ಉತ್ತಮ ಆರೋಗ್ಯಕ್ಕೆ ಹಳೇ ಆಚರಣೆ ಅವಶ್ಯ

ಚಿತ್ರದುರ್ಗ

     ನಾವು ಆರೋಗ್ಯದಿಂದ ಇರಲು ಮತ್ತೆ ನಾವು ಹಿಂದಿನ ಕಾಲದ ಆಚರಣೆಗಳಿಗೆ ಮರಳು ಸಮಯ ಬಂದಿದ್ದೆ ಎಂದು ತುಮಕೂರಿನ ಚ್ಯತನ್ಯವಿಕಾಸ ಯೋಗ ಮತ್ತು ನಿಸರ್ಗಚಿಕಿತ್ಸಾ ಕೇಂದ್ರದ ಆರೋಗ್ಯ ತಜ್ಞ ಡಾ.ಶ್ರೀಶೈಲ ಬದಾಮಿ ಹೇಳಿದರು.

      ನಗರ ಐಎಂಎ ಹಾಲ್‍ನಲ್ಲಿ ಭಾನುವಾರ ಚಿತ್ರದುರ್ಗ ಇತಿಹಾಸ ಕೂಟ ಹಾಗೂ ರೇಣುಕಾ ಪ್ರಕಾಶನದ ಆಶ್ರಯದಲ್ಲಿ ಸಾರ್ವಜನಿಕ ಆರೋಗ್ಯ ಸಮಸ್ಯೆ ಹಾಗೂ ಪರಿಹಾರಗಳು ಕುರಿತು ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ವಜನಿಕ ಆರೋಗ್ಯ ಇಂದು ಹಾಳಾಗಿದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಏನ್ನು ಕೊಡುತ್ತೇವೆ ಎಂದು ಯೋಚಿಸಬೇಕಾಗಿದೆ. ನಾವೇ ಆರೋಗ್ಯದಿಂದ ಇಲ್ಲದಿರುವಾಗ ಅವರಿಗೆ ನಾವು ಏನ್ನು ಕೊಡುತ್ತೇವೆ. ನಮ್ಮ ಮೊಮ್ಮಗ ಆರೋಗ್ಯವಾಗಿ ಇರಬೇಕಾದರೆ ನಾವು ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು

       ಭಾರತೀಯ ಸಂಸ್ಕøತಿಯನ್ನು ಕಣ್ಣು ಮುಚ್ಚಿ ಪಾಲಿಸಿ ವಿದೇಶಿ ಸಂಸ್ಕøತಿಯನ್ನು ಎಚ್ಚರಿಕ್ಕೆಯಿಂದ ಪಾಲಿಸಿ ಎಂದು ವಿವೇಕಾನಂದರು ಹೇಳುತ್ತಾರೆ. ಇಂದು ನಮ್ಮ ಆರೋಗ್ಯ ಹಾಳಾಗಲು ನಾನಾ ಕಾರಣಗಳು ಇವೇ. ನಮ್ಮ ಜೀವನ ಶೈಲಿ ಅದರಲ್ಲಿ ಪ್ರಮುಖ ಕಾರಣ. ಹಿಂದಿನ ಕಾಲದ ಜನ ಬೆಳಗ್ಗೆ 4ಕ್ಕೆ ಎದ್ದು ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ಆದರೆ ಇಂದಿನ ಮಕ್ಕಳಿಗೆ ಯಾವುದೇ ನಿಯಮ ಇಲ್ಲ ಸೂರ್ಯ ಹುಟ್ಟಿದ ಮೇಲೆ ಬೆಳಕಾಗುತ್ತದೆ. ಆರೋಗ್ಯ ವೃದ್ದಿಗೆ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು

      ಹಿಂದೆ ಬಹಳಷ್ಟು ಜನ ತಣ್ಣಿರು ಸ್ನಾನ ಮಾಡುತ್ತಿದ್ದರು ಅದು ಆರೋಗ್ಯಕ್ಕೆ ಒಳ್ಳಯದು ಆದರೆ ಇಂದು ಎಲ್ಲರಿಗೂ ಬಿಸಿ ನೀರು ಬೇಕು. ಮೊದಲಿನ ಹಾಗೆ ಅವಿಭಾಜ್ಯ ಕುಟುಂಬಗಳು ಮಾಯವಾಗಿವೇ. ಹಿಂದೆ ಹುಟು ಸಾವು ಮನೆಯಲ್ಲಿ ಆಗುತ್ತಿದ್ದವು ಆದರೆ ಇಂದು ಹುಟ್ಟು ಸಾವು ಆಸ್ಪತ್ರೆಯಲ್ಲಿ ಆಗುತ್ತವೆ. ಅಂದರೆ ಹಿಂದಿನ ಕಾಲದ ಜನರ ಜೀವನ ಶೈಲಿ ಅವರ ಆರೋಗ್ಯವನ್ನು ಕಾಪಾಡುತ್ತಿತ್ತು. ನಾವು ಮತ್ತೆ ಹಳೆಯ ಜೀವನ ಶೈಲಿಗೆ ಮರಳಬೇಕಾಗಿದೆ ಎಂದರು.

     ಇಂದು ನಾನಾ ರೀತಿ ರಾಸಾಯನಿಕಗಳು ನಮ್ಮ ದೇಹ ಸೇರುತ್ತೀವೆ. ಮಹಿಳೆಯರು ಉಪಯೋಗಿಸುವ ನಾನಾ ಸುಗಂಧದ್ರವ್ಯ ಹಾಗೂ ಅವರು ಬಳಸುವ ಕ್ರೀಮ್‍ಗಳು ಕ್ಯಾನ್ಸರ್‍ಗೆ ಕಾರಣವಾಗುತ್ತೀವೆ. ಇದರ ಬಗ್ಗೆ ಮಹಿಳೆಯರು ಜಾಗೃತರಾಗಿರಬೇಕು. ನಮ್ಮ ದೇಹ ಸೇರಿದ ರಾಸಾಯನಿಕಗಳು ಮೂತ್ರದಿಂದ ಅಥವಾ ಬೆವರಿನ ರೂಪದಲ್ಲಿ ಹೊರಹೋಗಬೇಕು. ಆದರೆ ಇಂದು ನಾವು ಬವರುವುದನ್ನೇ ಮರೆತ್ತಿದ್ದೇವೆ. ಭಾರತದಲ್ಲಿ 5 ಕೆಜಿ ತೂಕದ ಒಂದು ಮಗುವು ಜನಿಸುತ್ತಿಲ್ಲ ಆದರೆ ಇಂಡೋನೇಷಿಯಾ ದೇಶದಲ್ಲಿ 6 ಕೆಜಿ ತೂಕದ ಮಕ್ಕಳು ಹುಟ್ಟುತ್ತವೇ.

    ಅಂದರೆ ಇಲ್ಲಿನ ಮಹಿಳೆಯ ಆರೋಗ್ಯ ಅಂತಹ ಸ್ಥಿತಿ ತಲುಪಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಪ್ಲಾಸ್ಟಿಕ್‍ಗೆ ದಾಸರಾಗಿದ್ದೇವೆ. ಪ್ಲಾಸ್ಟಿಕ್ ಕ್ಯಾನ್ಸರ್‍ಗೆ ಕಾರಣವಾಗುತ್ತದೆ. ನಾವು ಸೇವಿಸುವ ಕಾಫಿ ಕಪ್‍ಲ್ಲಿ ಸಹ ಪ್ಲಾಸ್ಟಿಕ್ ಇರುತ್ತದೆ ನಮಗೆ ಅರಿವು ಇಲ್ಲದೇ ಕ್ಯಾನ್ಸರ್‍ಗೆ ಆಹ್ವಾನ ನೀಡಿತ್ತಿದೇವೆ. ಫ್ಯಾಷನ್‍ಗಾಗಿ ನಾವು ಬೀಗಿಯಾದ ಬಟ್ಟೆಗಳನ್ನು ಧರಸುತ್ತೆವೇ ಆದರೆ ಇದರಿಂದ ನಮ್ಮ ದೇಹದಲ್ಲಿ ವಿರ್ಯಾಣು ಉತ್ಪತ್ತಿ ಕಡಿಮೆಯಾಗುತ್ತದೆ. ಹಿಂದಿನ ಕಾಲದ ಜನ ಪಟಾಪಟಿ ಚಡ್ಡಿ ಧರಿಸುತ್ತಿದ್ದರು. ಹಿಂದಿನ ಕಾಲದ ಪ್ರತಯೊಂದು ಆಚರಣೆಗೂ ಒಂದು ಅರ್ಥ ಇರುತ್ತಿದ್ದವು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಹಾಗಾಗಿ ಎಲ್ಲರು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

        ಇದೇ ಸಂದರ್ಭದಲ್ಲಿ ರೇಣುಕಾ ಪ್ರಕಾಶನದ ಗೌರವ ಅಧ್ಯಕ್ಷೆ ರೇಣಕಮ್ಮ ಶಿವಣ್ಣ ಅವರ ನಿಧನಕ್ಕೆ ಸಂತಾಪ ಸುಚಿಸಲಾಯಿತ್ತು.
ಹಿರಿಯ ಸಂಶೋಧಕ ಲಕ್ಷ್ಮಣ ತೆಲಗಾವಿ, ಕಾದಂಬರಿಕಾರ ಬಿ.ಎಸ್.ವೇಣು, ರಾಮಚಂದ್ರನಾಯಕ್, ಚಿತ್ರದುರ್ಗ ಇತಿಹಾಸ ಕೂಟದ ಮಹಂತೇಶ್, ಗೋಪಾಲಸ್ವಾಮಿ ನಾಯಕ, ಸಾಹಿತಿ ಎಸ್.ಆರ್.ಗುರುನಾಥ್, ಷರಿಫಾ ಬೀ, ಸಾಹಿತಿ ಉಜ್ಜಿನಪ್ಪ, ವಕೀಲ ಅಹೋಬಲ ನಾಯಕ, ರೇಣುಕಾ ಪ್ರಕಾಶನದ ಎನ್.ಬಿ.ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap