನಂತ ಮೂಲಸೌಕರ್ಯಗಳೆಲ್ಲವನ್ನು ಪಡೆಯುತ್ತಿದ್ದರೂ,ಅವರು ಆಸ್ತಿ ತೆರಿಗೆ ಪಾವತಿಸುತ್ತಿಲ್ಲ ಬೇಸರ ವ್ಯಕ್ತಪಡಿಸಿದರು. ಜೊತೆಗೆ ಕೊಳಗೇರಿ ನಿವಾಸಿಗಳು ತೆರಿಗೆ ಪಾವತಿಸದೆ ಇರುವುದರಿಂದ ತೆರಿಗೆ ಸಂಗ್ರಹದಲ್ಲಿ ಕೊಂಚ ಹಿನ್ನೆಡೆಯಾಗುತ್ತದೆ ಎಂಬ ಮಾಹಿತಿಯನ್ನು ಕೊಟ್ಟರು.
