ರಸ್ತೆ ಅಪಘಾತದಲ್ಲಿ ಸವಾರ ಸಾವು …!!!

ಬೆಂಗಳೂರು,

       ಬೈಕ್‍ನಲ್ಲಿ ಹೋಗುವಾಗ ಆಯಾತಪ್ಪಿ ರಸ್ತೆಯಲ್ಲಿ ಬಿದ್ದ ಸ್ನೇಹಿತರ ಮೇಲೆ ಲಾರಿ ಹರಿದು ಓರ್ವ ಮೃತಪಟ್ಟರೆ,ಮತ್ತೊಬ್ಬರು ಗಾಯಗೊಂಡಿರುವ ದುರ್ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರದ ಮುಖ್ಯರಸ್ತೆಯಲ್ಲಿ ನಡೆದಿದೆ.ಹೆಚ್‍ಎಎಲ್‍ನ ದಿಗ್ವಿಜಯ್ (24)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಗಾಯಗೊಂಡಿರುವರ ಅಟ್ಟೂರ್ ಲೇಔಟ್ ರನೀಲ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

        ಚಿಕ್ಕಜಾಲದ ಬಳಿ ಕೆಲಸ ಮುಗಿಸಿಕೊಂಡು ಹೋಂದಾ ಶೈನ್ ಬೈಕ್‍ನಲ್ಲಿ ಸ್ನೇಹಿತ ದಿಗ್ವಿಜಯ್‍ನನ್ನು ಹಿಂದೆ ಕೂರಿಸಿಕೊಂಡು ರನಿಲ್ ಶುಕ್ರವಾರ ರಾತ್ರಿ 10ರ ವೇಳೆ ವೇಗವಾಗಿ ಹೋಗುತ್ತಿದ್ದರು. ಮಾರ್ಗ ಮಧ್ಯೆ ಥಣಿಸಂದ್ರ ಮುಖ್ಯರಸ್ತೆಯ ಎ. ನಾರಾಯಣಪುರ ಜಂಕ್ಷನ್‍ನಲ್ಲಿ ಆಯಾ ತಪ್ಪಿ ಬೈಕ್ ಪಲ್ಟಿಯಾಗಿ ಕೆಳಗೆ ಬಿದ್ದಿದ್ದಾರೆ.

       ಈ ವೇಳೆ ಹಿಂದಿನಿಂದ ಬಂದ ಲಾರಿ ಬಲಗಡೆ ಬಿದ್ದ ದಿಗ್ವಿಜಯ್ ಮೇಲೆ ಹರಿದಿದ್ದು, ಆತ ಸ್ಥಳದಲ್ಲೇ ಮೃತಪಟ್ಟರೆ, ಎಡಗಡೆ ಬಿದ್ದ ರನಿಲ್ ಪಾರಾಗಿದ್ದಾರೆ. ಪ್ರಕರಣ ದಾಖಲಿಸಿರುವ ಚಿಕ್ಕಜಾಲ ಸಂಚಾರ ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆಂದು ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link