ಹಾವೇರಿ :
ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಸಂಸ್ಥಾಪಕ ಅಧ್ಯಕ್ಷರಾದ ಏನ್ ಮುತ್ತಪ್ಪ ರಾಯ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.ಸ್ಥಳೀಯ ನಾಗ್ರೇಂನಮಟ್ಟಿ ಯಲ್ಲಿರುವ ವೃದ್ರಾಶ್ರಮದ ವೃದ್ಧರಿಗೆ ಸಿಹಿ ಹಂಚುವ ಮೂಲಕ ಆಚರಿಸಲಾಯಿತು.
ಮುಖಂಡ ರಮೇಶ್ ಆನವಟ್ಟಿ ಮಾತನಾಡಿ ಅಣ್ಣ ಮುತ್ತಪ್ಪ ರಾಯ್ ಅವರು ಬಡವರ ಮತ್ತು ದೀನದಲಿತರ ಏಳಿಗೆಗೆ ಅವರು ಸದಾ ಶ್ರಮಿಸುತ್ತಿದ್ದು ಮತ್ತು ರಾಜ್ಯದಲ್ಲಿ ಭ್ರಷ್ಟಾಚಾರವನ್ನು ತೊಲಗಿಸಲು ದೇವರು ಇನ್ನೂ ಹೆಚ್ಚು ಆಯುಷ್ಯ ಆರೋಗ್ಯವನ್ನು ನೀಡಲಿ ಎಂದು ಮಾತನಾಡಿದರು.ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಪಿಈ ಮೋಹನ್ ಅವರು ಮತ್ತು ಎಸ್ಸಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷರಾದ ಅಂತ ಸುಭಾಷ್ ಬೆಂಗಳೂರು ಅವರು ಜಿಲ್ಲಾ ಉಪಾಧ್ಯಕ್ಷರಾದ ಸತೀಶ್ ಮಡಿವಾಳರ್ ಸಂಜಯಗಾಂಧಿ ಸಂಜೀವಣ್ಣ ನವರ್ ಪ್ರಧಾನ ಕಾರ್ಯದರ್ಶಿಯಾದ ಶಾಹಿದ್ ದೇವಿ ಹೊಸೂರ್ ಮೌನೇಶ್ಪಾಟೀಲ್ ಸಚಿನ್ ಉಪ್ಪಾರ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
