ಶ್ರೀ ಕನ್ನಿಕಾ ಪರಮೇಶ್ವರಿ ಜಯಂತಿ…!!

ಮಲೇಬೆನ್ನೂರು:

    ಆರ್ಯವೈಶ್ಯ ಸಮಾಜದ ಕುಲದೇವತೆ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ಜಯಂತಿಯನ್ನು ಸಮೀಪದ ಕೊಕ್ಕನೂರು ಗ್ರಾಮದಲ್ಲಿ ಮಂಗಳವಾರ ಆಚರಿಸಲಾಯಿತು.ಬೆಳಗ್ಗೆ ಗ್ರಾಮದ ಕಲ್ಯಾಣಿಯಲ್ಲಿ ಗಂಗಾಪೂಜೆ ನೆರವೇರಿಸಿ, ಶ್ರೀ ಅಮ್ಮನವರ ಭಾವಚಿತ್ರ ಹಾಗೂ ತುಂಬಿದ ಕಳಸದೊಂದಿಗೆ ಶಂಖನಾದ, ಗಂಟೆ, ಜಾಗಟೆಯೊಂದಿಗೆ ಗ್ರಾಮದ ಮುಖ್ಯ ಬೀದಿಯಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು.
ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ಖಡ್ಗ ಘೋಷ, ಒಡಪು, ಭಜನೆ, ಶ್ರೀ ಅಮ್ಮನವರ ಜಯಘೋಷಗಳು ಮೆರವಣಿಗೆಯುದ್ದಕ್ಕೂ ಹೇಳಲಾಯಿತು.

     ಕಳಸ ಪ್ರತಿಷ್ಠಾಪಿಸಿದ ನಂತರ ಸಮಾಜ ಬಾಂಧವರೆಲ್ಲರೂ ದೇವಿಯ ಭಜನೆ ಮಾಡಲಾಯಿತು. ನಂತರ ಮಂಗಳಾರುತಿ, ತೀರ್ಥ ಪ್ರಸಾದ ವಿತರಿಸಿ ಮಧ್ಯಾಹ್ನದ ನಂತರ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

     2019-20ನೇ ಸಾಲಿಗೆ ಸಂಘದ ಅಧ್ಯಕ್ಷರಾಗಿ ಎಂ.ಕೆ. ರಾಮಶೆಟ್ಟಿಯವರನ್ನು ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಕೆ.ಬಿ. ಲಕ್ಷ್ಮಣ ಶ್ರೇಷ್ಠಿ, ಕಾರ್ಯದರ್ಶಿಯಾಗಿ ಕೆ.ವಿ. ಹರೀಶ್, ಖಜಾಂಚಿಯಾಗಿ ಕೆ.ವಿ. ಆಂಜನೇಯ ಶ್ರೇಷ್ಠಿ ಇವರನ್ನು ಆಯ್ಕೆಮಾಡಲಾಯಿತು .

     ವಾಸವಿ ಯುವಜನ ಸಂಘದ ಅಧ್ಯಕ್ಷ ಎಂ.ಕೆ. ರಾಮಶೆಟ್ಟಿ, ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ಭಾಸ್ಕರ್, ಖಜಾಂಚಿ ಕೆ.ಎಲ್ ರಮೇಶ್, ಕೆ.ಎಲ್ ಹನುಮಂತ ಶ್ರೇಷ್ಠಿ, ಕೆ.ವಿ. ಹುಚ್ಚುರಾಯಶ್ರೇಷ್ಠಿ, ಎಂ.ಕೆ. ಮಹಾಬಲೇಶ್ವರ ಶ್ರೇಷ್ಠಿ, ಕೆ.ವಿ. ಹರೀಶ್, ಕೆ.ವಿ. ಆಂಜನೇಯ ಶ್ರೇಷ್ಠಿ, ಕೆ.ಎಲ್. ಹನುಮಂತ ಶ್ರೇಷ್ಠಿ, ಎಂ.ವಿ. ಪ್ರಹ್ಲಾದ ಶ್ರೇಷ್ಠಿ, ಕೆ.ಬಿ. ಲಕ್ಷ್ಮಣಶ್ರೇಷ್ಠಿ, ಕೆ.ಎಲ್. ಭಾಸ್ಕರ್, ಕೆ.ಎಲ್. ಆಭಿ, ಎಂ.ಆರ್. ಶ್ರೀಶಾ, ಬಿ.ಆರ್. ಸುಮುಖ್, ರವಿನಂದನ್, ಮಹಿಳಾ ಸಂಘದ ಸದಸ್ಯರುಗಳು, ಹಿರಿಯರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link