ಮೈಸೂರು:
ಕಾಡಾನೆ ದಾಳಿಗೆ ಕೂಲಿ ಕೆಲಸಕ್ಕೆ ಬಂದಿದ್ದ ರಾಯಚೂರು ಮೂಲದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಎಚ್.ಡಿ.ಕೋಟೆ ತಾಲೋಕಿನ ಹೈರಿಗೆ ಮಾದಾಪುರ ಸಮೀಪದಲ್ಲಿ ನಡೆದಿದೆ.
ರಾಯಚೂರು ಜೆಲ್ಲೆ ಕಕ್ಕೇರಿ ಗ್ರಾಮದ ಹನುಮಂತಪ್ಪ (50) ಮೃತ ವ್ಯಕ್ತಿ. ನಾಲೆ ಕಾಂಕ್ರೀಟ್ ಕೆಲಸಕ್ಕೆ ರಾಯಚೂರಿನಿಂದ 8 ಮಂದಿ ಕೂಲಿ ಕಾರ್ಮಿಕರು ಆಗಮಿಸಿದ್ದರು. ಇಂದು ಮುಂಜಾನೆ ಕಾರ್ಮಿಕರೆಲ್ಲ ನಾಲೆ ಕೆಲಸದಲ್ಲಿ ತೊಡಗಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿ ಕಾಲಿನಿಂದ ಕಾರ್ಮಿಕನನ್ನು ತುಳಿದಿದೆ. ಪರಿಣಾಮ ಸ್ಥಳದಲ್ಲೇ ಹನುಮಂತಪ್ಪ ಸಾವನ್ನಪ್ಪಿದ್ದಾರೆ.
ಶುಕ್ರವಾರ ರಾತ್ರಿ ಹೈರಿಗೆ-ಮಾದಾಪುರ ಸಮೀಪದ ಜಮೀನಿಗೆ ಕಾಡಾನೆಗಳು ನುಗ್ಗಿದ್ದವು. ಈ ವೇಳೆ ರೈತರು ಆನೆಯನ್ನ ಓಡಿಸಲು ಮುಂದಾಗಿದ್ದು, ಜಮೀನಿಂದ ನಾಲೆಯತ್ತ ಬಂದ ಕಾಡಾನೆ ಕಾರ್ಮಿಕನ ಮೇಲೆ ದಾಳಿ ಮಾಡಿ ಬಲಿ ಪಡೆದಿದೆ.
ಬೇರೆ ಊರಿನಿಂದ ಜೀವನ ನಡೆಸಲು ಕೆಲಸಕ್ಕೆಂದು ಬಂದ ಹನುಮಂತಪ್ಪ ಕಾಡಾನೆ ದಾಳಿಗೆ ಬಲಿಯಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
