ಹಾನಗಲ್ಲ
ಕಾರ್ಮಿಕ ಸಂಘಟನೆಗಳು ಸರಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಕಾರ್ಮಿಕರ ಮಕ್ಕಳ ಭವಿಷ್ಯಕ್ಕೆ ಬುನಾದಿಯಾಗಬೇಕಾಗಿದ್ದು ಸಂಘಟನೆ ಬಲಗೊಂಡರೆ ಕಾರ್ಮಿಕರು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ ತಿಳಿಸಿದರು.
ಬುಧವಾರ ಹಾನಗಲ್ಲಿನ ಕಾಂಗ್ರೇಸ್ ಕಾರ್ಯಾಲಯದಲ್ಲಿ ಆಯೋಜಸಿದ ಕಾರ್ಮಿಕ ದಿನಾಚರಣೆ ಹಾಗೂ ಕಾರ್ಮಿಕ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು, 144 ಅಸಂಘಟಿತ ಕಾರ್ಮಿಕ ವಿಭಾಗಗಳಿದ್ದು ಅವುಗಳ ಯೋಗಕ್ಷೇಮಕ್ಕೆ ಅಗತ್ಯಕ್ಕೆ ಅಸಂಘಟಿತ ಕಾರ್ಮಿಕರ ಪರವಾಗಿ ನಿಂತಿದ್ದಾರೆ. ಕಾರ್ಮಿಕ ಬೇಡಿಕೆಗಳು ಈಡೇರಬೇಕು. ಬಂಡವಾಳಶಾಹಿಗಳ ಕೈಯಲ್ಲಿ ನಲುಗಿದ ಕಾರ್ಮಿಕರ ಸಹಾಯಕ್ಕೆ ರಾಹುಲ್‍ಗಾಂಧಿ ನಿಂತಿದ್ದಾರೆ.
ಎಲ್ಲರಿಗೂ ಸಮಪಾಲು ಸಮಬಾಳು ನಿಯಮ ಜಾರಿಯಾಗಬೇಕು. ಆಹಾರ ಭದ್ರತೆ ಕಾನೂನು ಕಾಂಗ್ರೇಸ್ ಅಧಿಕಾರದಲ್ಲಿ ಜಾರಿಗೆ ಬಂದಿದೆ. ಆರೋಗ್ಯ ಕಾರ್ಡ, ಬಡ್ಡಿರಹಿತ ಸಾಲ ಸೌಲಭ್ಯ, ಬೀದಿ ವ್ಯಾರಸ್ಥರಿಗೆ ನೆರವು ಸೇರಿದಂತೆ ಹತ್ತು ಹಲವು ಯೋಜನೆಗಳು ದುಡಿವ ವರ್ಗಕ್ಕಾಗಿ ಕಾಂಗ್ರೇಸ್ ಸಕಾರದಿಂದಲೇ ಆರಂಭವಾಗಿವೆ ಎಂದರು.
ಜಿಲ್ಲಾ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ನಿಯಾಜ್ ಶೇಖ ಮಾತನಾಡಿ, ದೇಶ ಕಟ್ಟುವಲ್ಲಿ ಕಾರ್ಮಿಕ ಶ್ರಮ ದೊಡ್ಡದಾಗಿದೆ. ಬಡತನ ನಿರ್ಮೂಲನೆಯಲ್ಲಿ ಕಾರ್ಮಿಕರಿಗೆ ಯೋಜನೆ ರೂಪಿಸುವುದು ಅತ್ಯಂತ ಮುಖ್ಯ. ಮಕ್ಕಳ ವಿದ್ಯಾರ್ಜನೆಗೆ ಸಹಾಯ, ಮಾಶಾಸನ, ನಿವೇಶನ ಸೇರದಂತೆ ಸೌಲಭ್ಯಗಳನ್ನು ನೀಡಬೇಕು. ಬೀಡಿ ಕಾರ್ಮಿಕರಿಗೆ ಸರಕಾರ ಸೌಲಭ್ಯಗಳು ಸಿಗತ್ತಿಲ್ಲ. ಇವರಿಗೆ ಕಾರ್ಮಿಕ ಸಂಘದಲ್ಲಿ ನೋಂದಿಣಿ ಆಗುತ್ತಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಖಾದರಮೊಹಿದ್ದೀನ ಶೇಖ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಬಸೆಗಣ್ಣಿ, ರಾಜ್ಯ ಉಪಾಧ್ಯಕ್ಷ ವೀರನಗೌಡ ಪಾಟೀಲ, ಮಂಜುನಾಥ ಸುಣಗಾರ, ನಜೀರ ಗಿರಿಸಿನಕೊಪ್ಪ, ಎಂ.ಎಸ್.ಪಾಟೀಲ, ಚಂದ್ರಣ್ಣ ಪ್ಯಾಟಿ, ಖ್ವಾಜಮೊಹಿದ್ದೀನ ಅಣ್ಣೀಗೇರಿ, ಎಸ್.ಎಸ್.ಹಿರೇಮಠ, ಹನುಮಂತಪ್ಪ ಕಲ್ಲೇರ, ಅನುಸೂಯಾ ಬಳಿಗಾರ, ಸಿ.ಎಸ್.ಬಡಿಗೇರ, ಪ್ರಣಿತಾ ಕಿರವಾಡಿ, ಅಕ್ಕಮ್ಮ ಹಿರೇಮಠ, ಮೊದಲಾದವರಿದ್ದರು.