ಪವಾಡ ಬಯಲು ಕಾರ್ಯಕ್ರಮ

ಹಾವೇರಿ :

      ಬಾಲಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಬ್ಯಾಡಗಿ ಹಾಗೂ ಆಶಾಕಿರಣ ರೂರಲ್ ಡೆವಲಪ್‍ಮೆಂಟ್ ಸೊಸೈಟಿ(ರಿ) ಚಿಕ್ಕಮುಗದೂರ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಬ್ಯಾಡಗಿ ರಂಗಮಂದಿರದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಪವಾಡ ಬಯಲು ಕಾರ್ಯಕ್ರಮವನ್ನು ಶಿಕ್ಷಕರಾದ ಆರ್.ಸಿ.ನಂದಿಹಳ್ಳಿ ನಡೆಸಿಕೊಟ್ಟರು.

      ಆರ್.ಸಿ.ನಂದಿಹಳ್ಳಿ ಮಾತನಾಡಿ, ಮೂಡನಂಬಿಕೆಯನ್ನು ಮಟ್ಟಹಾಕಲು, ಮುಗ್ದ ಜನರು ಮೋಸ ಹೋಗದಂತೆ, ವೈಜ್ಞಾನಿಕ ವೈಚಾರಿಕತೆ ಬೆಳೆಸಲು ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಿರಂತರವಾಗಿ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ. ಅಲ್ಲದೆ ಮಕ್ಕಳಲ್ಲಿ ವೈಜ್ಞಾನಿಕವಾಗಿ ಚಿಂತನ-ಮಂಥನ ಮಾಡಲು ಹಾಗೂ ವಿಜ್ಞಾನ ವಿಷಯದಲ್ಲಿ ಆಸಕ್ತಿದಾಯಕ ಕಲಿಕೆಗೆ ಪೂರಕವಾಗಿದೆ ಎಂದರು.

      ಆಶಾಕಿರಣ ಸಂಸ್ಥೆಯ ಅಧ್ಯಕ್ಷರಾದ ಮುತ್ತುರಾಜ ಮಾದರ ಮಾತನಾಡಿ ಮೂಡನಂಬಿಕೆ ಎಂದ ತಕ್ಷಣ ನಮಗೆ ನೆನೆಪಾಗುವುದು ಮಾಟ, ಮಂತ್ರ, ದೆವ್ವ, ಭೂತಾರಾಧನೆ, ಬೆಕ್ಕು ಅಡ್ಡ ಹೊಯಿತು, ಒಳ್ಳೆ ಸಂದರ್ಭದಲ್ಲಿ ಸೀನು, ಕುರಿ-ಕೋಣ ಬಲಿಕೊಡುವುದು, ನೊಡಿದ ತಕ್ಷಣ ಬೆಂಕಿ ಹತ್ತುವುದು, ಮಂತ್ರದ ನಿಂಬೆಹಣ್ಣು ಮುಂತಾದ ಹತ್ತು ಹಲವಾರು ಕಂದಾಚಾರಗಳಿಗೆ ಮುಗ್ದ ಜನ ಬಲಿಯಾಗುತ್ತಿದ್ದಾರೆ.

      ಡೋಂಗಿ ಬಾಬಾಗಳಿಂದ ಹಾಗೂ ಸ್ವಯಂ ಘೋಷಿತ ದೇವಮಾನವರಿಂದ ಮುಗ್ದ ಮಹಿಳೆಯರು, ಅಮಾಯಕರು ಮೋಸಕ್ಕೆ ಒಳಗಾಗುತ್ತಿದ್ದಾರೆ, ಇವೆಲ್ಲವುಗಳ ಜಾಗೃತಿಗಾಗಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಎಂ.ಡಿ.ಚಿಕ್ಕಣ್ಣನವರ, ಸಂಪನ್ಮೂಲ ವ್ಯಕ್ತಿಗಳಾದ ಶ್ಯಾಮ್, ರಾಧಾ, ರಮೇಶ ನಾಯ್ಕ್, ಮಂಗಳಾ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link