ಹರಿಹರ :
ಐದು ವರ್ಷ ಯಶಸ್ವಿಯಾಗಿ ಕೇಂದ್ರದಲ್ಲಿ ಆಡಳಿತ ನಡೆಸಿದ ನರೇಂದ್ರ ಮೋದಿ ಸರ್ಕಾರವು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ವಿಫಲವಾಗಿದೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದ ಕೋಟೆ ಬಡಾವಣೆಯಲ್ಲಿ ಶನಿವಾರ ಖಾಸಗಿ ಭೇಟಿಗೆ ಆಗಮಿಸಿದ ಸಂದರ್ಭದಲ್ಲಿ ಅಲ್ಲಿನ ಶ್ರೀರಾಮ ಸೇನೆ ಯುವಕರೊಂದಿಗೆ ಮಾತನಾಡಿದ ಅವರು ಕಳೆದ ಐದು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ಬಹುಮತದ ಸರ್ಕಾರವಿದ್ದು ಸುಗ್ರೀವಾಜ್ಞೆ ಯನ್ನು ತಂದು ಮಂದಿರವನ್ನು ಕಟ್ಟಬಹುದಿತ್ತು, ಆದರೆ ಅದನ್ನು ನಮೋ ಸರ್ಕಾರ ಮಾಡಲಿಲ್ಲ ಇದು ನಮ್ಮಂತಹ ಅನೇಕ ಹಿಂದೂ ಸಂಘಟನೆಗಳಿಗೆ ತುಂಬಾ ನಿರಾಸೆ ಉಂಟು ಮಾಡಿದೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಫಲಿತಾಂಶ ಬಿಜೆಪಿಗೆ ಬಹುಮತ ಬಂದು ಮುಂದಿನ ಅವಧಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡದೇ ಹೋದರೆ,ಮರ್ಯಾದಾ ಪುರುಷೋತ್ತಮ ನೆಂದೇ ಹೆಸರಾದ ಶ್ರೀರಾಮನಿಗೆ ಹಾಗೂ ನೂರು ಕೋಟಿಗಳಷ್ಟಿರುವ ಹಿಂದೂಗಳಿಗೆ ದ್ರೋಹ ಮಾಡಿದಂತಾಗುತ್ತದೆ.
ನರೇಂದ್ರ ಮೋದಿ ನಡೆಸಿದ ಆಡಳಿತದ ಅವಧಿಯಲ್ಲಿ ರೂಪಾಯಿ ಅಮಾನ್ಯೀಕರಣ, ನೋಟ್ ಬ್ಯಾನ್ ಜಿ.ಎಸ್.ಟಿ, ಡಿಸೇಲ್, ಪೆಟ್ರೋಲ್, ಗ್ಯಾಸ್ ಸಿಲಿಂಡರ್ ದರದಲ್ಲಿ ಹೆಚ್ಚಳ ಮತ್ತು ದಿನಸಿ ಪದಾರ್ಥಗಳ ಬೆಲೆ ನಿಯಂತ್ರಣ ಮಾಡುವಲ್ಲಿ ನಿರ್ಲಕ್ಷ್ಯ ಧೋರಣೆ ತೋರದೆ ಗಮನ ಹರಿಸಿದ್ದರೆ ಒಳ್ಳೆಯ ಆಡಳಿತ ಎನ್ನಬಹುದಾಗಿತ್ತು.
ಆದರೂ ಸಹ 1 ಲಕ್ಷ 30 ಸಾವಿರದಷ್ಟು ದೇಶ ದಲ್ಲಿರುವ ಎನ್ ಜಿ ಓ ಗಳಿಗೆ ವಿದೇಶದಿಂದ ಬರು ತ್ತಿದ್ದ ಸುಮಾರು 14000 ಕೋಟಿಗಳಷ್ಟು ಹಣ ಕ್ರಿಶ್ಚಿಯನ್ ಸಂಸ್ಥೆಗಳಿಗೆ ಹೊರದೇಶದಿಂದ ಮತಾಂತರಕ್ಕೆ ಬರುತ್ತಿದ್ದನ್ನು ತಡೆದಿರುವುದು ಹಿಂದೂಗಳಾದ ನಮಗೆ ಸಮಾಧಾನದ ಸಂಗತಿ ಯಾಗಿದೆ ಎಂದು ಹೇಳಿದರು.
ಎಂಬ ಪ್ರಶ್ನೆಗೆ ಉತ್ತರಿಸಿದ ಮುತಾಲಿಕ್ ಅವರು ಈ ಬಾರಿ ಉತ್ತರ ಪ್ರದೇಶದಲ್ಲಿ ಈ ರೀತಿಯ ಬೆಳ ವಣಿಗೆ ಆಗಬಹುದು ಏಕೆಂದರೆ ಅಲ್ಲಿನ ಹಿಂದೂ ಗಳಿಗೆ ಮಂದಿರ ನಿರ್ಮಾಣವಾಗಿಲ್ಲ ಎನ್ನುವ ಕೊರಗಿದೆ ಮತ್ತು ಅಲ್ಲಿ ಘಟಬಂಧನ್ ನಿಂದ ಬಿಜೆಪಿಗೆ ಹಿನ್ನಡೆಯಾದರೂ ಆಗಬಹುದು,ದೇಶದ ಉಳಿದ ಭಾಗಗಳಲ್ಲಿ ಆ ರೀತಿ ಆಗುವ ಸಾಧ್ಯತೆ ಕಡಿಮೆ ಎಂದು ಹೇಳಿದರು.ಈ ಸಮಯದಲ್ಲಿ ಶ್ರೀರಾಮ ಸೇನೆಯ ಮಂಜುನಾಥ್ ರಟ್ಟಿಹಳ್ಳಿ,ಅದ್ವೈತ್ ಶಾಸ್ತ್ರಿ, ಕಿರಣ್ ಕುಮಾರ್, ಭರತ್’ ಅಶ್ವತ್ಥ್ ನಾರಾಯಣ್, ಮೂರ್ಕಲ್ ಚಂದನ್ ಶಿವು ಕಿರಣ್ ಸಿದ್ದೇಶ್ ಬನ್ನಿಕೋಡು ಹರೀಶ್ ಬೆಳ್ಳೂಡಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








