ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿ ಹೊಸಕೆರೆ ಗ್ರಾಮದ ಸುತ್ತ ಮುತ್ತ ಮಂಗಳವಾರ ಸಂಜೆ ಭಾರಿ ಬೀರುಗಾಳಿ ಮಳೆಗೆ ಪಸಲಿಗೆ ಬಂದಿದ್ದ ತೆಂಗಿನ ಮರಗಳು ಧರೆಗುರುಳಿದ್ದು ಅಪಾರ ನಷ್ಠ ಉಂಟಾಗಿದೆ. ಮಂಗಳವಾರ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿದ್ದು ಸಂಜೆ ಗಾಳಿ ಮಳೆ ಸುರಿಯಿತು.
ಗಾಳಿಯು ರಬಸವಾಗಿ ಬೀಸಿದ ಕಾರಣ ಗ್ರಾಮ ಪಂಚಾಯಿತಿ ಸದಸ್ಯೆ ಸುನಂದ ಆರಾಧ್ಯ ಅವರಿಗೆ ಸೇರಿದ ತೆಂಗು ಮತ್ತು ಅಡಿಕೆ ನೆಲ ಕಚ್ಚಿ ಸುಮಾರು 2ಲಕ್ಷಕ್ಕೂ ಅಧಿಕ ನಷ್ಠ ಉಂಟಾಗಿದೆ ಎಂದು ತೋಟದ ಮಾಲೀಕರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳ ಪರೀಶಿಲನೆ ಮಾಡಿ ಸೂಕ್ತ ಪರಿಹಾರ ಕೋಡಬೇಕು ಎಂದು ಒತ್ತಾಯಿಸಿದ್ದಾರೆ.
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯಲ್ಲಿ ಮಂಗಳವಾರ ಸಂಜೆ ಬೀರುಗಾಳಿ ಮಳೆಯಾಗಿದೆ. ಸುಮಾರು ಮರಗಳು ಧರೆಗುರುಳಿವೆ. ಮಳೆ ಕಡಿಯಾದರೂ ಬೀರು ಗಾಳಿ ಅಪಾರವಾದರಿಂದ ಕೆಲವು ಅಂಗಡಿಗಳ ಶೀಟ್ ಗಳು ಹಾರಿಹೋಗಿದ್ದು ಕೆಲ ಭಾಗದಲ್ಲಿ ಸಾÀಕಷ್ವು ಮಳೆಯಾಗಿದೆ. ಬೀಸಿಲಿನ ತಾಪಕ್ಕೆ ಜನರು ತತ್ತರಿಸುತ್ತಿದ್ದು ಸ್ವಲ್ಪ ಮಳೆಯಾದರೂ ರೈತರು ನಿಟ್ಟುಸಿರು ಬಿಡುತ್ತಾರೆ. ಚೇಳೂರು ಹೋಬಳಿಯಲ್ಲಿ ಸಾಧಾರಣ ಮಳೆಯಾಗಿದೆ. ಎಂ ಎನ್ ಕೋಟೆ ಭಾಗದಲ್ಲಿ ಗಾಳಿ ಜಾಸ್ತಿಯಾಗಿದ್ದು ಯಾವುದೇ ಸಮಸ್ಯೆಯಾಗಿಲ್ಲ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ