ನೆರೆ ಸಂತ್ರಸ್ತ ಜಿಲ್ಲೆಗಳಲ್ಲಿ ಶೈಕ್ಷಣಿಕ ವರ್ಷ ಮರು ಪರಿಶೀಲನೆ ಮಾಡಿ : ಎಚ್ ಕೆ ಪಾಟೀಲ್

ಬೆಂಗಳೂರು

     ನೆರೆಯಿಂದ ಸಂಪೂರ್ಣ ಶಾಲೆಗಳು ಬಿದ್ದಿರುವ ಕಡೆಗಳಲ್ಲಿ ಶೈಕ್ಷಣಿಕ ವರ್ಷವನ್ನು ಮರುಪರಿಶೀಲನೆ ಮಾಡಿ ನಿಯಮ ತನ್ನಿ. ಇದೇನು ದೊಡ್ಡ ಕೆಲಸವಲ್ಲ ಎಂದು ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ ಶುಕ್ರವಾರ ವಿಧಾನಸಭೆಯಲ್ಲಿ ಸಲಹೆ ಮಾಡಿದರು.ಶೈಕ್ಷಣಿಕ ವರ್ಷವನ್ನು ಮರುಪರಿಶೀಲನೆ ಮಾಡಿ ಅದನ್ನು ಪ್ರವಾಹ ಪೀಡಿತ ಸ್ಥಳಗಳಲ್ಲಿ ಅದನ್ನು ವಿಸ್ತರಣೆ ಮಾಡಬೇಕು. ಇಲ್ಲವಾದರೆ ನಮ್ಮ ಮಕ್ಕಳು ಹಾಳಾಗಿ ಹೋಗುತ್ತವೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.

     ಶಾಲೆಗಳೇ ಇಲ್ಲದ ಮೇಲೆ ಮಕ್ಕಳು ಸುಮ್ಮನೆ ಓಡಾಡಿ ಹಾಳಾಗುವುದಿಲ್ಲವೇ? ಸರ್ಕಾರಕ್ಕೆ ಇದು ಅರ್ಥವಾಗುವುದಿಲ್ಲವೇ ಎಂದು ಕೇಳಿದರು.ಸಂಸದರಾದ ಪ್ರತಾಪಸಿಂಹ ಅವರನ್ನು ತರಾಟೆಗೆ ತೆಗೆದುಕೊಂಡ ಅವರು ನೆರೆ ಬಗ್ಗೆ ಹೇಳಿದ್ದು ಇಡೀ ನಾಡು ನೋಡಿದೆ; ಹೀಗೆ ಮಾತನಾಡುವ ಸಂಸದ ಕೇಂದ್ರದಲ್ಲಿ ಪ್ರಧಾನಿ ಮೋದಿಯವರಿಗೆ ಏನು ಹೇಳಿರಬಹುದು ಲೆಕ್ಕಹಾಕಿ ಎಂದು ಖಂಡಿಸಿದರು.

     ಜನರನ್ನು ಮಾನವೀಯ ದೃಷ್ಟಿಯಿಂದ ನೋಡದ ಸರ್ಕಾರ ಹೆದರಿ ಈ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಿಲ್ಲ ಎಂದು ಟೀಕಿಸಿದರು. ಎಚ್.ಕೆ.ಪಾಟೀಲ ಸೇರಿದಂತೆ ಸರ್ವಪಕ್ಷಗಳ ಸದಸ್ಯರು ತಮ್ಮ ತಮ್ಮ ಭಾಗದ ಪ್ರವಾಹ ಪರಿಸ್ಥಿತಿಯನ್ನು ಬಿಚ್ಚಿಟ್ಟರು.ಈ ಭಾರಿ ಸಂಭವಿಸಿದ ಪ್ರವಾಹ ಹಾಗು ನೆರೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸದನ ನಿರ್ಣಯ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.ಪ್ರವಾಹ ಹಾಗೂ ನೆರೆ ಪರಿಹಾರ ಕಾರ್ಯವನ್ನು ಮೇಲ್ವಿಚಾರಣೆ ನಡೆಸಲು ಸರ್ಕಾರ ತಕ್ಷಣ ಜಂಟಿ ಸದನ ಸಮಿತಿ ರಚಿಸಬೇಕೆಂದು ಅವರು ಸರ್ಕಾರಕ್ಕೆ ಆಗ್ರಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link