ಪುಣ್ಯ ಕ್ಷೇತ್ರದಲ್ಲಿ ನೀರಿಲ್ಲದ್ದಕ್ಕೆ ಸರ್ಕಾರವನ್ನು ದೂರಬಾರದು- ಸುಮಲತಾ

ಬೆಂಗಳೂರು:

ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ತಲೆದೋರಿರುವ ನೀರಿನ ಅಭಾವಕ್ಕೆ ನಟಿ,ರಾಜಕಾರಣಿ ಸುಮಲತಾ ಅಂಬರೀಶ್ ಆಘಾತ ವ್ಯಕ್ತಪಡಿಸಿದ್ದಾರೆ. 

  ನಗರದಲ್ಲಿ ನಡೆದ ‘ಅಮರ್’ ಚಿತ್ರದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಸೇರಿದಂತೆ ಮಲೆನಾಡಿನಲ್ಲಿ ನೀರಿನ ಅಭಾವ ಉಂಟಾಗಿರೋದು ನೋವು ತಂದಿದೆ. ಮಂಜುನಾಥ ಸ್ವಾಮಿಗೆ ಅಭಿಷೇಕ ಮಾಡಲು ನೀರಿಲ್ಲ ಎಂಬುದನ್ನು ಕೇಳಿ ಆಘಾತವಾಯ್ತು. ಇದಕ್ಕೆಲ್ಲಾ ಸರ್ಕಾರವನ್ನು ದೂರುವುದೇ ಪರಿಹಾರವಲ್ಲ.ಮೊದಲು ನಾವು ಬದಲಾಗಬೇಕು.ಕಾಡು,ವನ್ಯ ಜೀವಿಗಳ ವಿನಾಶ ತಡೆಯಬೇಕು ಅಂತಾ ಜನತೆಗೆ ಕಿವಿಮಾತು ಹೇಳಿದ್ರು.

   ನಾವು ಯಾವಾಗಲೂ ಒಂದು ಸಮಸ್ಯೆ ಬಂದರೆ ಮಾತ್ರ ಅದಕ್ಕೆ ಪರಿಹಾರ ಹುಡುಕುತ್ತೇವೆ. ಆದರೆ ಸಮಸ್ಯೆ ಬರುವ ಮೊದಲೇ ಈ ರೀತಿ ಆಗಬಹುದು, ಅದಕ್ಕೆ ಏನು ಪರಿಹಾರ ಎಂಬುದನ್ನು ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ

ಅನೇಕ ವರ್ಷಗಳ ಹಿಂದೆಯೇ ಪರಿಸರ ಪರಿಣಿತರೊಬ್ಬರು ಮಾತನಾಡುವಾಗ, ಅರಣ್ಯಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ. ಇದರಿಂದ ಪರಿಸರ ನಾಶವಾಗುತ್ತಿದೆ. ಪರಿಸರ ನಾಶವಾದರೆ ಮಳೆಯಾಗುವುದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿದ್ದರು. ಆದರೆ ನಾವು ಅವರ ಮಾತನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೆ ಈಗ ಅಯ್ಯೋ ನೀರು ನಿಂತು ಹೋಗಿದೆ. ಈಗ ಏನು ಮಾಡುವುದು ಎಂದು ಸಮಸ್ಯೆ ಬಂದಾಗ ಯೋಜನೆ ಮಾಡುವುದು ಬಹಳ ತಪ್ಪು. ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳಬೇಕು ಎಂದರು

ನಾವು ಸರ್ಕಾರವೇ ಕಾರಣ ಎಂದು ಹೇಳಬಾರದು. ಇದಕ್ಕೆ ನಾವು ಏನೇ ಪರಿಹಾರ ಮಾಡಬೇಕೆಂದರೂ ಸಾರ್ವಜನಿಕರು ಮತ್ತು ಸರ್ಕಾರ ಇಬ್ಬರು ಒಟ್ಟಿಗೆ ಕೆಲಸ ಮಾಡಬೇಕು. ಹೀಗಾಗಿ ನಾವು ಪರಿಸರವನ್ನು ಕಾಪಾಡಬೇಕು. ಆಗ ಮಳೆ ಬರುತ್ತದೆ. ಇದರಿಂದ ನೀರಿನ ಸಮಸ್ಯೆ ಪರಿಹರಿಸಬಹುದು ಎಂದು ಸುಮಲತಾ ಅವರು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link