ಬೆಂಗಳೂರು
ನಗರದ ಬನ್ನೇರುಘಟ್ಟ ರಸ್ತೆಯ ಜಯದೇವ ಜಂಕ್ಷನ್‍ನಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ಸುತ್ತಮುತ್ತಲಿನ ಕಟ್ಟಡಗಳನ್ನು ತೆರವುಗೊಳಿಸಬೇಕಾಗಿರುವುದರಿಂದ ಮೇಲ್ಸೇತುವೆ ತೆರವು ಕಾರ್ಯಾಚರಣೆ ವಿಳಂಬವಾಗಿದೆ.ನಮ್ಮ ಮೆಟ್ರೊ ನಿರ್ಮಾಣಕ್ಕಾಗಿ ಅಡ್ಡಿಯಾಗಿರುವ ಜಯದೇವ ಮೇಲ್ಸೇತುವೆಯನ್ನು ತೆರವುಗೊಳಿಸುವ ಕಾರ್ಯಕ್ಕೆ ನೀಡಿದ್ದ ಗಡುವು ಮುಕ್ತಾಯವಾಗಿರುವುದರಿಂದ ಬಿಎಂಆರ್‍ಸಿಎಲ್ ಈ ಸ್ಪಷ್ಟನೆ ನೀಡಿದೆ
ಮಾರ್ಚ್ ಅಥವಾ ಏಪ್ರಿಲ್ ತಿಂಗಳ ಆರಂಭದಿಂದಲೇ ಜಯದೇವ ಮೇಲ್ಸೇತುವೆ ತೆರವು ಕಾರ್ಯಾಚರಣೆ ಆರಂಭವಾಗಬೇಕಿತ್ತು.ಆದರೆ, 12 ವರ್ಷಗಳ ಈ ಹಳೆಯ ಸೇತುವೆಗಳನ್ನು ತೆರವುಗೊಳಿಸಲು ಕನಿಷ್ಠ 2 ರಿಂದ 3 ತಿಂಗಳ ಕಾಲ ತಗುಲಲಿದೆ.
ಮೇ ಅಂತ್ಯದೊಳಗೆ ಬನ್ನೇರುಘಟ್ಟದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ತಲುಪುವ ಕಡೆಗಿನ ಮೇಲ್ಸೇತುವೆಯನ್ನು ತೆರವುಗೊಳಿಸಲಾಗುವುದು. ನಂತರ ಮುಖ್ಯ ಮೇಲ್ಸೇತುವೆ ಭಾಗವನ್ನು ಮುಂದಿನ ದಿನಗಳಲ್ಲಿ ತೆರವುಗೊಳಿಸಲು ಬಿಎಂಆರ್‍ಸಿಎಲ್ ನಿರ್ಧರಿಸಿದೆ.
ಈ ಭಾಗದಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ. ಹಾಗಾಗಿ, ಏಕಾಏಕಿ ಜಯದೇವ ಮೇಲ್ಸೇತುವೆಯನ್ನು ತೆರವುಗೊಳಿಸುವುದು ಅಷ್ಟು ಸುಲಭ ಸಾಧ್ಯವಲ್ಲ. ಸಂಚಾರಿ ಪೊಲೀಸರ ನೆರವನ್ನು ಪಡೆದುಕೊಳ್ಳಬೇಕಿದೆ. ಹಾಗಾಗಿ, ತೆರವು ಕಾರ್ಯಾಚರಣೆ ವಿಳಂಬವಾಗಿದೆ.ಮೇಲ್ಸೇತುವೆ ತೆರವುಗೊಳಿಸುವ ಕಾರ್ಯಾಚರಣೆಗೂ ಮುನ್ನ ಹಲವು ಪರ್ಯಾಯ ವ್ಯವಸ್ಥೆಯನ್ನು ಕೈಗೊಳ್ಳಬೇಕಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು 2 ಹಂತಗಳಲ್ಲಿ ಮೇಲ್ಸೇತುವೆ ತೆರವು ಕಾರ್ಯಾಚರಣೆ ನಡೆಯಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ