ಧಾರ್ಮಿಕ ಕಾರ್ಯಕ್ರಮಗಳ ಯಶಸ್ಸಿಗೆ ಗ್ರಾಮಸ್ಥರ ಒಗ್ಗಟ್ಟು ಮುಖ್ಯ:- ಮಲ್ಲಿಕಾರ್ಜುನ ಸ್ವಾಮೀಜಿ

ಹಗರಿಬೊಮ್ಮನಹಳ್ಳಿ

      ಗ್ರಾಮೀಣ ಪ್ರದೇಶದಲ್ಲಿ ಇತ್ತೀಚಿಗೆ ರಾಜಕೀಯದಿಂದ ಕಲುಷಿತವಾತವರಣ ಸೃಷ್ಠಿಯಾಗಿದೆ. ಇದರಿಂದ ಹೊರಬಂದು ಯಾವುದೇ ಒಂದು ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಒಗ್ಗಟ್ಟು ಮುಖ್ಯ ಎಂದು ಮರಿಯಮ್ಮನಹಳ್ಳಿ ಗುರುಪಾದಸ್ವಾಮಿ ಮಠದ ಮಲ್ಲಿಕಾರ್ಜುನ ಶಿವಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

      ತಾಲೂಕಿನ ಹನಸಿಯ ಪರಮೇಶ್ವರ ಸ್ವಾಮಿ ದೇಗುಲದಲ್ಲಿ ಗ್ರಾಮದ ದೈವಸ್ಥರಿಂದ ಬಸವಜಯಂತಿ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ 19ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಅವರು ಪಾಲ್ಗೊಂಡು ನವವಧುವರರಿಗೆ ಆಶೀರ್ವಚನ ನೀಡಿದರು. ಸಾಕಷ್ಟು ದುಂದುವೆಚ್ಚಮಾಡಿ ಮದುವೆಮಾಡುವ ಪಾಲಕರು ವಧು ಮತ್ತು ವರರ ಕುಟುಂಗಳೆರಡು ಸಾಲದ ಸುಳಿಯಲ್ಲಿ ಸಿಲುಕುತ್ತವೆ.

       ನಂತರ ಜೀವನಪೂರ್ತಿ ಸಾಲ ತೀರಿಸುವುದರಲ್ಲಿಯೇ ಕಾಲ ಕಳೆಯಬೇಕಾಗುತ್ತೆ, ಇನ್ನು ಸುಖ ಸಂಸಾರ ಎಲ್ಲಿಯ ಮಾತು. ಆದರೆ, ಇಂತಹ ಸಾಮೂಹಿಕ ವಿವಾಹದಲ್ಲಿ ಸರಳವಾಗಿ ಮದುವೆಯಾಗುವವರಿಗೆ ಸರ್ವಧರ್ಮಿಯರ ಮತ್ತು ಗುರುಗಳ ಆಶೀರ್ವಾದ ದೊರೆಯುತ್ತದೆ ಎಂದರು.

      ನಂತರ ಹನಸಿ ಶಂಕರ ಮಠದ ಭಾವಿಸ್ವಾಮಿ ಸೋಮಶಂಕರ ಸ್ವಾಮೀಜಿ ಮಾತನಾಡಿ, ಮದುವೆಯಾಗುವ ನವ ದಂಪತಿಗಳು ನೂರುಕಾಲ ಸುಖಸಂತೋಷದೊಂದಿಗೆ ಜೀವನ ನಡೆಸಿ, ನೀವು ಇಂದಿನಿಂದ ಸಸಿಗಳನ್ನು ನೆಟ್ಟು ಅವುಗಳನ್ನು ನಿಮ್ಮ ಮಕ್ಕಳಂತೆ ಬೆಳಸಿ ಮರಗಳಾಗುವವರೆಗೆ ರಕ್ಷಣೆಮಾಡಿ ಸಲಹಬೇಕು. ಇದರಿಂದ ಹೆಚ್ಚುತ್ತಿರುವ ತಾಪಮಾನ ಕಡಿಮೆಯಾಗಲು ಸಾಧ್ಯವೆಂದರು.

      ಹನಸಿ ಮಠದ ಶಂಕರ ಸ್ವಾಮೀಜಿ ಸಾನ್ನಿಧ್ಯದಲ್ಲಿ 15ಜೋಡಿಗಳಿಗೆ ಕಂಕಣಬಲ ಕೂಡಿಬಂದಿತು. ನವವಧುವರರೊಂದಿಗೆ ಬಸವೇಶ್ವರರ ಭಾವಚಿತ್ರವನ್ನೊತ್ತ ಮೆರವಣಿಗೆ ಗ್ರಾಮದ ರಾಮೇಶ್ವರ ದೇಗುಲದವರೆಗೂ ಸಾಗಿತು. ಹನಸಿ, ಕಣವಿನಾಯಕನಹಳ್ಳಿ, ಬೊಪ್ಲಾಪುರ, ಕಲ್ಲಳ್ಳಿ ದೈವಸ್ಥರು ಈ ಸಮೂಹಿಕ ವಿವಾಹದಲ್ಲಿ ನೇತೃತ್ವ ವಹಿಸಿದ್ದರು. ಮುಖಂಡ ಸಿದ್ದೇಶ್ ಸ್ವಾಗತಿಸಿ ನಿರ್ವಹಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link