ತಾನೂ ವಡ್ಡ ಎಂದಿರುವ ಈಶ್ವರಪ್ಪ ಹೇಳಿಕೆಗೆ ಖಂಡನೆ

ದಾವಣಗೆರೆ

    ತಾನೂ ವಡ್ಡ ಇದ್ದಂತೆ ಎಂಬುದಾಗಿ ಹೇಳುವ ಮೂಲಕ ಕೆ.ಎಸ್.ಈಶ್ವರಪ್ಪ ಭೋವಿ ಸಮಾಜದ ಅವಹೇಳನ ಮಾಡಿದ್ದು, ಕುಂದಗೋಳ, ಚಿಂಚೋಳ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಸಮಾಜ ಬಾಂಧವರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆಂದು ಕೆಪಿಸಿಸಿ ಕಾರ್ಯದರ್ಶಿ, ಭೋವಿ ಸಮಾಜದ ಹಿರಿಯ ಮುಖಂಡ ಡಿ.ಬಸವರಾಜ್ ತಿಳಿಸಿದ್ದಾರೆ.

      ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಪಿಟೀಲು ಮಾಸ್ಟರ್ ಆಗಿದ್ದು, ಯಾವ್ಯಾಗ ಯಾವ ರಾಗ ನುಡಿಸುತ್ತಾನೋ ಯಾರಿಗೂ ಗೊತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ವಡ್ಡರೆಂದು ಕರೆಸಿಕೊಳ್ಳುವ ಭೋವಿ ಸಮಾಜಕ್ಕೆ ಅವರ ಹೇಳಿಕೆಯಿಂದ ತೀವ್ರ ಅಪಮಾನವಾಗಿದ್ದು, ಈಶ್ವರಪ್ಪನವರ ಹೇಳಿಕೆಯನ್ನು ಸಮಾಜ ತೀವ್ರವಾಗಿ ಖಂಡಿಸಲಿದೆ ಎಂದರು.

       ಪರಿಶಿಷ್ಟ ಜಾತಿಯಲ್ಲಿರುವ ವಡ್ಡರ, ಭೋವಿ ಸಮಾಜವನ್ನು ಬಿಜೆಪಿ ಮುಖಂಡ ಈಶ್ವರಪ್ಪ ಅವಮಾನಿಸಿದ್ದಾರೆ. ಕೇಸರಿ ಪಕ್ಷದಲ್ಲಿ ಈಶ್ವರಪ್ಪಗೆ ಬುದ್ಧಿ ಹೇಳುವವರೇ ಇಲ್ಲದಂತಾಗಿದೆ. ಭೋವಿ ಜನಾಂಗವನ್ನು ಅವಮಾನಿಸಿದ ಹಿನ್ನೆಲೆಯಲ್ಲಿ ಇಡೀ ಭೋವಿ ಸಮಾಜ ಎರಡೂ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಬಾರದು ಎಂದು ಕರೆ ನೀಡಿದರು.

      ಲೋಕಸಭೆ ಚುನಾವಣೆಯ ಮತದಾನದ ದಿನದಂದು ಜಿಪಂ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ಸಮುದಾಯವೊಂದರ ಬಗ್ಗೆ ಹಗುರವಾಗಿ ಮಾತನಾಡಿದ್ದ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಡಾ.ರಾಮಪ್ಪ ವಿಚಾರವು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಶ್ರೀಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಮ್ಮುಖದಲ್ಲಿ ಇತ್ಯರ್ಥವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link