ಹಾನಗಲ್ಲ :
ಮಹಾತ್ಮರು, ಸತ್ಪುರುಷರು ಹಾಗೂ ಲೋಕದಾರ್ಶನಿಕರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಸಹ ನಿತ್ಯ ಜೀವನದಲ್ಲಿ ಅನುಷ್ಠಾನಗೊಳಿಸಲು ಗಮನ ನೀಡಬೇಕಿದೆ. ಅಂದಾಗ ಮಾತ್ರ ಜಯಂತಿ ಆಚರಣೆಗಳು ಅರ್ಥಪೂರ್ಣ ಎನಿಸಲಿವೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಹೇಳಿದರು.
ವಿಶ್ವಗುರು ಬಸವ ಜಯಂತಿ ಅಂಗವಾಗಿ ಮಂಗಳವಾರ ಹಾನಗಲ್ನ ಕುಮಾರೇಶ್ವರ ವಿರಕ್ತಮಠದ ಎದುರಿನ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದ ಬಳಿಕ ಅವರು ಮಾತನಾಡಿ, 12 ನೇ ಶತಮಾನದ ಶರಣರು ಸಾಹಿತ್ಯ ಭಂಡಾರಕ್ಕೆ ನೀಡಿರುವ ಕೊಡುಗೆ ದೊಡ್ಡದು. ಅದರಲ್ಲಿಯೂ ಬಸವಣ್ಣನವರು ನಡೆಸಿದ ಸಾಮಾಜಿಕ, ಧಾರ್ಮಿಕ ಚಳವಳಿ ಒಂದು ರೀತಿ ಜನಪರ ಸಾಹಿತ್ಯ ಚಳಿವಳಿಯೂ ಆಗಿತ್ತು.
ಆ ಚಳವಳಿ ವಿಶ್ವದ ಇತಿಹಾಸದಲ್ಲಿಯೇ ನಡೆದ ಒಂದು ಅದ್ಭುತ ಪ್ರಯೋಗವಾಗಿತ್ತು ಎಂದು ಹೇಳಿದ ಅವರು ಬಸವಣ್ಣನವರ ದೂರದೃಷ್ಟಿಯ ವಿಶ್ವ ವೈಶಾಲ್ಯದ ವಿಚಾರಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ. ಇವುಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಜೀವನ ಸುಂದರ ಎನಿಸಲಿದೆ ಎಂದು ಹೇಳಿದರು.
ಜಿಪಂ ಸದಸ್ಯ ಟಾಕನಗೌಡ, ತಾಪಂ ಸದಸ್ಯರಾದ ವಿರುಪಾಕ್ಷಪ್ಪ ತಳವಾರ, ರಾಮಣ್ಣ ಪೂಜಾರ, ಸಿದ್ದನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಗನಗೌಡ ಪಾಟೀಲ, ಪುಟ್ಟಪ್ಪ ನರೇಗಲ್, ಮುಖಂಡರಾದ ಯಲ್ಲಪ್ಪ ಕಿತ್ತೂರ, ಮಾಲತೇಶ ಬ್ಯಾಗವಾದಿ, ರವಿ ದೇಶಪಾಂಡೆ, ವಿಕಾಸ್ ನಿಂಗೋಜಿ, ಶಂಸಿಯಾ ಬಾಳೂರ, ಮಹೇಶ ಪವಾಡಿ, ಪರಶುರಾಮ್ ಖಂಡೂನವರ, ತಮ್ಮಣ್ಣ ಆರೆಗೊಪ್ಪ, ದಾನಪ್ಪ ಗಂಟೇರ, ವಿರುಪಾಕ್ಷಪ್ಪ ಕಡಬಗೇರಿ, ಮುನ್ನಾ ನಾಯ್ಕನವರ, ಫಕ್ಕೀರಗೌಡ ಪಾಟೀಲ, ಬಸವರಾಜ್ ಹಾಲಭಾವಿ, ಕಲವೀರಪ್ಪ ಪವಾಡಿ, ಮಧು ಪಾಣಿಗಟ್ಟಿ, ಉಮೇಶ ಗೌಳಿ, ವಿರುಪಾಕ್ಷಪ್ಪ ತಳವಾರ, ರಾಮಣ್ಣ ಪೂಜಾರ, ಸಿದ್ದನಗೌಡ ಪಾಟೀಲ, ಫಯಾಜ್ ಲೋಹಾರ, ಗುರುರಾಜ್ ನಿಂಗೋಜಿ, ಸಂತೋಷ್ ಸುಣಗಾರ, ಬಸವರಾಜ್ ಹಾದಿಮನಿ, ರಾಜಕುಮಾರ ಶಿರಪಂತಿ, ವಿಜಯಕುಮಾರ ದೊಡ್ಡಮನಿ, ಶಿವು ಭದ್ರಾವತಿ, ಬಸವರಾಜ್ ಡುಮ್ಮಣ್ಣನವರ, ಶಶಿಧರ್, ಬಸಲಿಂಗಯ್ಯ ಕಂಬಾಳಿಮಠ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.