ಬಸವ ಜಯಂತಿ ಕಾರ್ಯಕ್ರಮ

ಹಾನಗಲ್ಲ :
      ಜಗಜ್ಯೋತಿ ಬಸವಣ್ಣನವರ ಜಾತ್ಯಾತೀತ ಸಮಾಜದ ಪರಿಕಲ್ಪನೆ ಜಗತ್ತಿಗೆ ಮಾದರಿಯಾಗಿದ್ದು ಸಾಮಾಜಿಕ ನ್ಯಾಯಕ್ಕಾಗಿ ಇಡೀ ಬದುಕನ್ನು ಅರ್ಥಪೂರ್ಣವಾಗಿ ನೀಡಿದ ಯಶಸ್ಸು ಅವರದು ಎಂದು ಶಾಸಕ ಸಿ.ಎಂ.ಉದಾಸಿ ನುಡಿದರು.
      ಹಾನಗಲ್ಲಿನ ಸದಾಶಿವ ಮಂಗಲ ಭವನದಲ್ಲಿ ತಾಲೂಕು ಆಡಳಿತ ಹಾಗೂ ಬಸವ ಬಳಗದ ಸಹಯೋಗದಲ್ಲಿ ಆಯೋಜಿಸಿದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಚನಗಳು ಸಾರ್ವಕಾಲಿಕ ಸತ್ಯಗಳಾಗಿವೆ. ಮಾನವ ಜನ್ಮದ ಯಶಸ್ಸು ಸತ್ಯ ಶುದ್ಧ ಕಾಯಕದಲ್ಲಿದೆ ಎಂಬುದನ್ನು ಅರಿವಿಗೆ ತರಲಾಗಿದೆ. ಜೀವನದ ಸಾರ್ಥಕ್ಯಕ್ಕಾಗಿ ಎಲ್ಲರೂ ಒಂದಾಗಿ ಬದುಕು ಸತ್ಯವನ್ನು ಅರಿಬೇಕು ಎಂದರು.
      ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಲೋಕಜ್ಞಾನವುಳ್ಳ ತತ್ವಜ್ಞಾನಿ ದಾರ್ಶನಿಕ ಜಗಜ್ಯೋತಿ ಬಸವಣ್ಣನವರ ಆದರ್ಶಗಳು ಅಚರಣೆಗೆ ಬರುವ ಅಗತ್ಯವಿದ್ದು ಸಾಮಾಜಿಕ ನ್ಯಾಯ ಸಾರ್ವಕಾಲಿಕ ಸತ್ಯವಾಗುವಂತಾಗಬೇಕು. ಭಾರತದ ಧರ್ಮ ಸಂಸ್ಕಾರಗಳು ಜಗತ್ತಿಗೆ ಬೇಕಾಗಿವೆ. ವಚನ ಸಾಹಿತ್ಯವನ್ನು ಇಡೀ ಜಗತ್ತು ಬಯಸುತ್ತಿದೆ. ಜಾತ್ಯಾತೀತವಾಗಿ, ಮಹಿಳೆ ಪುರುಷರೆನ್ನದೆ ಎಲ್ಲರನ್ನೂ ಸಮಾನವಾಗಿ ಕಾಣುವ ತತ್ವ ಸಂದೇಶಗಳು 12 ನೇ ಶತಮಾನದಲ್ಲಿಯೇ ಕಾರ್ಯರೂಪಕ್ಕೆ ಬಂದವು. ಇದಕ್ಕಾಗಿ ಬಸವಣ್ಣನವರು ಹತ್ತು ಹಲವು ಸಾಮಾಜಿಕ ಸವiಸ್ಯೆಗಳಿಗೆ ಗುರಿಯಾಗಬೇಕಾಯಿತು ಎಂದರು.
      ವೇದಿಕೆಯಲ್ಲಿ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ.ಎಸ್.ಬಳ್ಳಾರಿ, ತಹಶೀಲ್ದಾರ ಎಂ.ಗಂಗಪ್ಪ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಹಾವಣಗಿ, ಹಾನಗಲ್ಲ ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ ಕೋತಂಬರಿ, ರವಿ ಚಿಕ್ಕೇರಿ ವೇದಿಕೆಯಲ್ಲಿದ್ದರು.
      ವಿಜಯಾ ಕಬ್ಬೂರ ಹಾಗೂ ಮಂಜುಳಾ ಹುರಕಡ್ಲಿ ಶರಣ ಗೀತೆ ಹಾಡಿದರು. ಪುರಸಭೆ ಸದಸ್ಯ ನಾಗಪ್ಪ ಸವದತ್ತಿ, ಬಿ.ಜಿ ಪಾಟೀಲ, ನ್ಯಾಯವಾದಿ ಬಿ.ಎಸ್.ಅಕ್ಕಿವಳ್ಳಿ, ಸಹದೇವಪ್ಪ ಕೋಟಿ, ಕಲ್ಯಾಣಕುಮಾರ ಶೆಟ್ಟರ, ಭೋಜರಾಜ ಕರೂದಿ, ವೀರೇಶ ಹೆಬ್ಬಳ್ಳಿ, ರವಿಬಾಬು ಪೂಜಾರ, ಬಸಣ್ಣ ಎಲಿ, ಚನ್ನವೀರಸ್ವಾಮಿ ಹಿರೇಮಠ, ಉಮೇಶ ಕಬ್ಬೂರ, ರಾಜಣ್ಣÀ ಸಿಂಧೂರ, ತಾಲೂಕು ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ, ಮಹಾಲಿಂಗಪ್ಪ ಅಕ್ಕಿವಳ್ಳಿ, ಅಡಿವೆಪ್ಪ ಆಲದಕಟ್ಟಿ, ಮಾಲತೇಶ ಪರಪ್ಪನವರ, ಪುರಸಭೆ ಮುಖ್ಯಾಧಿಕಾರಿ ಎಸ್.ಎ.ಮಹಾಜನ, ಸಮಾಜಕಲ್ಯಾಣಾಧಿಕಾರಿ ಜಿ.ಬಿ.ಹಿರೇಮಠ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಾಲಾರ್ಪಣೆ :
       ಇದಕ್ಕೂ ಮೊದಲು ಶಾಸಕ ಸಿ.ಎಂ.ಉದಾಸಿ, ಮಾಜಿ ಸಚಿವ ಮನೋಹರ ತಹಶೀಲ್ದಾರ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹಾಗೂ ಗಣ್ಯರು ಶ್ರೀ ವಿರಕ್ತಮಠದ ಆವರಣದಲ್ಲಿರುವ ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link