ಜಗಜ್ಯೋತಿ ಬಸವೇಶ್ವರರು ಧಾರ್ಮಿಕ ಕ್ಷೇತ್ರದ ಪ್ರಜ್ವಲಿಸುವ ಬೆಳಕು

ಚಳ್ಳಕೆರೆ

      ಜಗಜ್ಯೋತಿ ಬಸವೇಶ್ವರರು ಕೇವಲ ಒಂದು ಸಮುದಾಯ ಪ್ರತಿನಿಧಿಯಾಗಿ ಧಾರ್ಮಿಕ ಜಾಗೃತಿ ಮೂಡಿಸದೆ ಸಮಾಜದ ಎಲ್ಲಾ ವರ್ಗಗಳಲ್ಲೂ ಧಾರ್ಮಿಕ ಪರಿವರ್ತನೆಯ ಅಧಿಕಾರರಾಗಿ ಕಾರ್ಯನಿರ್ವಹಿಸಿದರು. ಇವರ ಆದರ್ಶಗಳನ್ನು ಸಮಸ್ತ ಮಾನವ ಸಮಾಜ ಅಳವಡಿಸಿಕೊಳ್ಳುವ ಮೂಲಕ ಸಮಾನತೆಯ ಹಾದಿಯಲ್ಲಿ ಸಾಗಬೇಕೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಶುಭ ಹಾರೈಸಿದ್ದಾರೆ.

     ಅವರು, ಮಂಗಳವಾರ ಮಧ್ಯಾಹ್ನ ಬೆಂಗಳೂರಿನಿಂದ ಚಳ್ಳಕೆರೆ ನಗರಕ್ಕೆ ಆಗಮಿಸಿದ್ದು, ಮಾರ್ಗಮದ್ಯದ ಬೆಂಗಳೂರು ರಸ್ತೆಯಲ್ಲಿರುವ ಶ್ರೀಬಸವೇಶ್ವರರ ಪುತ್ಥಳಿಗೆ ಹೂ ಮಾಲೆಯನ್ನು ಅರ್ಪಿಸುವ ಮೂಲಕ ಸಮುದಾಯದ ಎಲ್ಲಾ ಮುಖಂಡರಿಗೂ ಬಸವ ಜಯಂತಿಯ ಶುಭಾಶಯವನ್ನು ಕೋರಿದರು. ಕಳೆದ ಕೆಲವು ದಿನಗಳಿಂದ ಈ ಸಮುದಾಯದಲ್ಲಿ ತಲೆದೋರಿರುವ ಅಸಮಾನತೆ ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಸಮುದಾಯದ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.

      ಹಿರಿಯ ಮುಖಂಡ ಟಿ. ಟಿ.ಪ್ರಭುದೇವ್, ಅಧ್ಯಕ್ಷ ಎಚ್.ಗಂಗಣ್ಣ ಉಪಾಧ್ಯಕ್ಷ ಕೆ.ಎಂ.ಜಗದೀಶ್, ಕಾರ್ಯದರ್ಶಿ ಈಶ್ವರಪ್ಪ, ಸಹ ಕಾರ್ಯದರ್ಶಿ ಎಚ್.ವಿ.ಪ್ರಸನ್ನಕುಮಾರ್, ನಗರಸಭಾ ಸದಸ್ಯರಾದ ಕೆ.ಸಿ.ನಾಗರಾಜು, ಚಳ್ಳಕೆರೆಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ವೀರೇಶ್, ಖಜಾಂಚಿ ಕೆ.ಬಸವರಾಜು, ಟಿ.ಪಿ.ರವಿಕುಮಾರ್, ಎಚ್.ಟಿ.ಶಿವಕುಮಾರ್, ಹೊಟ್ಟೆಪ್ಪನಹಳ್ಳಿ ಆರ್.ಪ್ರಸನ್ನಕುಮಾರ್, ಹೂವಿನ ಜಗದೀಶ್, ನಗರಂಗೆರೆ ಕುಮಾರ್, ಕಿರಣ್‍ಶಂಕರ್ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link