ಹಿರಿಯೂರು ನಗರಸಭೆ ಚುನಾವಣೆ : ಮಹಿಳಾ ಮತದಾರರೇ ಹೆಚ್ಚು

ಹಿರಿಯೂರು :

       ಇಲ್ಲಿನ ನಗರಸಭೆಯ 31 ವಾರ್ಡ್‍ಗಳಿಗೆ ಮೇ 29 ರಂದು ಚುನಾವಣೆ ನಡೆಯಲಿದ್ದು, ಒಟ್ಟು 46133, ಮತದಾರರಲ್ಲಿ 23770, ಮಹಿಳಾ ಮತದಾರರು, 22354 ಪುರುಷ ಹಾಗೂ 9 ಇತರೆ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

     ನಗರದ 9ನೇ ವಾರ್ಡ್‍ನಲ್ಲಿ ಕೇವಲ 821 ಮತದಾರರು (ಪುರುಷ 420, ಮಹಿಳೆ 401) ಇದ್ದರೆ, ಪಕ್ಕದ 8ನೇ ವಾರ್ಡ್‍ನಲ್ಲಿ 1945 (ಪುರುಷ 937, ಮಹಿಳೆ 1008) ಮತದಾರರು ಇದ್ದಾರೆ.ನಗರದ 25ನೇ ವಾರ್ಡ್‍ನಲ್ಲಿ 932, 27 ರಲ್ಲಿ 1040, 22ರಲ್ಲಿ 1053 23 ರಲ್ಲಿ 1142 ಮತದಾರರಿದ್ದಾರೆ. 4ನೇ ವಾರ್ಡ್‍ನಲ್ಲಿ 1867, 6ನೇ ವಾರ್ಡ್‍ನಲ್ಲಿ 1822 ಮತದಾರರು ಇದ್ದಾರೆ.
ನಗರಸಭೆ ಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ನಡುವೆ ಮೈತ್ರಿ ಏರ್ಪಟ್ಟಿದ್ದು, 8 ವಾರ್ಡ್‍ಗಳನ್ನು ಜೆಡಿಎಸ್‍ಗೆ (1,3,4,7,16,24,26 ಹಾಗೂ 30) ಬಿಟ್ಟುಕೊಟ್ಟಿದ್ದು, 9ನೇ ವಾರ್ಡ್‍ನಲ್ಲಿ ತಾಂತ್ರಿಕ ದೋಷದಿಂದ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಸಾಧ್ಯವಾಗದÀ ಕಾರಣ ಸ್ವತಂತ್ರ್ಯ ಅಭ್ಯರ್ಥಿಯನ್ನು ಎರಡೂ ಪಕ್ಷಗಳು ಬೆಂಬಲಿಸಲಿವೆ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಶಿವಪ್ರಸಾದ್‍ಗೌಡ ಪತ್ರಿಕೆಗೆ ತಿಳಿಸಿದ್ದಾರೆ.

     ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದ್ದರಿಂದ ಅಭ್ಯರ್ಥಿಗಳು ಪ್ರತಿ ವಾರ್ಡ್‍ನಿಂದಲೂ 100 ರಿಂದ 300ರವರೆಗೆ ಅಭ್ಯರ್ಥಿಗಳು ಜನರನ್ನು ಕರೆತಂದ ಕಾರಣ ಗಾಂಧಿ ವೃತ್ತದಿಂದ ತಾಲ್ಲೂಕು ಕಛೇರಿವರೆಗಿನ ರಸ್ತೆಯಲ್ಲಿ ಬೆಳಿಗ್ಗೆ 10 ರಿಂದ ಮದ್ಯಾಹ್ನ 3ರವರೆಗೆ ಸಂಚಾರ ಅಸ್ತವ್ಯಸ್ತವಾಗಿತ್ತು. ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಆವರಣದ ಒಳಗೆ ಎಲ್ಲಿ ನೋಡಿದರೂ ಜನರೇ ಕಿಕ್ಕಿರಿದು ತುಂಬಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap