ಜೈ ಭೀಮ್ ಸಾರ್ವಜನಿಕ ಗ್ರಂಥಾಲಯ ವಾರ್ಷಿಕೋತ್ಸವ

ಹಿರಿಯೂರು :

      ಯಾವುದೇ ವ್ಯಕ್ತಿ ಶ್ರದ್ದೆ ಮತ್ತು ಆಸಕ್ತಿಯಿಂದ ಪುಸ್ತಕಗಳನ್ನು ಓದಿದಾಗ ಮಾತ್ರ ಜೀವನದಲ್ಲಿ ಏನನ್ನಾದರು ಸಾಧಿಸಲು ಸಾದ್ಯವಾಗುತ್ತದೆ ಎಂಬುದಾಗಿ ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರಾದ ಸಕ್ಕರ ರಂಗಸ್ವಾಮಿ ಹೇಳಿದರು.

      ನಗರದ ತಳವಾರ ಬೀದಿಯಲ್ಲಿ ಜೈ ಭೀಮ್ ಕ್ರೀಡಾ ಮತ್ತು ಕಲಾ ಸಾಂಸ್ಕತಿಕ ಯುವಕ ಸಂಘ ಹಾಗೂ ಜೈ ಭೀಮ್ ಸಾರ್ವಜನಿಕ ಗ್ರಂಥಾಲಯದ ವತಿಯಿಂದ ಆಯೋಜಿಸಿದ್ದ ಜೈ ಭೀಮ್ ಸಾರ್ವಜನಿಕ ಗ್ರಂಥಾಲಯದ ವಾರ್ಷಿಕೋತ್ಸವ ಹಾಗೂ ಪದ್ಮಶ್ರೀ ಡಾ|| ಎಸ್. ಆರ್. ರಂಗನಾಥನ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

     ಪುಸ್ತಕಗಳನ್ನು ಓದುವುದರಿಂದ ವ್ಯಕ್ತಿ ಪ್ರಬುದ್ಧರಾಗಲು ಸಾಧ್ಯವಾಗುತ್ತದೆ. ದೇಶದಲ್ಲಿ ಗ್ರಂಥಾಲಯಗಳ ಸ್ಥಾಪನೆಗೆ ಪದ್ಮಶ್ರೀ ಎಸ್.ಆರ್.ರಂಗನಾಥನ್‍ರವರ ಕೊಡುಗೆ ಅಪಾರವಾಗಿದೆ ಎಂಬುದಾಗಿ ಅವರು ಹೇಳಿದರು.

     ಒಂದು ಕಾಲದಲ್ಲಿ ಶಿಕ್ಷಣ ಎಂಬುದು ಕೆಲವೇ ಸಮುದಾಯಕ್ಕೆ ಮೀಸಲಾಗಿತ್ತು. ಆದರೆ ಇಂದು ಡಾ||ಬಿ.ಆರ್.ಅಂಬೇಡ್ಕರ್‍ವರ ಚಿಂತನೆಗಳು ಹಾಗೂ ಹೋರಾಟದ ಫಲವಾಗಿ ಸಮಾಜದ ಎಲ್ಲ ವರ್ಗದ ಜನರಿಗೂ ಶಿಕ್ಷಣ ದೊರೆಯುತ್ತಿದೆ. ಶ್ರೀಮಂತಿಕೆಗಿಂತ ವಿದ್ಯೆ ಬಹುದೊಡ್ಡದಾಗಿದ್ದು ಸಮಾಜದಲ್ಲಿನ ಅಸಮಾನತೆಯನ್ನು ತೊಲಗಿಸಿ ಸಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಬುನಾದಿಯಾಗುತ್ತದೆ ಎಂದರು.

       ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಜಿ.ಪಂ.ಸದಸ್ಯರಾದ ಕೆ.ಎಲ್.ರಾಮಸ್ವಾಮಿ ಮಾತನಾಡಿ ಶ್ರದ್ದೆ, ಶ್ರಮ, ಸಮಯ ಪ್ರಜ್ಞೆಯಿಂದ ಎಲ್ಲವನ್ನು ಸಾಧಿಸಬಹುದಾಗಿದೆ. ಈಗಿರುವ ಗ್ರಂಥಾಲಯ ಬೃಹತ್ತಾಗಿ ಬೆಳೆಯಲು ಎಲ್ಲರ ಸಹಕಾರ ಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೈ ಭೀಮ್ ಸಾರ್ವಜನಿಕ ಗ್ರಂಥಾಲಯದ ಸಂಸ್ಥಾಪಕ ಸಂಚಾಲಕರಾದ ಕೆ.ಜಿ.ಸದಾಶಿವಮೂರ್ತಿ, ಗ್ರಂಥಾಲಯ ರಾಜ್ಯ ಪದಾಧಿಕಾರಿ ಕೆ. ಲಕ್ಷ್ಮಿಕಾಂತ್, ಜನರಕ್ಷಣಾ ವೇದಿಕೆ ಅಧ್ಯಕ್ಷ ಆರನಕಟ್ಟೆ ಮಣಿ, ನೇತಾಜಿ ಯುವಕ ಸಂಘದ ಅಧ್ಯಕ್ಷ ಎಂ.ಮಂಜುನಾಥ್, ಶಿಕ್ಷಕರಾದ ಡಿ.ಸಿದ್ದೇಶ್ವರಸ್ವಾಮಿ, ಆರ್.ಮೈಲುಸ್ವಾಮಿ, ಮುಖಂಡರಾದ ಕೆ.ಹೆಚ್.ರುದ್ರಮುನಿ, ಹೆಚ್.ಶ್ರೀನಿವಾಸ್, ಹೆಚ್.ಬಸವರಾಜ್, ರಂಗನಾಥ್, ವಿರುಪಾಕ್ಷಮ್ಮ ಹಾಗೂ ಇತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link