ವಿಶ್ವ ಕಾರ್ಮಿಕರ ದಿನಾಚಾರಣೆ

ಹಾವೇರಿ :

    ಕಾಯಕವೇ ಕೈಲಾಸ ಎಂಬ ತತ್ವದ ಅಡಿಯಲ್ಲಿ ಬರುವ ಈ ವಿಶ್ವ ಕಾರ್ಮಿಕರ ದಿನಾಚಾರಣೆಯನ್ನು ಹಾವೇರಿ ಕೆ.ಇ.ಬಿ. ಕಾರ್ಮಿಕ ಸಂಘ ವಿಶೇಷವಾಗಿ ಈ ಬಾರಿ ಜಿಲ್ಲೆಯ ಬಸ್ಸ್ ನಿಲ್ದಾಣ ಹತ್ತಿರ ಚಪ್ಪಲಿಯನ್ನು ಹೊಲೆಯುವ ಕಾಯಕ ಮಾಡುವ ರಾಣಿ ಅರ್ಜುನ ಮಚಗಾರ ಅವರನ್ನು ಸನ್ಮಾನಿಸಲು ಮುಂದಾಗಿ ಎಲ್ಲರ ಮೆಚ್ಚಿಗೆ ಪಾತ್ರವಾಗಿದೆ.

     ಪ್ರತಿ ವರ್ಷ ಇಲ್ಲಿಯ ಕೆ.ಇ.ಬಿ. ಕಾರ್ಮಿಕ ನೌಕರರ ಸಂಘ ತುಂಬ ವಿಶಿಷ್ಟವಾಗಿ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಮೇ 1 ರಂದು ಆಚರಿಸುತ್ತಾ ಬಂದಿದೆ. ಇಲಾಖೆಯಲ್ಲಿ ಅತ್ಯತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದೆ. ಈ ಬಾರಿ ಆಯ್ಕೆಯಾದ 6 ಜನರಲ್ಲಿ ಅಸಂಘಟಿತ ವಲಯದಿಂದ ಶ್ರೀಮತಿ ರಾಣಿ ಅರ್ಜುನ ಕೂಡ ಒಬ್ಬರು.

     ಶ್ರೀಮತಿ ರಾಣಿ ಮೂಲತಃ ಪಾಂಡಿಚೇರಿ ಪ್ರಾವ್ಹೆನ್ಸಿಯ ಗೋರಿಮೂಡಿ ಗ್ರಾಮದವರು. ಮೂರು ಜನ ಮಕ್ಕಳ ತಾಯಿ. ಆರು ಮೊಮ್ಮಕ್ಕಳು. 9ನೇ ತರಗತಿಯವರೆಗೆ ಓದಿರುವ ಸುಶಿಕ್ಷಿತೆ. ತಂದೆ ಸೆಲ್ವ್‍ರಾಜ, ತಾವಿ ವೀರಮ್ಮ. 53 ಪ್ರಾಯದ ರಾಣಿಯವರ ಪತಿ ಅರ್ಜುನ್ ಸೇಲಂ. ಇಲ್ಲಿಯ ನಗರಸಭೆಯ ಜನಾನುರಾಗಿ ಕಾರ್ಮಿಕ ಜೊತೆಗೆ ರಂಗಭೂಮಿ ಕಲಾವಿದ.

      1984 ರಲ್ಲಿ ಪಾಂಡಿಚೇರಿಯಿಂದ ಬಂದು , ತಮಿಳುನಾಡಿನ ಅರ್ಜುನವರನ್ನು ಬೆಂಗಳೂರಲ್ಲಿ ಮದುವೆಯಾದವರು. ಮದುವೆ ಒಟ್ಟು ಖರ್ಚು 400 ರೂ ಮಾತ್ರ. ಪ್ರತಿ ದಿನ ಬೆಳಿಗ್ಗೆ 6 ರಿಂದ ಸೂರ್ಯಾಸ್ತದವರೆಗೆ ಇಲ್ಲಿಯ ಹೊಸಮನಿ ಸಿದ್ಧಪ್ಪ ವೃತದಲ್ಲಿರುವ ರೇಣುಕಾ ದರ್ಶನಿ ಎದರು ನಿತ್ಯ ಕಾಯಕ್ಕಾಗಿ ಠಿಕಾಣಿ.ಮಳೆ, ಗಾಳಿ ,ಬಿಸಿಲು ದೂಳುಗಳ ನಡುವೆ ಕಾಯಕದ ತಪಸ್ಸ. ಅದರಿಂದಲೇ ಉಪಜೀವನ.
ಕಾರ್ಮಿಕ ಸನ್ಮಾನ ಕುರಿತು ಕೇಳಿದರೆ ನಕ್ಕ ಬಿಡುತ್ತಾರೆ.

     ನಮ್ಮ ಕೈ ಕಾಲೇ ನಮ್ಮ ದುಡಿಯುವ ಆಳುಗಳು ಮಾರ್ಮಿಕವಾಗಿ ಉತ್ತರಿಸುತ್ತಾರೆ. ಅಸಂಘಟಿತ ಕಾರ್ಮಿಕ ಪ್ರತಿನಿಧಿಯಂತಿರುವ ಇಂಥವರನ್ನು ಗುರ್ತಿಸದೇ ಇನ್ನಾರನ್ನು ಗುರ್ತಿಸಬೇಕು ಎಂದು ಕಾರ್ಮಿಕ ಧುರೀಣ ವಿಜಯಕುಮಾರ ಮುದಕಣ್ಣನವರ ಎನ್ನುತ್ತಾರೆ. ನಮ್ಮ ಸಮಾಜ ಜೀವನವನ್ನು ಕಟ್ಟುವ ಇಂಥ ದುಡಿಮೆಗಾರರ ದುಡಿಮೆಯನ್ನು ಗುರುತಿಸಿ ಗೌರವಿಸುವ ಕೆ.ಇ.ಬಿ. ಕಾರ್ಮಿಕ ನೌಕರರ ಸಂಘದ ಕೆಲಸ ಶ್ಲಾಘನೀಯ . ಜನರ ನೋವಿಗೆ ನುಡಿಯುವವರೆ ಪ್ರಾಣ ಮಿತ್ರರು ಎಂದು ಬಂಡಾಯ ಶೈಲಿಯಲ್ಲಿಯೇ ಕವಿ ಸತೀಶ ಕುಲಕರ್ಣಿ ಯವರು ಹೇಳುತ್ತಾರೆ. ಇಂತಹ ಎಲೆ ಮರೆಯ ಕಾಯಿಯಂತೆ ಶ್ರಮಜೀವಿಯಾಗಿ ಕೆಲಸ ಮಾಡುವ ವ್ಯಕ್ತಿಗಳನ್ನು ವಿವಿಧ ಸಂಘ ಸಂಸ್ಥೆಗಳು ಸನ್ಮಾನ ಮಾಡುವ ಮೂಲಕ ದುಡಿಯುವ ವರ್ಗಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link