ಅವೈಜ್ಞಾನಿಕ ಟೋಲ್ ತೆರವಿಗೆ ಆಗ್ರಹ

ಹಾವೇರಿ :

      ನಗರದಿಂದ 5 ಕಿ.ಮೀ ಹತ್ತಿರ ಇರುವ ಆಲದಕಟ್ಟಿ ಗ್ರಾಮದ ಬಳಿ ಟೋಲ ಗೇಟ ನಿರ್ಮಿಸಿರುವುದು ನಿತ್ಯ ಸಂಚರಿಸುವ ಕೆ.ಎಸ್.ಆರ್.ಟಿ. ಬಸ್ಸುಗಳಿಂದ ಟೋಲ ಸಂಗ್ರಹಣೆ ಅವೈಜ್ಞಾನಿಕವಾಗಿದೆ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ಸುಗಳಿಂದ ಟೋಲ ಸಂಗ್ರಹ ರದ್ದುಪಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.

      ನಗರದಿಂದ ದೇವಿಹೊಸೂರ ಗ್ರಾಮವು ಸುಮಾರು 8 ಕಿ.ಮೀ ದೂರದಲ್ಲಿರುವ ಗ್ರಾಮಕ್ಕೆ ನಿತ್ಯವು ಹಾವೇರಿ ನಗರದಿಂದ ದೇವಿಹೊಸೂರ ಗ್ರಾಮಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು 11 ಟ್ರಿಪ್ ಸಂಚರಿಸುತ್ತವೆ ಪ್ರತಿ ಟ್ರಿಪ್ಪಿಗೆ 105 ಗಳಂತೆ ಒಂದು ದಿನಕ್ಕೆ 11 ಟ್ರೀಪ್‍ಗಳಿಗೆ 1155/-ಗಳನ್ನು ಕೆ.ಎಸ್.ಆರ್.ಟಿ.ಸಿಯ ಮೂಲಕ ಟೋಲ ಸಂಗ್ರಹವಾಗುತ್ತದೆ.

      ಇದರಂತೆ ಇತರೆ ಹಳ್ಳಿಗಳಾದ ಕಬ್ಬೂರ, ಹೊಸೂರ ತಾಂಡಾ, ತಿಳವಳ್ಳಿ, ಸಂಗೂರ, ಉಪ್ಪಣಸಿ, ಕೆಲವರಕೊಪ್ಪ, ಕೂಸನೂರು, ಹಿರೇಹುಲ್ಲಾಳ, ಪಿ.ಜಿ. ಸೆಂಟರ, ತಿಮ್ಮಾಪುರ, ಕುಳೇನೂರ, ಬೆಳಗಾಲಪೇಟೆ, ಬೊಮ್ಮನಹಳ್ಳಿ, ಬೆಂಚಿಹಳ್ಳಿ, ಹಾನಗಲ್ಲ, ಶಿರ್ಶಿ ಮುಂತಾದ ಗ್ರಾಮಗಳಿಂದ ಕೆ.ಎಸ್.ಆರ್.ಟಿ.ಸಿ ಬಸ್ಸುಗಳಿಂದ ದಿನಕ್ಕೆ 100ಕ್ಕೂ ಹೆಚ್ಚು ಟ್ರೀಪ್‍ಗಳಿಂದ ಸುಮಾರು 10,000/- ಗಿಂತ ಅಧಿಕ ಟೋಲ ಸಂಗ್ರಹವಾಗುತ್ತದೆ.

    ಈ ಹಣವನ್ನು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಪ್ರಯಾಣಿಕರ ಮೇಲೆಯೇ ವಿಧಿಸುತ್ತಾರೆ. ಮೊದಲು ದೇವಿಹೊಸೂರ ಗ್ರಾಮಕ್ಕೆ ಪ್ರಯಾಣ ದರ 10/- ಇರುವುದನ್ನು ಈಗ 13/-ಗೆ ಹೆಚ್ಚಿಸಿದ್ದಾರೆ. ನಗರಕ್ಕೆ ಸುತ್ತ ಮುತ್ತಲಿನ ನೂರಾರು ಗ್ರಾಮಗಳಿಂದ ಬರುವ ಪ್ರಯಾಣಿಕರಲ್ಲಿ ವಿದ್ಯಾರ್ಥಿಗಳು, ಬಡ ರೈತವರ್ಗ, ಬಡ ಕೂಲಿ ಕಾರ್ಮಿಕರು, ಕಟ್ಟಡದ ಕಾರ್ಮಿಕರು, ಇತರೆ ಕ್ಷೇತ್ರಗಳಲ್ಲಿ ದಿನನಿತ್ಯ ದುಡಿಯುವ ಕಾರ್ಮಿಕರು ಇವರಿಂದ ದಿನನಿತ್ಯ ಹೋಗಿ ಬರುವ ಪ್ರಯಾಣದ ದರದಲ್ಲಿ ಹೆಚ್ಚಳ ದಿಂದ ದಿನಕ್ಕೆ 6 ರೂ ಹೊರೆಯಾಗುತ್ತಿದ್ದು

      ಕೂಡಲೇ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ಸುಗಳಿಗೆ ಟೋಲ ಸಂಗ್ರಹದ ವಿನಾಯತಿ ನೀಡುವಲ್ಲಿ ಹಾಗೂ ಪ್ರಯಾಣ ದರ ಇಳಿಕೆ ಮಾಡುವಲ್ಲಿ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಯಿಸಿ ಕೂಡಲೆ 8 ದಿನಗಳೊಳಗಾಗಿ ಟೋಲ ಸಂಗ್ರಹವನ್ನು ರದ್ದುಗೊಳಿಸಬೇಕು. ಕೂಡಲೇ ಟೋಲ ಸಂಗ್ರಹವನ್ನು ರದ್ದುಪಡಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

      ಈ ಸಂದರ್ಭದಲ್ಲಿ ಎಸ್.ಎಸ್.ಕಳ್ಳಿಮನಿ, ಎಮ್.ಬಿ.ಸಾವಜ್ಜಿಯವರ, ಶಿವಕುಮಾರ ಮಠದ ಎಸ್.ಎಲ್.ಕಾಡದೇವರಮಠ, ಮಹಾಂತೇಶ ಬೇವಿನಹಿಂಡಿ. ಮಲ್ಲಿಕಾರ್ಜುನ ಆರಾದ್ಯಮಠ, ಪರಶುರಾಮ ಗುಳಪ್ಪನವರ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link