ಚಿತ್ರದುರ್ಗ:
ಕಳ್ಳತನವಾಗಿದ್ದ 36 ಲಕ್ಷ ರೂ. ಹಣ ಕಳುವಾದ ಕಟ್ಟಡದ ಹಿಂಭಾಗದ ಹೊಲದಲ್ಲೇ ಪತ್ತೆಯಾದ ಘಟನೆ ಚಳ್ಳಕೆರೆ ತಾಲೂಕಿನ ತಳುಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ದಿಲೀಪ್ ಬ್ಯುಲ್ಡ್ ಕಂಪನಿಯ ಕಚೇರಿ ಮೂರು ದಿನಗಳ ಹಿಂದೆ ಕಟ್ಟಡದ ಕ್ಯಾಶ್ ರೂಂ ಮೇಲಿನ ಶೀಟ್ ಮುರಿದು ಒಳ ಪ್ರವೇಶಿಸಿ 36 ಲಕ್ಷ ರೂಪಾಯಿ ಕಳ್ಳತನ ಮಾಡಲಾಗಿತ್ತು.
ಪೊದೆಯ ಸಮೀಪ ಹಣ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಧಾವಿಸಿದ ಸಿಪಿಐ ಮಂಜುನಾಥ್ ಹಾಗೂ ಎಸ್‌ಐ ಸತೀಶನಾಯ್ಕ್ ಪರಿಶೀಲನೆ ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಇದೀಗ ದಿಲೀಪ್ ಬ್ಯುಲ್ಡ್ ಕಾನ್ ಕಚೇರಿ ಹಿಂಭಾಗದ ಜಮೀನಿನಲ್ಲಿ ಪೊದಯ ಸಮೀಪ ರೂ. 50,100 ಹಾಗೂ 2 ಸಾವಿರ ಮುಖಬೆಲೆಯ ಪತ್ತೆಯಾಗಿದೆ. ಹೀಗಾಗಿ ಯಾರೋ ಕಳ್ಳರೇ ಈ ಹಣವನ್ನ ಬಿಸಾಡಿ ಹೋಗಿರುವ ಅನುಮಾನ ವ್ಯಕ್ತವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ