ಸಂಗೀತ ಸಂಯೋಜಕನ ಪ್ರಕರಣ : ಮೂವರ ಬಂಧನ..!!!

ಬೆಂಗಳೂರು

             ಸಂಗೀತ ಸಂಯೋಜಕ ಮಧುಬನ್ ಎಂಬುವರನ್ನು ಅಪಹರಿಸಿ ಮೊಬೈಲ್, ಲ್ಯಾಪ್‍ಟಾಪ್, 10 ಸಾವಿರ ನಗದು ದೋಚಿ ಎಟಿಎಂನ ಪಿನ್ ಕೊಡಲು ಪ್ರತಿರೋಧ ತೋರಿದ್ದಕ್ಕೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಕೋರಮಂಗಲ ಪೆÇಲೀಸರು ಯಶಸ್ವಿಯಾಗಿದ್ದಾರೆ.

         ಕಮ್ಮನಹಳ್ಳಿಯ ನಿಕುಲ್ ಅಲಿಯಾಸ್ ಬೆನ್ನಿ (27), ಕಮ್ಮನಹಳ್ಳಿ ಕ್ರಾಸ್‍ನ ಸ್ಟೀಫನ್ ಅಲಿಯಾಸ್ ಸ್ಪೀಫನ್ ರಾಜ್ (25), ಹೊರಮಾವುವಿನ ವೇಣು ಮಾದವ್ (22) ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರನ್ನು ನಡೆಸಿದ ವಿಚಾರಣೆಯಲ್ಲಿ ನೀಡಿದ ಮಾಹಿತಿ ಆಧರಿಸಿ ಕೇರಳ ಮೂಲದ ಮೂವರು ಗಾಂಜಾ ಮಾರಾಟಗಾರರನ್ನು ಬಂಧಿಸಲಾಗಿದೆ ಅಪಹರಣ ಹಲ್ಲೆ

           ಆರೋಪಿಗಳು ಕಳೆದ ಏ. 22ರಂದು ಕೋರಮಂಗಲದ ಮೊದಲ ಬ್ಲಾಕ್‍ನ ಮನೆಗೆ ನುಗ್ಗಿ ಸಂಗೀತ ಸಂಯೋಜಕ ಮಧುಬನ್ ಸೇರಿ ಮೂವರನ್ನು ಬೆದರಿಸಿ ಮೊಬೈಲ್, ಲ್ಯಾಪ್‍ಟಾಪ್, 10 ಸಾವಿರ ನಗದನ್ನು ದೋಚಿದ್ದಾರೆ

              
ಮಧುಬನ್ ಅವರನ್ನು ಕಾರಿನಲ್ಲಿ ಅಪಹರಿಸಿ ಎಟಿಎಂ ಕಾರ್ಡ್‍ನಲ್ಲಿದ್ದ ಹಣ ದೋಚಲು ಪಿನ್ ನಂಬರ್ ಕೊಡುವಂತೆ ಕೇಳಿದ್ದು, ವಿರೋಧ ವ್ಯಕ್ತಪಡಿಸಿದ್ದರಿಂದ ಹಲ್ಲೆ ನಡೆಸಿ ಕೆಆರ್ ಪುರಂ, ಆವಲಹಳ್ಳಿ ರಸ್ತೆಯ ಮಾರ್ಗ ಮಧ್ಯೆ ಮುಳ್ಳು ತಂತಿ ಮೇಲೆ ತಳ್ಳಿ ಪರಾರಿಯಾಗಿದ್ದರು.
ಸ್ಥಳೀಯರ ನೆರವಿನೊಂದಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಪಡೆದ ನಂತರ ಮಧುಬನ್ ಅವರು ನೀಡಿದ ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಕೋರಮಂಗಲ ಇನ್ಸ್‍ಪೆಕ್ಟರ್ ಪ್ರಶಾಂತ್ ಆರ್. ವರ್ಣಿ ಅವರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಡಿಸಿಪಿ ಇಶಾಪಂತ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link