ಕೊಟ್ಟೂರು
ಕುಡಿಯುವ ನೀರಿಗಾಗಿ ಜನರು ಕಳೆದ ಮೂರು ತಿಂಗಳಿನಿಂದ ಪರದಾಡುತ್ತಿದ್ದಾರೆ. ಪ್ರತಿ ದಿನ ಸರದಿ ಸಾಲಿನಲ್ಲಿ ಕೊಡಗಳನಿಟ್ಟು ರಾತ್ರಿವಿಡಿ ಜಾಗರಣೆ ಮಾಡುವುದು ಕಾಳಪುರದ ಜನರಿಗೆ ಅನಿವಾರ್ಯವಾಗಿದೆ.
ತಾಲೂಕಿನ ಕಳಾಪುರ ಗ್ರಾಮದ ಕ್ಯಾಂಪನಲ್ಲಿ ಜೀವ ಜಲಕ್ಕಾಗಿ ಹಾಹಾಕಾರ ಸೃಷ್ಠಿಸಿದ್ದು ರಸ್ತೆ ಬದಿಯಾ ಚಿಕ್ಕ ನಲ್ಲಿಯಲ್ಲಿ ಸಣ್ಣ ಪ್ರಮಾಣದಲ್ಲಿ ಬೀಳಿವ ನೀರು ಒಂದು ಕೊಡ ತುಂಬಲು ಕನಿಷ್ಠ 20 ನಿಮಿಷ ಸಮಯ ಬೇಕು. ಹತ್ತು ಬಿಂದಿಗೆ ನೀರು ಹಿಡಿಯಲು ಅರ್ಧ ದಿನವೇ ಕಾಯಬೇಕು ಎನ್ನುತ್ತಾರೆ ಗ್ರಾಮಸ್ಥರು.
ಸತತ ಬರಗಾಲ, ಅಂತರ್ಜಲ ಪಾತಳ ಸೇರಿ ರಾಜ್ಯದೆಲ್ಲೆಡೆ ಕುಡಿಯುವ ನೀರನ ಸಮಸ್ಯೆ ಉಲ್ಬಣಿಸಿದೆ. ಕಾಳಪುರದÀ ಕ್ಯಾಂಪ್‍ನ ಜನರು ಆನಿಭವಿಸುತ್ತಿರುವ ನೀರಿನ ಸಮಸ್ಯೆಯನ್ನು ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಯಾಗಲಿ, ಜನಪತ್ರಿನಿಧಿಯಾಗಲಿ ಆಲಿಸುತ್ತಿಲ್ಲವೆಂದು ಗ್ರಾಮದ ಹನುಮಂತ, ಮಂಜುನಾಥ್ ಅಸಮದಾನ ವ್ಯಕ್ತಪಡಿಸಿದರು.
ಊರಲ್ಲಿ ಕರೆಂಟ್ ಇತ್ತು ಅಂದ್ರ ಎರಡು ಕೊಡ ನೀರು ಸಿಗ್ತಾವೂ, ಇಲ್ಲಂದ್ರಾ ಬಿರು ಬಿಸಿಲನ್ಲಲಿ ಎರಡು ಮೈಲಿ ದೂರದ ಹೋಲಗಳಿಗೆ ನಡೆದುಕೊಂಡು ಹೋಗಿ ಬೋರ್‍ವೆಲ್‍ನಿಂದ ನೀರು ತರಬೇಕು. ಪ್ರತಿ ಸಾರಿ ಇದೆ ರೀತಿ ಅಲೆದಾಡಬೇಕಾಂದ್ರ ಹೆಂಗ್ರೀ.. ಎಂದು ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡರು.
ಊರಲ್ಲಿ ಅಕ್ಕಪಕ್ಕದ ಮನೆಯವರು ಹೊಂದಾಣಿಕೆಯಿಂದ ಇರ್ತಿದ್ವಿ ನೀರಿನ ಸಂಬಂಧ ಒಮ್ಮೆಮ್ಮೆ ಜಗಳ ಆಡೋ ಪರಿಸ್ಥಿತಿ ಬರ್ತೈತಿ ಪಂಚಾಯ್ತಿಗೆ ಹಲವು ಭಾರಿ ದೂರು ನೀಡಿದರು ಯಾವುದೆ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.