ಹಾವೇರಿ :
ಲೋಕಲ್ ಸರ್ಚ್ಇಂಜಿನ್ ವ್ಯವಸ್ಥೆಯಡಿಯಲ್ಲಿ ಸಾರ್ವಜನಿಕರು ಮತ್ತು ಸಣ್ಣಪುಟ್ಟ ವ್ಯವಹಾರ ಹಾಗೂ ಸೇವಾನಿರತ ವ್ಯಕ್ತಿಗಳ ನಡುವೆ ಸಂಪರ್ಕ ಸೇತುವೆಯಾಗಿ ಈಜಿ ಹಂಟ್ ಸಾಫ್ಟ್-ಟೆಕ್ ಪ್ರೈವೇಟ್ ಲಿಮಿಟೆಡ್ ಸಾಮಾಜಮುಖಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ನಿರ್ದೇಶಕ ವೆಂಕಟೇಶ ಮೂರ್ತಿ ಹೇಳಿದರು.
ನಗರದ ಖಾಸಗಿ ಹೊಟೆಲಿನಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಸಂಸ್ಥೆಯು ಡಿಜಟಲೀಕರಣದ ಅಡಿಯಲ್ಲಿ ಸ್ಥಾಪಿತವಾಗಿರುವ ಸ್ಟಾರ್ಟ್ಅಪ್ ಕಂಪನಿಯಾಗಿದ್ದು, ಎಲ್ಲಾ ರೀತಿಯ ವ್ಯಾಪಾರಸ್ಥರಿಗೆ ಮತ್ತು ಕರಕುಶಲ ಕಸುಬುದಾರರಿಗೆ ಈಜಿಹಂಟ್ ಮೊಬೈಲ್ ಅಪ್ಲಿಕೇಷನ್ ಮುಖಾಂತರ ಪ್ರಚಾರವನ್ನು ದೊರಕಿಸಿಕೊಡುವುದು ಹಾಗೂ ಸಾರ್ವಜನಿಕರಿಗೆ ಅವರವರ ದಿನ ನಿತ್ಯದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಬೇಕಾದ ವ್ಯಾಪಾರಸ್ಥರ ಮತ್ತು ಕರಕುಶಲ ಕಸುಬುದಾರರ ಅಗತ್ಯ ಮಾಹಿತಿಯನ್ನು ಬೆರಳತುದಿಯಲ್ಲೇ ದೊರಕಿಸಿಕೊಡಬೇಕೆಂಬ ಉದ್ದೇಶವನ್ನು ಹೊಂದಿದೆ ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ವೆಂಕಟೇಶಮೂರ್ತಿ ವಿವರಿಸಿದರು.
ಜಿಲ್ಲಾ ಕಾರ್ಯನಿರ್ವಾಹಕ ವೆಂಕಟೇಶ ವೆಲ್ಕುರು ಮಾತನಾಡಿ ತುರ್ತು ಅಗತ್ಯ ಸೇವೆಗಳಾದ ರಕ್ತಧಾನಿಗಳು, ಆಂಬುಲೆನ್ಸ್, ಬ್ಲಡ್ ಬ್ಯಾಂಕ್, ಡಯಾಲಿಸಿಸ್ ಸೆಂಟರ್, ಹತ್ತಿರದ ಸರ್ಕಾರಿ ಆಸ್ಪತ್ರೆ, ಹತ್ತಿರದ ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆ ಹಾಗೂ ಮುಂತಾದ ಅನೇಕ ಮಾಹಿತಿಗಳು, ರೈತರಿಗೆ ಅಗತ್ಯ ಮಾಹಿತಿಗಳು, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ಸಮಗ್ರ ಮಾಹಿತಿಗಳು ಇನ್ನೂ ಇತರೆ ಅತ್ಯಾಗತ್ಯ ಮಾಹಿತಿಗಳನ್ನು ಜನರಿಗೆ ಒದಗಿಸಲಾಗುವುದು ಎಂದರು.
ನಿರ್ದೇಶಕ ಭೋಜರಾಜ ಮಾತನಾಡಿ ಸಾಮಾನ್ಯ ವ್ಯಕ್ತಿಯು ಸಹ ತನ್ನ ವೃತ್ತಿ ಅಥವಾ ವ್ಯಾಪಾರ ವಹಿವಾಟನ್ನು ಡಿಜಿಟಲೀಕರಣ ಗಳೊಸಿಕೊಳ್ಳುವುದಕ್ಕೆ ಸಹಕಾರ ನೀಡುವುದು. ಎಲ್ಲಾ ಸಾರ್ವಜನಿಕರಿಗೂ ಎಂತಹ ವಿಷಮ ಪರಿಸ್ಥಿತಿಗಳಲ್ಲೂ ದೃತಿಗೆಡದೇ ಪರಿಸ್ಥಿತಿಯನ್ನು ನಿಭಾಯಿಸಲು ಬೇಕಾದ ಅಗತ್ಯ ಮಾಹಿಗಳನ್ನು ಕ್ಷಣಮಾತ್ರದಲ್ಲೇ ಪೂರೈಸಬೇಕೆಂಬುದು ಹಾಗೂ ಈ ವ್ಯವಸ್ಥೆಯನ್ನೂ ಅತೀ ಶೀಘ್ರದಲ್ಲಿ ದೇಶದ ಉದ್ದಗಲಕ್ಕೂ ಪಸರಿಸಬೇಕೆಂಬ ಮಹತ್ವಾಕಾಂಕ್ಷೆಯುಳ್ಳ ಗುರಿಯನ್ನು ಈಜಿóಹಂಟ್ ಹೊಂದಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತಾಗಲಿ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ ಮತ್ತಿಹಳ್ಳಿ,ರಾಘವೇಂದ್ರ ಮಾಳವದೆ, ಕುಮಾರಸ್ವಾಮಿ ಹಿರೇಮಠ್,ನಾಗರಾಜ್ ಚಬ್ಬಿ ಅನೇಕರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ