ಅಭಿವೃದ್ಧಿಯ ವಿಚಾರವಾಗಿ ವಿರೋಧ ಪಕ್ಷದ ನಾಯಕ ಎಂದೂ ಸಹಕರಿಸಿಲ್ಲ : ಆರ್.ವಿ.ದೇಶಪಾಂಡೆ

ಹಾವೇರಿ :

     ಅಭಿವೃದ್ಧಿ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕ ಎಂದು ಸಹಕರಿಸಿಲ್ಲ, ಅವರ ಎಲ್ಲದಕ್ಕೂ ವಿರೋಧ ಮಾಡುವ ಗುಣವನ್ನು ಅವರು ಹೊಂದಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವ್ಯಂಗ್ಯ ಮಾಡಿದರು. 

     ಜಿಲ್ಲೆಯ ಬರ ವೀಕ್ಷಣೆಗಾಗಿ ಆಗಮಿಸಿದಾಗ ಜಿಲ್ಲೆಯ ತವರಮೆಳ್ಳಹಳ್ಳಿ,  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲ ನಿರ್ವಹಣೆಯಲ್ಲಿ ಮೈತ್ರಿ ಸರ್ಕಾರ ವಿಫಲವಾಗಿದೆ ಎಂಬ  ಯಡಿಯೂರಪ್ಪ ಹೇಳಿಕೆಯನ್ನು ಒಪ್ಪಲು ಆಗದು, ರಾಜ್ಯದಲ್ಲಿ
ಯಡಿಯೂರಪ್ಪ ಬಿಟ್ಟರೆ ಈ ಮಾತನ್ನು ಬೇರೆಯವರು ಹೇಳಲು ಸಾಧ್ಯವಿಲ್ಲ.  ವಿರೋಧ ಮಾಡುವದು ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟುಗುಣ ಎಂದು  ಯಡಿಯೂರಪ್ಪಗೆ ಟಾಂಗ್ ನೀಡಿದರು. 

     ನಾನು ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡದ್ದೇನೆ. ಎಂದಿಗೂ ಅಭಿವೃದ್ಧಿ ‌ವಿಚಾರದಲ್ಲಿ ವಿರೋಧ ಮಾಡಿಲ್ಲ. ಯಡಿಯೂರಪ್ಪನವರ ಹಾಗೆ ಹೇಳಿಕೆ ನೀಡಿಲ್ಲ. ಬಿ.ಎಸ್.ವೈ. ಅವರು, ಒಳ್ಳೆಯ ಕೆಲಸ ಮಾಡಿದರೂ ಅವರು ಚನ್ನಾಗಿಲ್ಲಾ ಎನ್ನುತ್ತಾರೆ. ಬರದ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಒಟ್ಟಿಗೆ ಕೆಲಸ ನಿರ್ವಹಿಸಬೇಕು. ನಮ್ಮಗಳ ಜವಾಬ್ದಾರಿ ಕೂಡಾ ಎಂದು ತಿಳಿಸಿದರು. 

ಮೈತ್ರಿ ವಿಚಾರಕ್ಕೆ ಗರಂ ಆದ ದೇಶಪಾಂಡೆ: 

      ಸರ್ಕಾರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕೆಂಡಾಮಂಡಲಗೊಂಡ ದೇಶಪಾಂಡೆ, ಎ ಬಿಡ್ರಿ ನಿಮಗೆ ಯಾಕೆ ಮೈತ್ರಿ ಚಿಂತಿ, ನಿವೇನು ಶಾಸಕರು ಅಲ್ಲಾ, ಸಂಸದರು, ಸಚಿವರಲ್ಲ ಎಂದು ಹಾರಿಕೆ ಉತ್ತರ ನೀಡಿದರು. ಸಚಿವ ಸ್ಥಾನ ಕೈ ತಪ್ಪುವ ಬಗ್ಗೆ ಮಾಧ್ಯಮವರು ಪ್ರಶ್ನೆ ಕೇಳಿದಾಗ ಸಿಡಿಮಿಡಿಗೊಂಡ ಸಚಿವರು, ನಿನಗೆ ಯಾರ ಹೇಳಿದ್ರಪಾ ಎಂದು ಏಕವಚನದಲ್ಲಿ ಮರುಪ್ರಶ್ನೆ ಹಾಕಿ, ಚರ್ಚೆ ನಡಿತಾ ಇದೆ ಎಂದರೆ ಚರ್ಚೆ ಮಾಡಿಕೊ ಹೋಗಪ್ಪಾ, ನಾನು ಎಂಟನೇ ಮುಖ್ಯಮಂತ್ರಿ ಜೊತೆ ಸಚಿವನಾಗಿ ಕೆಲಸ ಮಾಡ್ತಾ ಇದೆನಿ.ಇಲ್ಲಿತನಕ ಯಾವ ಮುಖ್ಯಮಂತ್ರಿಗೂ ನನ್ನ ಸಚಿವ ಮಾಡ್ರಿ ಅಂತಾ ಕೇಳಿಲ್ಲಾ ಎಂದು ತಿಳಿಸಿದರು.

ಅಭಿವೃದ್ಧಿ ಆಧ್ಯತೆ ನೀಡಿ: 

       ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಯಿತಾ ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಸಚಿವರು. ನೋಡಿ ಮಾಧ್ಯಮದವರಿಗೆ ಒಂದು ಹೇಳುತ್ತೇನೆ, ಈ ರಾಜಕೀಯ ಬಗ್ಗೆ ಕಡಿಮೆ ಮಹತ್ವಕೊಡಿ, ಅಭಿವೃದ್ಧಿ ಕಡೆಗೆ ಹೆಚ್ಚಿನ ಮಹತ್ವ ನೀಡಿ ಎಂದು ಮಾಧ್ಯಮದವರಿಗೆ ಕಿವಿಮಾತು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link