ತುಮಕೂರು
ಮಾನವಜೀವನದ ಈ ಪಾತ್ರೆಯನ್ನುತಾಮಸ ಮತ್ತುರಾಜಸ ಗುಣಗಳಿಂದ ತೊಳೆಯಬೇಕಾಗಿದೆ. ಪುರುಷ ಮಣಿಯ ಸ್ಪರ್ಶದಿಂದಎಲ್ಲಾ ಲೋಹಗಳು ಸುವರ್ಣವಾಗುವಂತೆತಟ್ಟೆ ತೊಳೆಯಲು ಉಪಯೋಗಿಸಿದ ಮಣ್ಣುಕೂಡ ಮಾನವಜೀವಿಗೆ ಸಹಾಯವಾಗುತ್ತದೆ. ಹೇಗೆಂದರೆ ಹುಳಿಯಾಗಿದ್ದ ಮಾವಿನಕಾಯಿ ಬಿಸಿಲಿನ ಝಳದಿಂದ ಮಧುರವಾದ ಹಣ್ಣಾಗಿರೂಪಾಂತರ ಹೊಂದಿ ಹೇಗೆ ಸಿಹಿ ನೀಡಿ ಮಾನಸಿಕ ಸ್ಥಿತ್ಯಂತರ ವಾಗುತ್ತದೆಯೋ ಹಾಗೆಯೇ ಮಳೆಬೀಜ ಹಾಡುಎಲ್ಲರ ಮನನೋಯಿಸುತ್ತದೆಎಂದು ನುಡಿದರು ಮಷಣಾಪುರದ ಸಾಮಾಜಿಕ ಕಾರ್ಯಕರ್ತ ಓಂಕಾರ ಸ್ವಾಮಿಯವರು.
ಅವರು ಗುಬ್ಬಿ ತಾಲ್ಲೂಕಿನ ಹೊಸಕೆರೆಯ ರಂಗಮನೆಯಲ್ಲಿ ಭೂಮಿ ದಿನಾಚರಣೆ ಪ್ರಯುಕ್ತ ತುಮಕೂರಿನ ಶ್ರೀ ರಂಗರಂಗ ಹವ್ಯಾಸಿ ಕಲಾವೃಂದ ಏರ್ಪಡಿಸಿದ್ದ ‘ಆರಂಭ’ ಕಾದಂಬರಿಯ ‘ಮುಂಗಾರು’ ವಿಷಯಕುರಿತು ಪ್ರಯೋಗಿಸಿದ ಏಕವ್ಯಕ್ತಿ ನಾಟಕದಉದ್ಘಾಟನೆಯನ್ನು ಹಾಜರಿದ್ದಗಣ್ಯರಜೊತೆ ಡೊಳ್ಳು, ಕಂಜರ, ಹಾರ್ಮೋನಿಯಂ ನುಡಿಸುವುದರ ಮೂಲಕ ನೆರವೇರಿಸಿದರು.
ಈಗ ಮುಂಗಾರು ಆರಂಭವಾಗಿದೆ. ಅಪ್ಪನ ಕಾಲದ ಮುಂಗಾರು ಸಮೃದ್ಧವಾಗಿದ್ದ ಕಾಲವನ್ನು ಕಂಡ ನಮಗೆ ಈಗಿನ ಮುಂಗಾರು ಬೇಸರ ತರಿಸುತ್ತಿದೆ. ಮುಂಗಾರು ಮಳೆಗಾಲ ಯುಗಾದಿಯಲ್ಲೇ ಆರಂಭವಾಗುತ್ತಿತ್ತು. ಹೊನ್ನಾರು ಹೂಡಿ ಊರು ಸುತ್ತಿ ಬಂದ ದಿನವೇ ರೈತರ ಬದುಕು ಪ್ರಾರಂಭ. ಹೊಗಳಲ್ಲಿ ‘ಆರು’ ಕಟ್ಟಿ ಸಂಭ್ರಮಿಸುತ್ತಿದ್ದರು. ಅವರ ಮುಖದಲ್ಲಿ ಮಂದಹಾಸದ ನಗೆ ಚೆಲ್ಲಿ ಸಂಸಾರವೇ ಹೊಲದಲ್ಲಿರುತ್ತಿತ್ತು. ಈಗ ಬರೀ ಗೋಳು ನೋಡುತ್ತಿದ್ದೇವೆಎಂದು ನೊಂದು ನುಡಿದರು ಕಲಾ ಪೋಷಕ ಟೈಲರ್‍ರವಿಕುಮಾರ್.
ಏಕವ್ಯಕ್ತಿರಂಗ ಪ್ರಯೋಗದ ‘ಮುಂಗಾರು’ ಪ್ರಾರಂಭವಾದುದೇಅತ್ತಾರೆ ಭೂಮ್ತಾಯಕಣ್ಣಾಗ ನೀರಿಲ್ಲ/ ಎದೆತುಂಬಾ ಬೋರುವೆಲ್ಲಿನ ಗಾಯಗಳೋ/ ಹಾಡೇ ಹೇಳುವಂತೆ ಇಂದಿನ ಭೂಮಿಯ ಸ್ಥಿತಿಗತಿಗಳನ್ನು ಮನ ಬಿಚ್ಚಿಡುವ ಮಳೆಬೀಜ ಹಾಡು ನಿಜಕ್ಕೂ ಅಭಿನಂದನಾರ್ಹ ವಾದುದು. ಅದನ್ನು ಬರೆದ ಕವಿ ಡಾ.ಕೆ.ವೈ. ನಾರಾಯಣಸ್ವಾಮಿಅವರ ಮನಸ್ಸು ಎಷ್ಟು ನೊಂದಿರಬೇಕು? ಎಂದು ಮನಬಿಚ್ಚಿ ನುಡಿದರು ಮನುಷ್ಯಜಾತಿತಾನೊಂದೇ ವೊಲಂನಲ್ಲಿ ಅಭಿನಯಿಸಿದ ಕಲಾವಿದ ಹೆಚ್.ಎನ್. ಕಾಂತರಾಜು,ಹಿಂದೂಸ್ಥಾನಿ ಸಂಗೀತ ವಿದ್ವಾಂಸಕೆಂಪಯ್ಯ ಪ್ರಾರ್ಥಿಸಿ ನಾಟಕಕ್ಕೆ ಸಂಗೀತ ನೀಡಿದರು. ಸಂಚಾಲಕ ಹೆಚ್.ಸಿ. ನರಸಿಂಹಮೂರ್ತಿ ಸ್ವಾಗತಿಸಿ ವಂದಿಸಿದರು. ರಂಗಕರ್ಮಿ ಹೆಚ್.ಎಂ. ರಂಗಯ್ಯ ಮುಂಗಾರುರಂಗ ಪ್ರಯೋಗದಲ್ಲಿ ಅಭಿನಯಿಸಿದರು. ಶ್ರೀ ರಂಗರಂಗ ಹವ್ಯಾಸಿ ಕಲಾವೃಂದದಕಲಾವಿದರು, ಭಜನಾ ಕಲಾವಿದರು ಕಾರ್ಯಕ್ರಮ ನೀಡಿದರು.