
ಕುಂದಗೋಳದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ಹರಕೆಯ ಕುರಿ ಎಂದು ಟೀಕಿಸಿದರು. ಕೋಣವನ್ನು ಬಲಿ ನೀಡುವ ಮೊದಲು ಎಣ್ಣೆ ಹಚ್ಚುತ್ತೇವೆ. ಡಿ. ಕೆ. ಶಿವಕುಮಾರ್ ಹರಕೆಯ ಕೋಣವಾಗಿದ್ದಾರೆ. ಇಲ್ಲಿ ಬಂದು ಕಣ್ಣೀರಿನ ನಾಟಕ ಮಾಡುತ್ತಾರೆ. ಆ ಕೋಣವನ್ನು ಕಡಿದು ಹಾಕಬೇಕು ಎಂದು ಕಿಡಿಕಾರಿದರು
ರೇಣುಕಾಚಾರ್ಯರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ. ಕೆ. ಶಿವಕುಮಾರ್ ಕುಂದಗೋಳ ಕ್ಷೇತ್ರಕ್ಕೆ ಒಳ್ಳೆಯದಾಗುವುದಾದರೆ ಬಲಿಗೆ ಸಿದ್ಧ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
