ಗೋಡೆ ಕುಸಿತ ಪ್ರಕರಣ: ಗೋಶಾಲಾ ಟ್ರಸ್ಟ್ ಮೇಲೆ ಎಫ್ ಐ ಆರ್ ..!!

ಬೆಂಗಳೂರು

    ಕಾಂಪೌಂಡ್ ಗೋಡೆ ಕುಸಿದು ಬಿದ್ದು ಶಿವ ಕೈಲಾಸ ರೆಡ್ಡಿ ಅವರ ತಲೆಗೆ ಪೆಟ್ಟು ಬಿದ್ದು ಮೃತಪಟ್ಟ ಪ್ರಕರಣದ ಸಂಬಂಧ ಗೋಶಾಲಾ ಟ್ರಸ್ಟ್ ಮೇಲೆ ನಗರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ

     ಗರುಡಾಚಾರ್ ವಾರ್ಡ್‍ನಲ್ಲಿರುವ ಖಾಸಗಿ ಒಡೆತನದ ಗೋಶಾಲೆ ಟ್ರಸ್ಟ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಸೂಚನೆ ನೀಡಿದ ಬೆನ್ನಲ್ಲೇ ಎಫ್‍ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಪ್ರಕರಣದ ಸಂಬಂಧ ಮಾತನಾಡಿದ ಮೇಯರ್ ಶಿವ ಕೈಲಾಸ ರೆಡ್ಡಿ ಅವರು ಆಂಧ್ರಮೂಲದವರಾಗಿದ್ದು, ಕಳೆದ 6 ತಿಂಗಳ ಹಿಂದೆ ಟೀಮ್ ಲೀಸ್ ಕಂಪನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಅವರು ತಿಳಿಸಿದರು.

        ಕಾಂಪೌಂಡ್ ಗೋಡೆಯ ಎತ್ತರ 6 ಅಡಿಗಳು ಮತ್ತು 400 ಮೀಟರ್ ಉದ್ದವಿದ್ದು,ಕಾಂಪೌಂಡ್ ಗೋಡೆಯ ಮಧ್ಯ ಭಾಗದಲ್ಲಿ ಕುಸಿದು ಪಾದಚಾರಿ ರಸ್ತೆಯ ಮೇಲೆ ತೆರಳುತ್ತಿದ್ದ ಶಿವ ಕೈಲಾಸ ರೆಡ್ಡಿ ಅವರ ತಲೆಯ ಮೇಲೆ ಬಿದ್ದಿದೆ ಎಂದರು.

       ಕಾಂಪೌಂಡ್ ಗೋಡೆ ಕುಸಿದು ಒಬ್ಬ ವ್ಯಕ್ತಿ ಮೃತಪಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಕಾನೂನಿನ ಮೂಲಕ ಸಂಬಂಧಪಟ್ಟವರ ಮೇಲೆ ಕ್ರಮಕೈಗೊಳ್ಳುವಂತೆ ಸೂಚಿಸಿರುವುದಾಗಿ ತಿಳಿಸಿದರು.ನಗರದಲ್ಲಿ ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮೇಯರ್ ಅವರು ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಲ್ಪಟ್ಟಿರುವ ಕೆ.ಆರ್.ಪುರಂ, ಸುತ್ತಮುತ್ತಲಿನ ಪ್ರದೇಶ ಸಿಲ್ಕ್ ಬೋರ್ಡ್ ಜಂಕ್ಷನ್, ಮಡಿವಾಳ ಪ್ರದೇಶ ಲೀ ಮೆರಿಡಿಯನ್ ಹೊಟೇಲ್ ನ ಅಂಡರ್ ಪಾಸ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸೂಕ್ಷ್ಮ ಪ್ರದೇಶಗಳಲ್ಲಿ ಮಳೆ ಅನಾಹುತಗಳು ಉಂಟಾಗದಂತೆ ಈಗಿನಿಂದಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

     ಲೀ ಮೇರಿಡಿಯನ್ ಹೊಟೇಲ್ ಬಳಿ ಇರುವ ಅಂಡರ್ ಪಾಸ್‍ನಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link