ಬಸವಪ್ರಭುಶ್ರೀ ನೇತೃತ್ವದಲ್ಲಿ ಬಸವ ಪ್ರಭಾತ್ ಫೇರಿ

ದಾವಣಗೆರೆ:

       ಇಲ್ಲಿನ ಬಸವಕೇಂದ್ರ, ವಿರಕ್ತಮಠ, ವೀರಶೈವ ತರುಣ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ಪ್ರಯುಕ್ತ ಹಮ್ಮಿಕೊಂಡಿರುವ ಐದನೇ ದಿನದ ಬಸವ ಪ್ರಭಾತಪೇರಿಯು ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿತು.

       ನಗರದ ದೊಡ್ಡಪೇಟೆಯ ಶ್ರೀವಿರಕ್ತಮಠದ ಆವರಣದಿಂದ ಶ್ರೀಬಸವಪ್ರಭು ಸ್ವಾಮೀಜಿ ಅವರ ನೇತೃತ್ವದಲ್ಲಿ ಆರಂಭವಾದ ಬಸವ ಪ್ರಭಾತಪೇರಿ ಶ್ರೀವೀರಮದಕರಿ ನಾಯಕ ವೃತ್ತ, ಬೂದಾಳ ರಸ್ತೆ, ದುರ್ಗಾಂಬಿಕಾ ದೇವಸ್ಥಾನ ಹಿಂಭಾಗದ ರಸ್ತೆ, ಕುಂಬಾರ ಪೇಟೆ, ಹಗೇದಿಬ್ಬ ಸರ್ಕಲ್, ಕಾಳಿಕಾದೇವಿ ರಸ್ತೆ ಮಾರ್ಗವಾಗಿ ವಾಪಾಸು ವಿರಕ್ತಮಠ ತಲುಪಿ ಮುಕ್ತಾಯವಾಯಿತು.

       ಪ್ರಭಾತಪೇರಿಯಲ್ಲಿ ದಾರಿಯುದ್ದಕ್ಕೂ ಭಕ್ತರು ಶ್ರೀಗಳನ್ನು ಭಕ್ತಿಪೂರ್ವಕವಾಗಿ ಮನೆ ಅಂಗಳದಲ್ಲಿ ರಂಗೋಲಿ ಹಾಕಿ ಸ್ವಾಗತಿಸಿದರು. ಮಾಜಿ ಮೇಯರ್ ಎಚ್.ಬಿ.ಗೋಣೆಪ್ಪ, ಕುರುಬರಕೇರಿ ರಾಜು ಸೇರಿದಂತೆ ಇತರೆ ಭಕ್ತರು ಮನೆ ಬಾಗಿಲಿಗೆ ಬಂದ ಬಸವಪ್ರಭು ಶ್ರೀಗಳ ಆಶೀರ್ವಾದ ಪಡೆದರು.

        ಪ್ರಭಾತ್‍ಫೇರಿಯಲ್ಲಿ ವೀರಶೈವ ತರುಣ ಸಂಘದ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ, ಕರಿಬಸಪ್ಪ, ಟ್ರಸ್ಟ್‍ನ ಟಿ.ಎಂ.ವೀರೇಂದ್ರ, ಶಿವಸಿಂಪಿ ಸಮಾಜದ ಗುರುಬಸಪ್ಪ, ಹೇಮಣ್ಣ, ಪತ್ರಕರ್ತ ಶಿವಕುಮಾರ, ಚನ್ನಬಸವ ಶೀಲವಂತ್, ಭಾವಿಕಟ್ಟಿ ಜಗದೀಶ, ಟಿ.ಬಕ್ಕೇಶ, ಮಲ್ಲಿಕಾರ್ಜುನ ಜವಳಿ, ಎನ್.ಜೆ.ಶಿವಕುಮಾರ, ಪಿಎಲ್‍ಡಿ ಬ್ಯಾಂಕ್ ಕೊಟ್ರೇಶಪ್ಪ, ಯುವರಾಜ, ಬಾಳೆಕಾಯಿ ಮುರುಗೇಶಪ್ಪ, ಬ್ಯಾಂಕ್ ನೌಕರರ ಸಂಘದ ಮುಖ್ಯಸ್ಥ ರಾಘವೇಂದ್ರ ನಾಯರಿ, ಮಹಿಳಾ ಬಸವಕೇಂದ್ರದ ಮಹದೇವಮ್ಮ, ಸುನಂದಮ್ಮ, ಬೂಸ್ನೂರು ಸುಜಾತಮ್ಮ, ಶರಣಬಸವ, ಜಾಲಿಮರದ ಕೊಟ್ರೇಶ, ಜಯದೇವ ಯೋಗ ಕೇಂದ್ರದ ಬಕ್ಕೇಶ, ವೀರಣ್ಣ, ಉಷಾ, ಉಮಾಶಂಕರ, ಶಿವಯೋಗಾಶ್ರಮ ಟ್ರಸ್ಟ್ , ಧರ್ಮದರ್ಶಿಗಳ ಸಮಿತಿ, ಶಿವಸಿಂಪಿ ಸಮಾಜದ ಪದಾಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಸವ ಕಲಾಲೋಕ ತಂಡದವರು ವಚನ ಜಾಗೃತಿ ಗೀತೆಗಳನ್ನು ಹಾಡಿದರು.