ಬೆಂಗಳೂರು:
ರಾಕಿಂಗ್ ದಂಪತಿಯಾದ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಗಳ ಫೋಟೋವನ್ನು ಅಭಿಮಾನಿಗಳ ಜೊತೆ ರಿವೀಲ್ ಮಾಡಿದ್ದಾರೆ.
ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಪುತ್ರಿಯ ಫೋಟೋವನ್ನು ಶೇರ್ ಮಾಡಿರೋ ಯಶ್, ನನ್ನ ಜಗತ್ತನ್ನು ಆಳೋ ಹುಡುಗಿ ನಿಮ್ಮ ಮುಂದೆ ಬಂದಿದ್ದಾಳೆ. “ನೀವು ಹೇಳಿದ್ದೇ ಸರಿ. ಇವಳು ಬರೋವರ್ಗು ಮಾತ್ರ ನನ್ನ ಹವಾ. ಇವಳು ಬಂದಾಗಲಿಂದ ಬರೀ ಇವಳದ್ದೇ ಹವಾ?. ಅಂತ ಬರೆದುಕೊಂಡಿದ್ದಾರೆ. ಮಗಳಿಗೆ ಇನ್ನೂ ಹೆಸರಿಡದ ಕಾರಣ ಸದ್ಯಕ್ಕೆ ವೈಆರ್ ಎಂದು ಕರೆಯೋಣ. ನಿಮ್ಮ ಪ್ರೀತಿ, ಆಶೀರ್ವಾದ ಆಕೆಗೂ ನೀಡಿ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಂ ಹಾಗೂ ಫೇಸ್‍ಬುಕ್‍ನಲ್ಲಿ ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ರಾಧಿಕಾ ಮಗುವಿನ ಫೋಟೋ ಹಾಕಿ, “ನಮ್ಮ ಅಮೂಲ್ಯವಾದ ಖುಷಿಯನ್ನು ಪರಿಚಯಿಸುತ್ತಿದ್ದೇವೆ. ನಾವು ಇನ್ನೂ ಮಗುವಿಗೆ ಹೆಸರಿಟ್ಟಿಲ್ಲ. ಹೆಸರು ಇಡುವವರೆಗೂ ಎಲ್ಲರೂ ‘ಬೇಬಿವೈಆರ್’ ಎಂದು ಕರೆಯಿರಿ. ನೀವು ಎಲ್ಲರೂ ಸೇರಿ ನನ್ನ ಮಗಳಿಗೆ ಪ್ರೀತಿ ಹಾಗೂ ಆರ್ಶೀವಾದ ನೀಡಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ