ಹೊನ್ನಾಳಿ:
ತಾಲೂಕಿನ ದಿಡಗೂರು ಗ್ರಾಮದ ಜಮೀನುಗಳ ಮೇಲೆ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ಲೈನ್ ಬಲಿಗಾಗಿ ಕಾದು ಕುಳಿತಿದೆ. ಹೈಟೆನ್ಷನ್ ವಿದ್ಯುತ್ ಲೈನ್ಗೆ ತಾಗಿಕೊಂಡು ಬೇವಿನಮರ ಬೆಳೆದಿದೆ. ಆದರೆ, ಸಂಬಂಧಪಟ್ಟ ಯಾರೂ ಇತ್ತ ಗಮನಹರಿಸದಿರುವುದು ದುರಂತಕ್ಕೆ ಆಹ್ವಾನವೀಯುವಂತಿದೆ.
ಜಮೀನು, ತೋಟಗಳಿಗೆ ತೆರಳುವ ರೈತರು, ಗ್ರಾಮಸ್ಥರು ಇದೇ ಮಾರ್ಗದಲ್ಲಿ ಪ್ರತಿ ದಿನ ಸಂಚರಿಸುತ್ತಾರೆ. ಗ್ರಾಮದ ಜಾನುವಾರುಗಳು ಇಲ್ಲಿಯೇ ಮೇಯಲು ಬರುತ್ತವೆ. ಮರದ ಮೂಲಕ ವಿದ್ಯುತ್ ಪ್ರವಹಿಸಿ ಆಕಸ್ಮಿಕವಾಗಿ ದಾರಿಹೋಕರಿಗೆ, ಜಾನುವಾರುಗಳಿಗೆ ಅಪಾಯವಾದರೆ ಯಾರೂ ಕೇಳುವವರಿಲ್ಲದಂಥ ದುಸ್ಥಿತಿ ಇದೆ. ಹಾಗಾಗಿ, ಕೆಪಿಟಿಸಿಎಲ್ನವರು ಇತ್ತ ಗಮನಹರಿಸಿ ಮರದ ರೆಂಬೆಗಳನ್ನು ಕಡಿದು ಜನ-ಜಾನುವಾರುಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ರೈತ ಮುಖಂಡ ದಿಡಗೂರು ಪ್ರಭಾಕರ್ ವಿನಂತಿಸಿದ್ದಾರೆ.