ಹಿರಿಯೂರು :
ಈಶ್ವರಗೆರೆ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛ ಶನಿವಾರ ಕಾರ್ಯಕ್ರಮ ಹಮ್ಮಿಕೊಂಡಿರುವ ಪ್ರಯುಕ್ತ ಕೂಡ್ಲಹಳ್ಳಿ ಗ್ರಾಮದ ಸ್ವಚ್ಚತೆಯನ್ನು ಮಾಡುವ ಸಂದರ್ಭದಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಸತ್ಯಭಾಮ ಇವರು ಭೇಟಿ ನೀಡಿ ಗ್ರಾಮದ ಜನತೆಗೆ ಸ್ವಚ್ಛತೆ, ಕುಡಿಯುವ ನೀರಿನ ಸಮರ್ಪಕ ಬಳಕೆಯ ಬಗ್ಗೆ ಅರಿವು ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮ್‍ಕುಮಾರ್, ಗ್ರಾಮದ ಸದಸ್ಯರಾದ ಚನ್ನಕೇಶವ, ಶ್ರೀಮತಿ ತಿಮ್ಮಕ್ಕ, ಚಂದ್ರಶೇಖರ್, ಪಿ.ಡಿ.ಒ. ಕುಮಾರಿ ವನಜಾಕ್ಷಿ, ಕಾರ್ಯದರ್ಶಿಗಳಾದ ಮಾರುತಿ, ಎಸ್.ಡಿ.ಎ ಪ್ರಹ್ಲಾದ್, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
