ಬಳ್ಳಾರಿ:
ಅಮ್ಮಾಶ್ರೀ ಕಸ್ತೂರಿ ಕನ್ನಡ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷರಾದ ಶ್ರೀ ಎ.ಜಾನ್ಬಾಸ್ಕೋ ಅವರ ನೇತೃತ್ವದಲ್ಲಿ ಬಳ್ಳಾರಿ ನಗರ ಮತ್ತು ಬಳ್ಳಾರಿ ಗ್ರಾಮೀಣ ಸಂಘಗಳ ಅಧ್ಯಕ್ಷರು ಮತ್ತು ಸದಸ್ಯರುಗಳೆಲ್ಲರು ಸೇರಿ ಇದು ಬಳ್ಳಾರಿ ನಗರದ ಜೋಡು ರಸ್ತೆಯಲ್ಲಿರುವ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಕಾರ್ಮಿಕರ ದಿನಾಚರಣೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಆರಂಭದಲ್ಲಿ ಸಂಘದ ನಾಮ ಫಲಕವನ್ನು ಉದ್ಘಾಟಿಸಿ, ಕಛೇರಿಯಲ್ಲಿ ಹಿಂದು-ಮುಸ್ಲಿಂ-ಕ್ರೈಸ್ತ್ರ ಮಹನೀಯರ ಫೋಟೋಗಳಿಗೆ ಗೌರವ ಸಲ್ಲಿಸಿ, ಸಿಹಿ ಹಂಚಿ, ನಂತರ ಸರ್ವ ಸದಸ್ಯರ ಮಹಾಸಭೆಯಲ್ಲಿ ಹಿರಿಯರಾದ ಶ್ರೀ ಕಲ್ಲುಕಂಬ ಪಂಪಾಪತಿ, ಕನ್ನಡ ಹೋರಾಟಗಾರರಾದ ಚಾನಾಳ್ ಶೇಖರ್ ಮತ್ತು ಅಪಾರ ಕಾರ್ಮಿಕರ ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಜಾನ್ಬಾಸ್ಕೋ ಅವರು, ಕಾರ್ಮಿಕರಿಗೆ, ಸಿದ್ದರಾಮಯ್ಯನವರ ಅವಧಿಯಲ್ಲಿ ಕೊಡಮಾಡಿದ್ದ ಐದು ಲಕ್ಷದ ಅಫಘಾತ ವಿಮೆ ಪತ್ರಗಳನ್ನು ವಿತರಿಸಲಾಯಿತು.
ಆಟೋ ಲೈಸೆನ್ಸ್ಗಳನ್ನು ರೆಡ್ಕ್ರಾಸ್ ಸಂಸ್ಥೆ ವಿಮೆ ಪತ್ರ ವಿತರಿಸಿ, ಕಾರ್ಮಿಕರು, ಕಾಯ, ವಾಚಾ, ಮನಸಾ, ಶ್ರಮವಹಿಸಿ ದುಡಿದು, ನೋವು, ನಲಿವು, ಉಲ್ಲಾಸ, ದುಃಖದಿಂದ ಬರುವ ಮಹಿಳೆಯರು, ಚಾಲಕರು, ವಿದ್ಯಾರ್ಥಿಗಳು, ಹಿರಿಯರ ನಾಗರೀಕರು ನಮ್ಮನ್ನು ನಂಬಿ, ಹೊತ್ತಿಲ್ಲದೆ ಹೊತ್ತಲ್ಲಿ ಬಂದರೂ, ಆತ್ಮಿಯತೆಯಿಂದ ಮಾನವೀಯತೆಯಿಂದ, ಕಾರ್ಯನಿರ್ವಹಿಸಿದ ಸ್ವತಃ ಅಪತ್ಭಾಂಧವರಾಗಬೇಕು, ಮಾನವ ಸೇವೆಯೇ ಮಹದೇವನ ಸೇವೆಯೆಂದು ವೃತಿ ಗೌರವ ಉಳಿಸಬೇಕು, ಜಗತ್ ರಕ್ಷಕ ಶ್ರೀ ಕೃಷ್ಣ ಪರಮಾತ್ಮನೇ.
ಮಹಾಭಾರತದಲ್ಲಿ ಮಧ್ಯ ಪಾಂಡವ ಅರ್ಜುನನ ಸಾರಥಿಯಾದ ದಾಖಲೆ ಇದೆ. ಆಗಿನ ಶಲ್ಯ ಮಹಾರಾಜ ಕೂಡ ಕರ್ಣನ ಸಾರಥಿ ಆಗಿ ವೃತ್ತಿ ಗೌರವ ಕಾಪಾಡಿದ್ದಾರೆ. ತಂಗಿ ಪಂಚಾಲಿಯ ವಸ್ತ್ರಾಪಹರಣ ಕಾಲದಲ್ಲಿ ಸಹೋದರ ಶ್ರೀ ಕೃಷ್ಣನೇ ಆಕೆಯ ಮಾನ ಉಳಿಸಿದ ಅಣ್ಣನಂತೆ, ನಾವು ಕೂಡ ಸರಿ ರಾತ್ರಿಯಲ್ಲಿ, ಅನಾಥಸ್ಥಿತಿ ಮತ್ತು ಅಪಾಯ ಸ್ಥಿತಿಯಲ್ಲಿ ಬರುವ ನಮ್ಮೆಲ್ಲರ ಮನೆಗಳ ಸಹೋದರಿಯರಿಗೆ ಅಣ್ಣಂದಿರಾಗಬೇಕು ಎಂದು ಹಿರಿಯರಾದ ಕಲ್ಲುಕಂಭ ಪಂಪಾಪತಿಯವರು, ಹೇಳಿದರು.
ಮುಂದಿನ ಕರ್ನಾಟಕ ರಾಜ್ಯೋತ್ಸಾವ ದಿನದಂದು ಸಂಘದ ಎಲ್ಲಾ ನೋಂದಿತ ಜಾಲಕರಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸಮವಸ್ತ್ರ ವಿತರಿಸಿ, ನಿಮ್ಮೆಂದಿಗೆ ಸಹಕರಿಸುತ್ತೇವೆ ಮತ್ತು ನಗರದಲ್ಲಿ ನಿಮ್ಮ ಅಮೂಲ್ಯ ಸೇವೆಯನ್ನು ನಿರೀಕ್ಷಿಸುತ್ತೇವೆ ಎಂದು ಅಧ್ಯಕ್ಷರಾದ ಚಾನಾಳ್ ಶೇಖರ್ ಹೇಳಿದರು. ಕರ್ನಾಟಕ ಸರಕಾರ ಮತ್ತು ಬಳ್ಳಾರಿ ಮಹಾನಗರದ ನಾಯಕರು ಕಾರ್ಮಿಕ ಬಂಧುಗಳೊಂದಿಗೆ ನಡೆದುಕೊಳ್ಳುವ ಆತ್ಮೀಯತೆಯ ಸಹಕಾರವನ್ನು ಸಂಘದ ಅಧ್ಯಕ್ಷರಾದ ಶ್ರೀ ಎ.ಜಾನ್ಬಾಸ್ಕೋ ಮತ್ತಿತರ ಮುಖಂಡರು ಸ್ಮರಿಸಿ, ಕೃತಜ್ಞತೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರ ಓ.ಪಿ.ಡಿ. ವೆಂಕಟೇಶ್, ಗ್ರಾಮಾಂತರ ಅನ್ವಾರಭಾಷ್, ನಗರ ಉಪಾಧ್ಯಕ್ಷರು ಗಂಗಾಧರ, ಚೈನ ವೆಂಕಟೇಶ್, ಸೈಯದ್ಭಾಷ ಜಂಟಿ ಕಾರ್ಯದರ್ಶಿ, ಪ್ರದ್ರೀಪ್ ಜಂಟಿ ಕಾರ್ಯದರ್ಶೀ, ಇವರುಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








