ನೈತಿಕ ಹೊಣೆ ಹೊತ್ತು ಸಿ ಎಂ ರಾಜಿನಾಮೆ ನೀಡಬೇಕು :ಬಸವರಾಜ ಬೊಮ್ಮಾಯಿ

ಶಿಗ್ಗಾವಿ :

        ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಘಟಾನುಘಟಿ ನಾಯಕರುಗಳು ಸೋಲನ್ನು ಅನುಭವಿಸಿರುವುದರಿಂದ ಸೋಲಿನ ಹೊಣೆಯನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮೈತ್ರಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೋಲಿನ ಹೊಣೆಯನ್ನು ಹೊತ್ತು ರಾಜೀನಾಮೆ ನೀಡಿ ಜಾಗ ಖಾಲಿ ಮಾಡಬೇಕೆಂದು ಶಾಸಕ ಬಸವರಾಜ ಬೊಮ್ಮಾಯಿ ತೀರ್ವ ವಾಗ್ದಾಳಿ ನಡೆಸಿದರು.

       ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡ ಲೋಕಸಭಾ ಚುನಾವಣೆಯಲ್ಲಿ ಪ್ರಲ್ಹಾದ ಜೋಷಿಯವರ ಗೆಲುವಿನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜ್ಯದ ಕಾಂಗ್ರೇಸ್ ಮತ್ತು ಜೆ.ಡಿ.ಎಸ್ ನ ಘಟಾನುಘಟಿ ಮುಖಂಡುರುಗಳಾದ ಎಚ್.ಡಿ ದೇವೆಗೌಡ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಹ್ಲಿ, ಉಗ್ರಪ್ಪ, ಬಿ.ಕೆ.ಹರಿಪ್ರಸಾದ, ಈಶ್ವರ ಖಂಡ್ರೆ, ಪ್ರಕಾಶ ಹುಕ್ಕೆರಿ ಸೇರಿದಂತೆ ಇತರ ಪ್ರಬಾವಿ ಮುಖಂಡರು ಸೋಲನ್ನ ಅನುಭವಿಸಿದ್ದಾರೆ ಇದೇ ಮೆ.26 ಅಥವಾ 27ರಂದು ಪ್ರಧಾನಿ ಮೋದಿಯವರು ಪ್ರಮಾಣ ವಚನ ಸ್ವಿಕರಿಸಿದ ಬೆನ್ನಲ್ಲೆ ರಾಜ್ಯದಲ್ಲಿಯೂ ಸಹಿತ ಧ್ರವಿಕರಣವಾಗಲಿದ್ದು ಮುಖ್ಯಮಂತ್ರಿಯಾಗಿ ಬಿ.ಎಸ್.ಯೆಡಿಯೂರಪ್ಪನವರು ಪ್ರಮಾಣ ವಚನ ಸ್ವಿಕರಿಸಲಿದ್ದಾರೆ ಎಂದರು.

        ಜನರ ಆದೇಶ ನಮ್ಮ ಪರವಿದೆ ಈಗ ಸರಕಾರ ನಡೆಸುತ್ತಿರುವ ಮೈತ್ರಿ ಸರಕಾರವನ್ನ ಈ ಅಪವಿತ್ರ ಸರಕಾರವನ್ನ ಜನ ತಿರಸ್ಕಾರ ಮಾಡಿದ್ದಾರೆ ಜೋತೆಗೆ ಶಿಗ್ಗಾವಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಮತ್ತೋಮ್ಮೆ ನಾಂದಿ ಹಾಡುತ್ತೆವೆ ಇಡಿ ದೇಶದ ಅಭಿವೃದ್ದಿಯ ಜೋತೆಗೆ ಶಿಗ್ಗಾವಿ ಸವಣೂರ ಕ್ಷೇತ್ರಗಳ ಅಭಿವೃದ್ದಿಗೆ ಇನ್ನಷ್ಟು ವೇಗವನ್ನ ಮಾಡಲಿದ್ದೆವೆ ಎಂದ ಅವರು ಆಡಳಿತ ಪಕ್ಷದಲ್ಲೆ ಇರಲಿ ಅಥವಾ ವಿರೋಧ ಪಕ್ಷದಲ್ಲಿಯೇ ಇರಲಿ ಅಭಿವೃದ್ದಿ ನಿರಂತರವಾಗಿ ಪ್ರಾಮಾಣಿಕವಾಗಿ ಮಾಡಿದ ತೃಪ್ತಿ ನನಗಿದೆ, ರಸ್ತೆಗಳು, ಕುಡಿಯುವ ನೀರು, ನಿರಂತರ ವಿದ್ಯುತ್, ಕೆರೆಗಳ ತುಂಬಿಸುವಿಕೆ ಸೇರಿದಂತೆ ವಿವಿಧ ಮೂಲಭೂತ ಯೋಜನೆಗಳಿಗೆ 20ಕೋಟಿಗೂ ಹೆಚ್ಚು ತಂದು ಅಭಿವೃದ್ದಿ ಪಡಿಸಿದ್ದವೆ ಐತಿಹಾಸಿಕ ನಾಗನೂರು ಕೆರೆಯು ಮಳೆಯಾಗದಿದ್ದರು ತುಂಬಿದೆ ಇದಕ್ಕೆ ಕಾರಣ ವರದಾ ನದಿಯಿಂದ ನೀರು ಹರಿಸಿರುವುದು ಕಾರಣವಾಗಿದೆ ಮಕ್ಕಳಿಗೆ ಆಟವಾಡಲು ಉಧ್ಯಾನವನ, ನಾಗನೂರು ಕೆರೆ ಸುತ್ತಲು ವಾಕಿಂಗ ಪಾರ್ಕ ಮಾಡಬೇಕಿದೆ ಇಗಾಗಲೇ ಶಿಗ್ಗಾವಿ ಮತ್ತು ಸವಣೂರನಲ್ಲಿ ಇಂದೋರಸ್ಟೇಡಿಯಂ ಮಾಡಿದ್ದೆವೆ ಎಂದರು.

    ಅಪಪ್ರಚಾರಕ್ಕೆ ಕಿವಿಗೊಡಬೇಡಿ : ಕೆಲವರು ಅಪಪ್ರಚಾರಕ್ಕೆಂದೆ ಇದ್ದಾರೆ ಅವರಿಗೆ ತಾಲೂಕಿನ ಅಭಿವೃದ್ದಿ ಬೇಕಿಲ್ಲ ಇದು ಸ್ಥಳಿಯ ಅಭಿವೃದ್ದಿಗೆ ಉತ್ತರವಲ್ಲ ಅಪಪ್ರಚಾರಕರ ಮಾತಿಗೆ ಕಿವಿಗೊಡಬೇಡಿ ಅಪಪ್ರಚಾರವನ್ನ ಲೋಕಸಭಾ ಚುನಾವಣೆಯಲ್ಲಿ, ವಿಧಾನ ಸಭಾ ಚುನಾವಣೆಯಲ್ಲಿ ಮಾಡಿದರು ಅವರ ಆಟ ನಡೆಯಲಿಲ್ಲ ಈಗ ಪುರಸಭೆ ಚುನಾವಣೆಯಲ್ಲಿಯು ಸಹಿತ ಅಪಪ್ರಚಾರ ಮಾಡುತ್ತಾರೆ ತಾವುಗಳು ಕಿವಿಗೊಡಬೇಡಿ ವಾರ್ಡಿನ ಸರ್ವಾಂಗಿಣ ಅಭಿವೃದ್ದಿಗೆ ಬಿ.ಜೆ.ಪಿ ಅಭ್ಯರ್ಥಿಗಳನ್ನ ಗೆಲ್ಲಿಸಿ ಎಂದು ಕಿವಿಮಾತು ಹೇಳಿದರು.

       ಪುರಸಭೆ ಚುನಾವಣೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿಗಳನ್ನ ಬೆಂಬಲಿಸಲು ಮನವಿ : ಇದೆ ಮೇ.29 ರಂದು ನಡೆಯುತ್ತಿರುವ ಪುರಸಭೆ ಚುನಾವಣೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿಗಳನ್ನ ಬೆಂಬಲಿಸಿ ಯಾವುದೇ ಅಪಪ್ರಚಾರದ ಮಾತಿಗೆ ಕಿವಿಗೊಡಬೇಡಿ ಸರ್ವಾಂಗಿಣ ವಾರ್ಡಗಳ ಅಭಿವೃದ್ದಿಗಾಗಿ ಆಯಾ ವಾರ್ಡಗಳ ಸದಸ್ಯರೊಂದಿಗೆ ನಾನು ಸಹಿತ ಇದ್ದು ನಿಮ್ಮ ವಾರ್ಡಗಳಲ್ಲಿಯ ಸಮಸ್ಯೆಗಳಿಗೆ ಬೆಂಬಲವಾಗಿ ನಾನಿದ್ದೆನೆ ಎಂದು ಅಭಯ ನೀಡಿದರು.

        ಒಟ್ಟಾರೆ ಈ ಅಭೂತ ಪೂರ್ವ ಲೋಕಸಭಾ ಚುನಾವಣೆ ಆಡಳಿತಾತ್ಮಕ, ರಾಜಕಿಯಾತ್ಮಕ ಆಡಳಿತದ ಜೊತೆಗೆ ನೈತಿಕ ಜವಾಬ್ದಾರಿಯನ್ನ ಹೆಚ್ಚಿಸಿದೆ, ಆ ಜವಾಬ್ದಾರಿಯನ್ನ ನಾನೂ ಮತ್ತು ಪ್ರಲ್ಹಾದ ಜೊಷಿಯವರು ಅತ್ಯಂತ ಪ್ರಾಮಾಣಿಕವಾಗಿ ಮಡುತ್ತೆವೆ ಎಂದರು.

      ವಿಜಯೋತ್ಸವದಲ್ಲಿ ಯುವಮೋರ್ಚಾ ಅದ್ಯಕ್ಷ ರೇಣುಕನಗೌಡ ಪಾಟೀಲ, ನವೀನ ಸಾಸನೂರ, ಮಂಜುನಾಥ ಬ್ಯಾಹಟ್ಟಿ, ಬಸವರಾಜ ಗೊಬ್ಬಿ, ಮಲ್ಲೆಶಪ್ಪ ಹರಿಜನ, ಉಮೇಶ ಅಂಗಡಿ, ಸಂಜನಾ ರಾಯ್ಕರ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link