ಚುನಾಯಿತ ಪ್ರತಿನಿಧಿ ಕುಮ್ಮಕ್ಕಿನಿಂದ ಕೋಡಿಹಳ್ಳಿ ಕೆರೆ ಜಖಂ

ಹೊಸದುರ್ಗ:

      ಕೆರೆಗಳ ಸಂರಕ್ಷಣೆ ಹೊಳು ಎತ್ತುವುದು, ಕೆರೆ ಪುನಶ್ಚೇತನಕಾರ್ಯಕ್ಕೆ ಸ್ವಯಂ ಪ್ರೇರಿತರಾಗಿಜನರ ಸಹಭಾಗಿತ್ವದಲ್ಲಿಕಾಮಗಾರಿ ನಡೆಸಲುತಾಲ್ಲೂಕಿನ ಮಠಾಧಿಪತಿಗಳು ಮುಂದಾಗಿರುವಾಗಲೇಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿಅವರ ಸ್ವಗ್ರಾಮದಲ್ಲೆಕೆರೆಏರಿ ಕಲ್ಲುಗಳನ್ನು ಕೀಳುವ ಕುತಂತ್ರತಾಲ್ಲೂಕಿನದೇವಪುರ ಕೋಡಿಹಳ್ಳಿಯಲ್ಲಿ ನಡೆದಿರುವಘಟನೆತಡವಾಗಿ ಬೆಳಕಿಗೆ ಬಂದಿದೆ.

      ಶಾಂತವೀರ ಸ್ವಾಮೀಜಿಯವರ ನೇತೃತ್ವದಲ್ಲಿಕೆರೆ ಸಂರಕ್ಷಣೆ ಅಂದೋಲನ ನಡೆಯುತ್ತಿರುವಾಗ ಈ ಘಟನೆ ನಡೆದಿರುವುದು ಸಖೇ ದಾಶ್ಚರ್ಯಕರವಾಗಿದೆ.ದೇವಪುರ ಗ್ರಾಮ ಪಂಚಾಯಿತಿಗೆ ಸೇರಿದ ಆಗ್ರಾಮದಜನಪ್ರತಿನಿಧಿಯ ನೆರವಿನಿಂದ ಹಾಲಿ ಸುಭದ್ರವಾಗಿದ್ದ ಕೆರೆ ಏರಿ ಕಲ್ಲುಗಳನ್ನು ಕಿತ್ತು ಬೇರೆಕಾಮಗಾರಿಗೆ ಬಳಕೆಯಾಗುತ್ತಿದೆ.

        ವೇದಾವತಿ ಪುನಶ್ಚೇತನ ಯೋಜನೆಯಲ್ಲಿ ಕೆರೆಗೆ ಹರಿದು ಬರುವ ಹಳ್ಳದಲ್ಲಿ ಚೆಕ್‍ಡ್ಯಾಂ ನಿರ್ಮಿಸಲು ಹಾಲಿ ಕೆರೆಯಕಲ್ಲುಕಿತ್ತುಚೆಕ್‍ಡ್ಯಾಂಕಟ್ಟುತ್ತಿದ್ದಾರೆ,ಇದರಕಾಮಗಾರಿಅರ್ಧಭಾಗ ಮುಗಿದು ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಬಳಕೆಯಾಗಿದೆ.
ಕೋಡಿಹಳ್ಳಿ ಗ್ರಾಮದ ರಿ.ಸ.ನಂ.62 ರಲ್ಲಿ 76 ಎಕರೆ ಪ್ರದೇಶದಲ್ಲಿ ಈ ಕೆರೆ ಅಸ್ತಿತ್ವದಲ್ಲಿದೆ.ಈ ರೀತಿ ಕೆರೆಕಲ್ಲು ಕಿತ್ತು ಟ್ಯಾಕ್ಟರ್ ಗೆ ತುಂಬಿದಾಗ ಗ್ರಾಮದ ಜನರು ತಡೆ ಮಾಡಿ ಕಲ್ಲು ಸಮೇತ ಟ್ಯಾಕ್ಟರ್‍ ಅನ್ನುಗ್ರಾಮದ ದೇವಾಲಯದ ಮುಂದೆ ನಿಲ್ಲಿಸಿದ್ದಾರೆ.ಟ್ಯಾಕ್ಟರ್ ಯಾರಿಗೆ ಸೇರಿದ್ದು,ಕಾಮಗಾರಿ ಗುತ್ತಿಗೆದಾರ ಯಾರು ಎಂಬುದು ಇನ್ನೂ ನಿಗೂಢವಾಗಿದೆ

       ಗ್ರಾಮಸ್ದರು ಈ ಬಗ್ಗೆ ಜಿಲ್ಲಾಧಿಕಾರಿ,ಜಿಲ್ಲಾ ಪಂಚಾಯಿತಿ, ಶಾಸಕರು, ತಾಲ್ಲೂಕು ಪಂಚಾಯಿತಿ, ತಹಶೀಲ್ದಾರ್ ಇವರುಗಳಿಗೆ ದೂರು ಸಲ್ಲಿಸಿದ್ದಾರೆ.ಗೂಂಡಾಗಿರಿ ನಡೆಯುವ ಸಂಭವವಿರುವುದರಿಂದ ಪೋಲೀಸರಿಗೂ ಮಾಹಿತಿ ಮುಟ್ಟಿಸಲಾಗಿದೆಎಂದುಗ್ರಾಮಸ್ದರು ತಿಳಿಸಿದ್ದಾರೆ.
ಸ್ದಳಕ್ಕೆ ಶಾಸಕ ಗೂಳಿಹಟ್ಟಿಶೇಖರ್,ತಾಲ್ಲೂಕು ಪಂಚಾಯಿತಿ ಇಓ ಮಹಮ್ಮದ್‍ಮುಬೀನ್,ಗ್ರಾಮೀಣ ನೀರು ಸರಬರಾಜುಇಂಜಿನಿಯರ್ ವಿ.ನಾಗರಾಜು ಭೇಟಿ ನೀಡಿಕೆರೆ ಸಂರಕ್ಷಣೆಗೆ ಎಚ್ಚರಿಸಿದ್ದಾರೆ.

        ರಾಷ್ಟ್ರೀಯ ಸಂಪತ್ತಾದ ಕೆರೆಯನ್ನು ಅನುಮತಿ ಇಲ್ಲದೆ ಮುಟ್ಟಿದರೆ ಕ್ರಿಮಿನಲ್ ಮೋಕದ್ದಮೆ ಹೂಡುವುದಾಗಿ ವಿ.ನಾಗರಾಜ್ ಎಚ್ಚರಿಸಿದಾರೆ.ಸದ್ಯದಲ್ಲೆ ಸ್ವಾಮೀಜಿಗಳ ತಂಡ ಬೇಟಿ ನೀಡುವ ಸಂಭವವಿದೆ.ಈ ಪ್ರಕರಣದಲ್ಲಿಗ್ರಾಮ ಪಂಚಾಯಿತಿ ಆಡಳಿತ ಶಾಮೀಲಾಗಿದೆ ಎಂಬ ವದಂತಿ ಕೇಳಿ ಬರುತ್ತಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link