ಕಂಡಕ್ಟರ್ ಮತ್ತು ಕಂಟ್ರೋಲರ್ ಮದ್ಯೆ ವಾಗ್ವಾದ..!!

ಶಿಗ್ಗಾವಿ :

      ತಾಲೂಕಿನ ವಿವಿಧ ಗ್ರಾಮಗಳಿಗೆ (ರೂಟ್) ಬಸ್ಗಳನ್ನ ಬಿಡುವ ವಿಷಯಕ್ಕೆ ಸಂಭಂದಿಸಿಂದಂತೆ ಬಸ್ ಕಂಡೆಕ್ಟರ್ ಹಾಗೂ ಶಿಗ್ಗಾವಿ ವಿಭಾಗದ ಬಸ್ ಕಂಟ್ರೋಲರ್ ಮಧ್ಯ ಪರಸ್ಪರ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡ ಘಟನೆ ಪಟ್ಟಣದ ಶಿಗ್ಗಾವಿ ಬಸ್ ನಿಲ್ದಾಣದಲ್ಲಿ ರವಿವಾರ ನಡೆದಿದೆ.

      ಕಂಡೆಕ್ಟರ್ ಸೋಮಶೇಖರ ಮಾದನಗಟ್ಟಿ ಹಾಗೂ ಶಿಗ್ಗಾವಿ ವಿಭಾಗದ ಕಂಟ್ರೋಲರ್ ಎಸ್ ಎನ್ ಸಿರಗುಪ್ಪಿ ಪರಸ್ಪರ ಹೊಡೆದಾಡಿಕೊಂಡ ಕೆಎಸ್‍ಆರ್‍ಟಿಸಿ ಅಧಿಕಾರಿಗಳಾಗಿದ್ದಾರೆ.

     ಕಂಡೆಕ್ಟರ್ ಸೋಮಶೇಖರ ಮಾದನಗಟ್ಟಿ ಹುನಗುಂದ ಗ್ರಾಮಕ್ಕೆ ಬಸ್ ರೂಟಿಗೆ ಹೋಗಿ ಬಂದ ನಂತರ ರವಿವಾರವಾಗಿರುವುದರಿಂದ ಇನ್ನೊಂದು ರೂಟ್ ಹೋಗಲು ಕಂಟ್ರೋಲರ್ ತಿಳಿಸಿದಾಗ ಸಿಡಿ ಮಿಡಿಗೊಂಡ ಕಂಡೆಕ್ಟರ್ ನನಗೆ ಸುಸ್ತಾಗಿದೆ ಎಂದು ಮನೆಗೆ ತೆರಳಿದ್ದಾನೆ ಇದರಿಂದ ಕೋಪಗೊಂಡ ಕಂಟ್ರೋಲರ್ ಶಿರಗುಪ್ಪಿ ಮೇಲಾಧಿಕಾರಿಗಳ ಮೂಲಕ ಕರೆ ಮಾಡಿಸಿ ಮರಳಿ ಬಸ್ ನಿಲ್ದಾಣಕ್ಕೆ ಕರೆಸಿದ್ದಾರೆ

     ಇದರಿಂದ ಕೋಪಗೊಂಡ ಕಂಡಕ್ಟರ್ ಸೋಮಶೇಖರ್ ಅವಾಚ್ಯ ಶಬ್ದಗಳಿಂದ ಕಂಟ್ರೋಲರ್ ಶಿರಗುಪ್ಪಿಯನ್ನು ನಿಂದಿಸಿದ್ದಾನಂತೆ ಇದಕ್ಕೆ ಕೊಪಗೊಂಡ ಶಿರಗುಪ್ಪಿ ಬಸ್ ನಿಲ್ದಾಣದಲ್ಲಿಯೇ ಪ್ರಯಾಣಿಕರ ಮದ್ಯಯೇ ಕೈ ಕೈ ಮಿಲಾಯಿಸಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ನಂತರ ಸಾರ್ವಜನಿಕರು ಮದ್ಯಸ್ಥಿಕೆಯಲ್ಲಿ ಪರಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಪತ್ರಿಕೆಗೆ ತಿಳಿಸಿದ್ದಾರೆ.

     ಸರಕಾರಿ ಅಧಿಕಾರಿಗಳಿಗೆ ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂಬ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಒಂದೆಡೆ ಯಾದರೆ ಇಲ್ಲಿಯೂ ಸಹಿತ ಮೇಲಾಧಿಕಾರಿಗಳು ಕೆಳ ಅಧಿಕಾರಿಗಳನ್ನು ನ್ಯಾಯಯುತವಾಗಿ ದುಡಿಸಿಕೊಳ್ಳುವುದುದನ್ನು ಬಿಟ್ಟು ಈ ರೀತಿ ವರ್ತನೆಗೈಯುವುದನ್ನು ಬಿಟ್ಟು ಗೌರವ ನೀಡಬೇಕು ಮತ್ತು ಅಧಿಕಾರಿಗಳ ಮದ್ಯ ಮುಕ್ತ ವಾತಾವರಣ ಇರಬೇಕು ಈ ರೀತಿ ಹಗೆತನ ಸಾಧಿಸಿದರೆ ಹೇಗೆ ? ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ, ಇದಕ್ಕೆ ಮೇಲಾಧಿಕಾರಿಗಳು ಕ್ರಮಕ್ಕೆ ಮುಂದಾಗಿ ಮುಂದೆ ಈ ರೀತಿ ಯಾಗದಂತೆ ಮುಂಜಾಗೃತೆವಹಿಸಿ ಕೆಎಸ್‍ಆರ್‍ಟಿಸಿ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಆಶಯ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link