ಹರಪನಹಳ್ಳಿ:
ತೀವ್ರವಾದ ಗಾಳಿ ಬೀಸಿದ ಪರಿಣಾಮ ತಾಲೂಕಿನ ನಂದಿಬೇವೂರಿನಲ್ಲಿ 3 ಮನೆಯ ಮೇಲಾವಣಿಗಳು ಕುಸಿದಿರುವ ಘಟನೆ ಶನಿವಾರ ಸಂಜೆ ನಡೆದಿದೆ. ನಂದಿಬೇವೂರು ಗ್ರಾಮದ ವಿಶ್ವನಾಥ ಶಾಸ್ತ್ರಿ, ಕಸವನಹಳ್ಳಿ ಗೋಣಿಬಸಪ್ಪ ಹಾಗೂ ಮತ್ತಿಹಳ್ಳಿ ನಾಗರಾಜ್ ಅವರ ಮನೆಗ ಮೇಲ್ಚಾವಣಿ, ತಡೆಗೋಡೆಗಳು ಕುಸಿದು ಬಿದ್ದಿವೆ. ಗಾಳಿ ಬೀಸಿದಾಗ ಮನೆಯಿಂದ ಓಡಿಬಂದು ಜನರು ರಕ್ಷಣೆ ಮಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹರಪನಹಳ್ಳಿ ಪಟ್ಟಣ, ನಂದಿಬೇವೂರು, ಕಣಿವಿಹಳ್ಳಿ, ಬಾಗಳಿ, ಜಿಟ್ಟಿನಕಟ್ಟಿ, ಕೂಲಹಳ್ಳಿ, ಹಾರಕನಾಳು ಸೇರಿದಂತೆ ವಿವಿಧೆಡೆ ಸಂಜೆ ಸಾಧರಣ ಮಳೆಯಾಗಿದೆ. ಬಹುತೇಕ ಹಳ್ಳಿಗಳಲ್ಲಿ ಗಾಳಿಯ ವೇಗದ ತೀವ್ರತೆ, ಗುಡುಗು, ಮಿಂಚಿನ ಅರ್ಭಟ ಹೆಚ್ಚಿತ್ತು. ತಾಪಮಾನದಿಂದ ಬೆಸತ್ತ ರೈತಾಪಿ ಜನರು ಕೊಂಚ ನಿರಾಳರಾಗಿ ಮಳೆ ಬರುವಿಕೆಗಾಗಿ ಕಾಯುತ್ತಿದ್ದಾರೆ.