ಅಕ್ರಮ ಗೋ ಸಾಗಾಣಿಕೆ ತಡೆಯುವಂತೆ ಮನವಿ…!!

ಹಾವೇರಿ :

      ಕಾನೂನು ಬಾಹಿರವಾಗಿ ನಡೆಯುತ್ತಿರುವ ಗೋ ಸಾಗಾಣಿಕೆ ಹಾಗೂ ಹತ್ಯೆಯನ್ನು ನಿಷೇಧಿಸುವ ಹಾಗೂ ಶಿವು ಉಪ್ಪಾರ ಹತ್ಯೆಯ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿ ಸಿಎಂ ಕುಮಾರಸ್ವಾಮಿಯವರಿಗೆ ಕೇಸರಿ ಯುವ ಸೇನೆ ವತಿಯಿಂದ ಎಸಿ ಮೂಲಕ ಮನವಿ ಸಲ್ಲಿಸಲಾಯಿತು.

     ರಾಜ್ಯದಲ್ಲಿ ಗೋ ಹತ್ಯೆ ಅವ್ಯಾಹತವಾಗಿ ನಡೆದಿದೆ. ಜಾನುವಾರುಗಳನ್ನು ಸಾಗಿಸುವಾಗ ಸಂಪೂರ್ಣ ಕಾನೂನು ಬಾಹಿರವಾಗಿ ಸಾಗಿಸಲಾಗುತ್ತಿದೆ. ಇದೆಲ್ಲ ತಿಳಿದ ಪೋಲಿಸ್ ಇಲಾಖೆ ಕೈ ಕಟ್ಟಿ ಕುಳಿತಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರು, ಪ್ರಾಣಿ ಪ್ರೀಯರು ಹಾಗೂ ರೈತರು ಇಂತಹ ಅಕ್ರಮ ಸಾಗಾಣಿಕೆ ಹಾಗೂ ಗೋ ಹತ್ಯೆಯ ವಿರುದ್ಧ ಅನೇಕ ಬಾರಿ ಹೋರಾಟ ಮಾಡಿದರು. ಸರ್ಕಾರ ಈ ಕುರಿತು ಚಿಂತನೆಯನ್ನೆ ಮಾಡಲಿಲ್ಲ.

     ಗೋ ಹತ್ಯೆ ಎಂಬುದು ಇವತ್ತು ಭಾವನಾತ್ಮಕ ಹಾಗೂ ಅತಿ ಸೂಕ್ಷ್ಮ ವಿಷಯವಾಗಿದ್ದು, ಇದನ್ನು ತಡೆಯಲು ಹೋದ ಅನೇಕರ ಹತ್ಯೆ ನಡೆದಿರುವುದು ತಮಗೆ ತಿಳಿದಿದೆ. ಮೊನ್ನೆಯಷ್ಟೇ ಬೆಳಗಾವಿ ಜಿಲ್ಲೆಯ ಬಾಗೆವಾಡಿ ಎಂಬಲ್ಲಿ 19 ವರ್ಷದ ಶಿವು ಉಪ್ಪಾರ ಎಂಬ ಯುವಕ ಅಕ್ರಮ ಗೋ ಸಾಗಾಣಿಕೆಯನ್ನು ಪ್ರಶ್ನಿಸಿದ ಎಂಬ ಕಾರಣಕ್ಕೆ ಅವನನ್ನು ಹತ್ಯೆ ಮಾಡಿ ಹೊರವಲಯದ ಬಸ್ ನಿಲ್ದಾಣದಲ್ಲಿ ನೇಣು ಹಾಕಲಾಗಿದೆ ಎನ್ನಲಾಗುತ್ತದೆ.

      ಜಾನುವಾರುಗಳನ್ನು ಕಡಿದು ತಿನ್ನುವುದನ್ನು ನಿಮ್ಮ ಮನಸ್ಸು ಒಪ್ಪುವುದಿಲ್ಲ ಎಂಬ ನಂಬಿಕೆಯ ಮೇಲೆ ಅಕ್ರಮ ಗೋ ಸಗಾಣಿಕೆ ಹಾಗೂ ಹತ್ಯೆಯ ಮೇಲೆ ನಿರ್ಬಂಧ ಹೇರಿತ್ತಿರಿ ಎಂದು ತಿಳಿದುಕೊಂಡು ಈ ಒತ್ತಡವನ್ನು ಮಾಡುತ್ತಿದ್ದೇವೆ. ಅಲ್ಲದೇ ಹತನಾದ ಶಿವು ಉಪ್ಪಾರ ಅವರ ಸಾವಿಗೆ ಅನೇಕ ಪುರಾವೆಗಳಿದ್ದು ಕೂಡಲೇ ಹಂತಕರನ್ನು ಬಂಧಿಸಿ ಕಠಿಣ ಶಿಕ್ಷೆ ವಿದಿಸುವಂತಾಗಬೇಕು.

      ಮುಂದಿನ ದಿನಗಳಲ್ಲಿ ಇಂತಹ ಹತ್ಯೆಗಳು ಮರುಕಳಿಸದಂತೆ ಕಾನೂನನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಮಧುಕೇಶ್ವರ. ಪ್ರದೀಪ್ಪ ಮಲ್ಲೂರ.ಹಂದ್ರಾಳ.ರೈತ ಮುಖಂಡ ಅಶೋಕ ಮರ್ಚರಡ್ಡೆರ, ಗುಡ್ಡಪ್ಪ ಭರಡಿ, ರವಿ ಸಣ್ಣಚನ್ನಗೌಡ್ರ, ಸಂತೋಷ ಬೈಲಪ್ಪನವರ, ಕಿರಣ ಅಂಗಡಿ, ಮವೀನ ದೊಡ್ಡಣ್ಣನವರ, ರಾಹುಲ್ ನವಲೆ, ಅನೇಕ ಕಾರ್ಯಕರ್ತರು ಭಾಗವಹಿಸದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link