16249 ಚಾಲಕರಿಗೆ ಸ್ಮಾರ್ಟ್‍ಕಾರ್ಡ್;ರಾಜಣ್ಣ

ಚಿತ್ರದುರ್ಗ:

     ಜಿಲ್ಲೆಯಲ್ಲಿ 16249 ಚಾಲಕರುಗಳಿಗೆ ಸ್ಮಾರ್ಟ್ ಕಾರ್ಡ್‍ಗಳನ್ನು ನೀಡಲಾಗಿದೆ ಎಂದು ಕಾರ್ಮಿಕ ನಿರೀಕ್ಷಕರಾದ ಡಿ.ರಾಜಣ್ಣ ತಿಳಿಸಿದರು.

     ಕರ್ನಾಟಕ ರಾಜ್ಯ ಖಾಸಗಿ ಟ್ಯಾಕ್ಸಿ ವಾಹನ ಚಾಲಕರ ಸಂಘ ಹಾಗೂ ಚಿತ್ರದುರ್ಗ ಲಘು ವಾಹನ ಚಾಲಕರು ಮತ್ತು ಮಾಲೀಕರ ಸಂಘದಿಂದ ತ.ರಾ.ಸು.ರಂಗಮಂದಿರಲ್ಲಿ ಗುರುವಾರ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

      ಅಪಘಾತದಲ್ಲಿ ಮರಣ ಹೊಂದಿದ ಜಿಲ್ಲೆಯ 21 ಚಾಲಕರುಗಳ ಕುಟುಂಬಗಳಿಗೆ 39 ಲಕ್ಷದ 66 ಸಾವಿರದ 773 ರೂ.ಗಳ ಪರಿಹಾರವನ್ನು ನೀಡಲಾಗಿದೆ. ಮೃತ ಚಾಲಕರ ಆರು ಮಕ್ಕಳಿಗೆ ವಿದ್ಯಾರ್ಥಿವೇತನ ಕೊಡುವುದೊಂದು ಬಾಕಿಯಿದೆ. ಶಾಲಾ ದಾಖಲೆಗಳನ್ನು ಪರಿಶೀಲಿಸಿ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಹೇಳಿದರು.

       ಅಪಘಾತ ಜೀವರಕ್ಷಕ ಯೋಜನೆಯಡಿ 1756 ಚಾಲಕರುಗಳಿಗೆ ಪ್ರಥಮ ಚಿಕಿತ್ಸಾ ತರಬೇತಿ ನೀಡಲಾಗಿದೆ. 1936 ಚಾಲಕರುಗಳು ಸ್ಮಾರ್ಟ್ ಕಾರ್ಡ್‍ಗಳಿಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ ಹಂತ ಹಂತವಾಗಿ ಎಲ್ಲಾ ಚಾಲಕರುಗಳಿಗೆ ಸ್ಮಾರ್ಟ್ ಕಾರ್ಡ್‍ಗಳನ್ನು ನೀಡಲಾಗುವುದು, ಚಾಲಕರುಗಳು ತಪ್ಪದೆ ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿಸಿಕೊಂಡು ಸ್ಮಾರ್ಟ್ ಕಾರ್ಡ್‍ಗಳನ್ನು ಪಡೆದುಕೊಂಡರೆ ಅಪಘಾತ ವಿಮೆ ಯೋಜನೆಯಡಿ ಪರಿಹಾರವನ್ನು ಪಡೆದುಕೊಳ್ಳಲು ನೆರವಾಗಲಿದೆ ಎಂದು ಮನವಿ ಮಾಡಿದರು.

      ಅಸಂಘಟಿತ ಕಾರ್ಮಿಕರಿಗೆ ಸೇವಾ ಭದ್ರತೆ ಹಾಗೂ ಜೀವನ ಭದ್ರತೆಗಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. 90 ದಿನಗಳ ಕಾಲ ನಿರಂತರವಾಗಿ ಕಟ್ಟಡ ಕಟ್ಟುವ ಕೆಲಸ ಮಾಡಿರುವ ಕಾರ್ಮಿಕರು ನೊಂದಣಿ ಮಾಡಿಸಿಕೊಂಡಾಗ ಮಾತ್ರ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಬಹುದು. ಸಾರ್ವಜನಿಕರು ಮತ್ತು ಸಮಾಜ ಸರ್ಕಾರದ ಜೊತೆ ಕೈಜೋಡಿಸಿದಾಗ ಮಾತ್ರ ಎಲ್ಲಾ ಯೋಜನೆಗಳು ಫಲಾನುಭವಿಗಳಿಗೆ ತಲುಪುತ್ತದೆ. ಯಾವುದೇ ಕಾರಣಕ್ಕೂ ಹೆಸರುಗಳನ್ನು ನೊಂದಾಯಿಸದೆನಿರ್ಲಕ್ಷಿಸಬೇಡಿ ಎಂದು ಚಾಲಕರು ಹಾಗೂ ಕಾರ್ಮಿಕರುಗಳಲ್ಲಿ ಡಿ.ರಾಜಣ್ಣ ವಿನಂತಿಸಿದರು.

       ಕರ್ನಾಟಕ ರಾಜ್ಯ ಖಾಸಗಿ ಟ್ಯಾಕ್ಸಿ ವಾಹನ ಚಾಲಕರ ಸಂಘದ ರಾಜ್ಯಾಧ್ಯಕ್ಷ ನಿಂಗರಾಜ್‍ಗಾಜಿ ಮಾತನಾಡಿ ವಾಹನ ಚಾಲಕರುಗಳು ಹಾಗೂ ಮಾಲೀಕರುಗಳಿಗೆ ಪೊಲೀಸ್ ಹಾಗೂ ಆರ್.ಟಿ.ಓ. ಇಲಾಖೆಯಿಂದ ಸಾಕಷ್ಟು ಕಿರುಕುಳವಿದೆ. ರಾಜ್ಯಾದ್ಯಂತ ಚಾಲಕರುಗಳು ಮತ್ತು ಮಾಲೀಕರುಗಳೆಲ್ಲಾ ಭಿನ್ನಾಭಿಪ್ರಾಯ ಬಿಟ್ಟು ಒಂದಾಗಿ ರಾಜ್ಯ ಸಮಾವೇಶ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ನಮ್ಮ ಶಕ್ತಿ ಏನೆಂಬುದನ್ನು ತೋರಿಸಬೇಕಿದೆ ಎಂದು ಹೇಳಿದರು.

      ಚಾಲಕರುಗಳು ಮತ್ತು ಮಾಲೀಕರುಗಳಲ್ಲಿ ಎಷ್ಟೆ ವೈಮನಸ್ಸಿದ್ದರೂ ಎಲ್ಲವನ್ನು ಬಿಟ್ಟು ಬೃಹತ್ ಸಮಾವೇಶ ನಡೆಸಿದಾಗ ರಾಜಕಾರಣಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ. ಇಲ್ಲವಾದಲ್ಲಿ ಜೀವನವಿಡಿ ಕಿರುಕುಳ ಅನುಭವಿಸಿಕೊಂಡಿರಬೇಕಾಗುತ್ತದೆ ಎಂದು ಚಾಲಕರು ಮತ್ತು ಮಾಲೀಕರುಗಳನ್ನು ಎಚ್ಚರಿಸಿದರು.

      ಕರ್ನಾಟಕ ರಾಜ್ಯ ಖಾಸಗಿ ಟ್ಯಾಕ್ಸಿ ವಾಹನ ಚಾಲಕರ ಸಂಘದ ಗೌರವಾಧ್ಯಕ್ಷ ಗುರಿಕಾರ್ ಮಾತನಾಡುತ್ತ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ಹೊರಡಿಸಿರುವ ಪ್ರಣಾಳಿಕೆಯಲ್ಲಿ ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರುಗಳಿಗೆ ಅನೇಕ ಭರವಸೆಗಳನ್ನು ನೀಡಿದ್ದಾರೆ. ಟ್ಯಾಕ್ಸಿ ಚಾಲಕರುಗಳ ಸಮಸ್ಯೆ ಬಹಳಷ್ಟಿದೆ.

       ಚಾಲಕರು ಮತ್ತು ಮಾಲೀಕರುಗಳ ಸಾಧಕ-ಬಾಧಕಗಳನ್ನು ಚರ್ಚಿಸಿ ರಾಜ್ಯ ಮಟ್ಟದ ದೊಡ್ಡ ಸಮಾವೇಶ ನಡೆಸಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಮನವಿ ಸಲ್ಲಿಸಲಾಗುವುದೆಂದರು.ಸಂಘದ ಜಿಲ್ಲಾಧ್ಯಕ್ಷ ನಿಂಗೇಶ್‍ಗೌಡ, ರಾಜ್ಯ ಉಪಾಧ್ಯಕ್ಷರುಗಳಾದ ರಾಜಣ್ಣ, ಪಾಪಣ್ಣ, ಜಿಲ್ಲಾ ಪದಾಧಿಕಾರಿಗಳಾದ ಮೋಹನ್‍ಕುಮಾರ್, ದಾದಣ್ಣ, ಭಾಷಣ್ಣ, ಮೋಹನ್‍ರೆಡ್ಡಿ, ವಸಂತ್ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.ರಾಜ್ಯದ ವಿವಿಧ ಜಿಲ್ಲೆಗಳ ವಾಹನ ಚಾಲಕರು ಮತ್ತು ಮಾಲೀಕರುಗಳು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap