ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಿ: ಸಿ.ಎಂ.ಉದಾಸಿ

ಹಾನಗಲ್ಲ :

    ಕುಡಿಯುವ ನೀರಿಗೆ ಯಾವುದೇ ರೀತಿಯ ವ್ಯತ್ಯಯವಾಗದಂತೆ ನಿಗಾವಹಿಸಲು ಶಾಸಕ ಸಿ.ಎಂ.ಉದಾಸಿ ಕಟ್ಟಪ್ಪಣೆ ಮಾಡಿದ್ದು, ಅಗತ್ಯ ಬಿದ್ದರೆ ಟ್ಯಾಂಕರ ಮೂಲಕ ನೀರು ಒದಗಿಸಬೇಕು ಎಂದು ತಿಳಿಸಿದರು.

     ಪಟ್ಟಣದ ತಾಪಂನಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಅವರೊಂದಿಗೆ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಿದ ಅವರು, ಕುಡಿಯುವ ನೀರಿನ ವ್ಯವಸ್ಥೆಗೆ ಯಾವುದೇ ರೀತಿಯ ಹಣದ ಕೊರತೆ ಇಲ್ಲ. ಇನಾಂನೀರಲಿಗೆ, ಸೋಮಸಾಗರ, ಬ್ಯಾತನಾಳ, ಗೊಂದಿ ಗ್ರಾಮಗಳಲ್ಲಿ ಪಂಚಾಯಿತಿ ಅಥವಾ ಜಿಲ್ಲಾ ಪಂಚಾಯಿತಿಯಿಂದ ಕೊರೆಸಿದ ಕೊಳವೆ ಭಾವಿಗಳಲ್ಲಿ ನೀರಿಲ್ಲದ ಕಾರಣ ಖಾಸಗಿ ಕೊಳವೆ ಭಾವಿಗಳಿಂದ ನೀರು ಪಡೆದಿರುವಂತೆ ಮತ್ತೆಲ್ಲಿ ನೀರನ ಕೊರತೆಯಾದರೂ ರೈತರ ಮನವೊಲಿಸಿ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸುವಂತೆ ತಿಳಿಸಿದರು.

     ಮೇ ಅಂತ್ಯದವರೆಗೆ ಸರಿಯಾದ ರೀತಿಯಲ್ಲಿ ಮಳೆಯಾಗದಿದ್ದರೆ ಬೆಳಗಾಲಪೇಟೆ, ಮಾಸನಕಟ್ಟಿ, ಒಳಗೇರಿ, ಕೋಣನಕೊಪ್ಪ, ಶಿರಗೋಡ ಗ್ರಾಮಗಳಲ್ಲಿ ತೀವ್ರ ನೀರಿನ ಕೊರತೆಯಾಗುವ ಸಾಧ್ಯತೆಯಿದೆ. ಸರಕಾರದಿಂದ 75 ಲಕ್ಷ ರೂ ಕುಡಿಯುವ ನೀರಿಗಾಗಿ ಮೀಸಲಾಗಿದ್ದು, ಅಗತ್ಯವಿರುವಲ್ಲಿ ಈ ಹಣವನ್ನು ಕೊಳವೆಭಾವಿ ಕೊರೆಸು, ಪೈಪಲೈನ ಹಾಕಲು ಬಳಸಿಕೊಳ್ಳಬೇಕು ಎಂದು ಸೂಚಿಸಿದರು.

     ತಾಲೂಕಿನಲ್ಲಿರುವ 120 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಇದರಲ್ಲಿ 18 ಘಟಕಗಳು ಚಾಲು ಸ್ಥಿತಿಯಲ್ಲಿಲ್ಲದುರುವುದು ಗಮನಕ್ಕೆ ಬಂದಿದೆ. ಇವುಗಳನ್ನು ದುರಸ್ಥಿಗೊಳಿಸಬೇಕು. ಇನ್ನೂ 17 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹೊಸದಾಗಿ ಆರಂಭಿಸಲಾಗುತ್ತದೆ. ಕೆಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ವೈಫಲ್ಯದಿಂದ ನೀರು ವಾಸನೆ ಆಗಿರುವುದು ಕಂಡು ಬಂದಿದೆ.

     ಇಂಥವುಗಳನ್ನು ಕೂಡಲೇ ದುರಸ್ಥಿಗೊಳಿಸಿ ಶುದ್ಧ ಕುಡಿಯುವ ನೀರು ಜನರಿಗೆ ದೊರೆಯುವಂತಾಗಬೇಕು. ಶಿರಗೋಡ ಗ್ರಾದಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಅಳವಡಿಸಿದ ಕ್ವಾಯನ್ ಬಾಕ್ಸ ಕಳ್ಳತನ ಮಾಡಿರುವ ಘಟನೆ ನಿಜಕ್ಕೂ ವಿಷಾದನೀಯ. ಇಂಥ ಘಟನೆಗಳಿಗೆ ಅವಕಾಶವಿಲ್ಲದಂತೆ ಜಾಗೃತಿವಹಿಸಲು ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಶಾಸಕ ಸಿ.ಎಂ.ಉದಾಸಿ ತಿಳಿಸಿ, ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನು ಕುಡಿಯುವದರಿಂದ ಯಾವುದೆ ಅಪಾಯ, ರೋಗ ಬರುವುದಿಲ್ಲ ಎಂಬ ಬಗ್ಗೆ ಕೆಲವು ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು ಕೂಡಲೇ ಈ ಕೆಲಸ ಕೈಗೊಳ್ಳುವಂತೆ ತಿಳಿಸಿದರು.

     ತಾಲೂಕಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆಯ ವಿವರ ನೀಡಿದ ಚನ್ನಬಸಪ್ಪ ಹಾವಣಗಿ ತಾಲೂಕಿನ 167 ಗ್ರಾಮಗಳಲ್ಲಿ 1275 ಕೊಳವೆ ಭಾವಿಗಳಿದ್ದು ನೀರಿನ ಕೊರತೆಯಿಂದ 746 ಕೊಳವೆ ಭಾವಿಗಳಿಂದ ಮಾತ್ರ ಈಗ ಕುಡಿಯುವ ನೀರು ಲಭ್ಯವಿದೆ. 290 ಕಿರುನೀರು ಸರಬರಾಜು ಯೋಜನೆಗಳಲ್ಲಿ 225 ಚಾಲ್ತಿಯಲ್ಲಿವೆ. 490 ಮೇಲ್ಮಟ್ಟದ ಕುಡಿಯುವ ನೀರಿನ ಜಲಾಗಾರಗಳಲ್ಲಿ 361 ಚಾಲ್ತಿಯಲ್ಲಿವೆ. ತಾಲೂಕಿನಲ್ಲಿರುವ 495 ಕೈಪಂಪುಗಳಿಗೆ ರೇಚಕ ಯಂತ್ರ ಅಳವಡಿಸಿ ಅಲ್ಲಲ್ಲೆ ನೀರು ಪೂರೈಕೆಗೆ ಅನುಕೂಲ ಮಾಡಿ ಕೊಡಲಾಗಿತ್ತು. ಆದರೆ ಈಗ 161 ಇಂಥ ಕೊಳವೆ ಭಾವಿಗಳಿಂದ ಮಾತ್ರ ನೀರು ಸಿಗುತ್ತಿದೆ. ಎಂಥಹದ್ದೇ ಸ್ಥಿತಿಯಲ್ಲಿ ಯಾವುದೇ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸುವುದಾಗಿ, ಈ ಬಗ್ಗೆ ಎಲ್ಲ ಗ್ರಾಮ ಪಂಚಾಯತಿಗಳ ಪಿಡಿಓ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

   ತಾಲೂಕು ತಹಶೀಲ್ದಾರ ಎಂ.ಗಂಗಪ್ಪ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹದ ಅದಿಕಾರಿ ಸೊಪ್ಪಿಮಠ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧಿಕಾರಿ ರಾಘವೇಂದ್ರ ಗುಡಿಕೇರಿ ಈ ಸಂದರ್ಭಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link